• ಹೋಂ
 • »
 • ನ್ಯೂಸ್
 • »
 • Jobs
 • »
 • JOBS: ಬೆಂಗಳೂರಿನಲ್ಲಿ ಲೇಡಿ ವಾರ್ಡನ್ ಹುದ್ದೆ ಖಾಲಿ ಇದೆ- ಆಸಕ್ತರು ಅಪ್ಲೈ ಮಾಡಿ

JOBS: ಬೆಂಗಳೂರಿನಲ್ಲಿ ಲೇಡಿ ವಾರ್ಡನ್ ಹುದ್ದೆ ಖಾಲಿ ಇದೆ- ಆಸಕ್ತರು ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ jobs.saibangalore@gmail.com ಗೆ ಕಳುಹಿಸಬೇಕು.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

Sports Authority of India Recruitment 2023: ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಜೂನಿಯರ್ ಕನ್ಸಲ್ಟೆಂಟ್, ಲೇಡಿ ವಾರ್ಡನ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಇ-ಮೇಲ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ಕ್ರೀಡಾ ಪ್ರಾಧಿಕಾರ
ಹುದ್ದೆಜೂನಿಯರ್ ಕನ್ಸಲ್ಟೆಂಟ್, ಲೇಡಿ ವಾರ್ಡನ್
ಒಟ್ಟು ಹುದ್ದೆ2
ವಿದ್ಯಾರ್ಹತೆಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ
ವೇತನ ಮಾಸಿಕ ₹ 25,000-80,200
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್ 17, 2023

ಹುದ್ದೆಯ ಮಾಹಿತಿ:
ಜೂನಿಯರ್ ಕನ್ಸಲ್ಟೆಂಟ್ -1
ಲೇಡಿ ವಾರ್ಡನ್​ -1


ವಿದ್ಯಾರ್ಹತೆ:
ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸಿಎ, ICMA, ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.


ಇದನ್ನೂ ಓದಿ: NCB Recruitment 2023: ಪಿಯುಸಿ ಪಾಸಾದವರಿಗೆ ಬಂಪರ್ ಉದ್ಯೋಗ- ಈಗಲೇ ಅರ್ಜಿ ಹಾಕಿ


ಜೂನಿಯರ್ ಕನ್ಸಲ್ಟೆಂಟ್ -ಸಿಎ, ICMA, ಫೈನಾನ್ಸ್​/ ಅಕೌಂಟ್ಸ್​/ ಕಾಮರ್ಸ್​ನಲ್ಲಿ ಸ್ನಾತಕೋತ್ತರ ಪದವಿ, ಫೈನಾನ್ಸಿಯಲ್ ಮ್ಯಾನೇಜ್​ಮೆಂಟ್/ ಅಕೌಂಟಿಂಗ್​ನಲ್ಲಿ ಸ್ನಾತಕೋತ್ತರ ಪದವಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ಲೇಡಿ ವಾರ್ಡನ್​ - ಪದವಿ


ವೇತನ:
ಜೂನಿಯರ್ ಕನ್ಸಲ್ಟೆಂಟ್ - ಮಾಸಿಕ ₹ 80,250
ಲೇಡಿ ವಾರ್ಡನ್​ - ಮಾಸಿಕ ₹ 25,000-30,000


ವಯೋಮಿತಿ:
ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 30, 2023ಕ್ಕೆ 45ರಿಂದ 55 ವರ್ಷದೊಳಗಿರಬೇಕು.


ಜೂನಿಯರ್ ಕನ್ಸಲ್ಟೆಂಟ್ - ಗರಿಷ್ಠ 45 ವರ್ಷ
ಲೇಡಿ ವಾರ್ಡನ್​ -45ರಿಂದ 55 ವರ್ಷ
ಉದ್ಯೋಗದ ಸ್ಥಳ:
ಬೆಂಗಳೂರು


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ jobs.saibangalore@gmail.com ಗೆ ಕಳುಹಿಸಬೇಕು.


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ: 08/05/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಮೇ 17, 2023

First published: