Sahitya Akademi Recruitment 2023: ಸಾಹಿತ್ಯ ಅಕಾಡೆಮಿಯು(Sahitya Akademi) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಡೆಪ್ಯುಟಿ ಸೆಕ್ರೆಟರಿ, ಪ್ರೋಗ್ರಾಂ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಬೆಂಗಳೂರು (Bengaluru) ಹಾಗೂ ನವದೆಹಲಿಯಲ್ಲಿ(New Delhi) ಉದ್ಯೋಗ ಮಾಡಲು ಬಯಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಮೇ 1, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ sahitya-akademi.gov.inಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಸಾಹಿತ್ಯ ಅಕಾಡೆಮಿ |
ಹುದ್ದೆ | ಡೆಪ್ಯುಟಿ ಸೆಕ್ರೆಟರಿ, ಪ್ರೋಗ್ರಾಂ ಆಫೀಸರ್ |
ಒಟ್ಟು ಹುದ್ದೆ | 6 |
ವಿದ್ಯಾರ್ಹತೆ | ಸ್ನಾತಕೋತ್ತರ ಪದವಿ, ಪಿಚ್.ಡಿ |
ವೇತನ | ಮಾಸಿಕ ₹ 67,700- 2,08,700 |
ಉದ್ಯೋಗದ ಸ್ಥಳ | ಬೆಂಗಳೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮೇ 1, 2023 (ನಾಳೆ) |
ವಿದ್ಯಾರ್ಹತೆ:
ಡೆಪ್ಯುಟಿ ಸೆಕ್ರೆಟರಿ- ಸ್ನಾತಕೋತ್ತರ ಪದವಿ, ಪಿಚ್.ಡಿ
ರೀಜನಲ್ ಸೆಕ್ರೆಟರಿ- ಸ್ನಾತಕೋತ್ತರ ಪದವಿ, ಪಿಚ್.ಡಿ
ಪ್ರೋಗ್ರಾಂ ಆಫೀಸರ್- ಪದವಿ, ಸ್ನಾತಕೋತ್ತರ ಪದವಿ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಡೆಪ್ಯುಟಿ ಸೆಕ್ರೆಟರಿ- ಮಾಸಿಕ ₹ 67,700- 2,08,700
ರೀಜನಲ್ ಸೆಕ್ರೆಟರಿ- ಮಾಸಿಕ ₹ 67,700- 2,08,700
ಪ್ರೋಗ್ರಾಂ ಆಫೀಸರ್- ಮಾಸಿಕ ₹ 56,100- 1,77,400
ಉದ್ಯೋಗದ ಸ್ಥಳ:
ಕೊಲ್ಕತ್ತಾ, ಮುಂಬೈ, ಬೆಂಗಳೂರು, ನವದೆಹಲಿ
ಇದನ್ನೂ ಓದಿ:Work From Home Jobs: ಕ್ಯಾಪ್ಜೆಮಿನಿ ಕಂಪನಿಯಲ್ಲಿ ವರ್ಕ್ ಫ್ರಂ ಹೋಂ ಅವಕಾಶ- ಆಸಕ್ತರು ಈಗಲೇ ಅಪ್ಲೈ ಮಾಡಿ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಕಾರ್ಯದರ್ಶಿ
ಸಾಹಿತ್ಯ ಅಕಾಡೆಮಿ
ರವೀಂದ್ರ ಭವನ
35 ಫಿರೋಜ್‌ಶಾ ರಸ್ತೆ
ನವದೆಹಲಿ-110001
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 1, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ