ಕೇಂದ್ರ ಸರ್ಕಾರಿ ಹುದ್ದೆಗಳ (Central Govt Jobs) ನೇಮಕಾತಿಗಾಗಿ ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ಒಂದೊಳ್ಳೆಯ ಅವಕಾಶ ಇಲ್ಲಿದೆ. ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್ ಲಿಮಿಟೆಡ್ (REC Limited) ನೇಮಕಾತಿಗೆ ಮುಂದಾಗಿದೆ. ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಅಧಿಸೂಚನೆ ಪ್ರಕಾರ ಒಟ್ಟು 125 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಮಾರ್ಚ್ 15 ರಂದು ನೋಟಿಫಿಕೇಷನ್ ಹೊರಡಿಸಲಾಗಿದೆ. ಮುಂದಿನ ತಿಂಗಳಾದ ಏಪ್ರಿಲ್ 15ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್ ಅರ್ಜಿಯನ್ನು ಅಧಿಕೃತ ವೆಬ್‌ಸೈಟ್ https://recindia.nic.in ಗೆ ಭೇಟಿ ನೀಡುವ ಮೂಲಕ ಸಲ್ಲಿಸಬೇಕು.
ಹುದ್ದೆಗಳು | ಹುದ್ದೆಗಳ ಸಂಖ್ಯೆ | ಸಂಬಳ |
ಜನರಲ್ ಮ್ಯಾನೇಜರ್ (ಎಂಜಿನಿಯರಿಂಗ್) | 2 | ₹ 1,20,000- 2,80,000 |
ಮ್ಯಾನೇಜರ್ (ಎಂಜಿನಿಯರಿಂಗ್) | 2 | ₹ 80,000- 2,20,000 |
ಉಪ ವ್ಯವಸ್ಥಾಪಕರು (ಎಂಜಿನಿಯರಿಂಗ್) | 2 | ₹ 70,000- 2,00,000 |
ಸಹಾಯಕ ವ್ಯವಸ್ಥಾಪಕ (ಎಂಜಿನಿಯರಿಂಗ್) | 2 | ₹ 60,000- 1,80,000 |
ಆಫೀಸರ್ (ಎಂಜಿನಿಯರಿಂಗ್) | 53 | ₹ 50,000- ₹ 1,60,00 |
ಅಧಿಕಾರಿ (ಎಫ್&ಎ) | 34 | ₹ 50,000- ₹ 1,60,00 |
ಇತರೆ ಹುದ್ದೆಗಳು | 30 | ಹುದ್ದೆಗೆ ಅನುಸಾರ ವೇತನ ನಿಗದಿ |
ಆಫೀಸರ್ ಫೈನಾನ್ಸ್ ಮತ್ತು ಅಕೌಂಟ್ಸ್ ಹುದ್ದೆಗೆ ಅಭ್ಯರ್ಥಿಗಳು ಚಾರ್ಟರ್ಡ್ ಅಕೌಂಟೆನ್ಸಿ / ಕಾಸ್ಟ್ ಅಂಡ್ ಮ್ಯಾನೇಜ್‌ಮೆಂಟ್ ಅಕೌಂಟೆನ್ಸಿ ಓದಿರಬೇಕು. ಉಳಿದ ಎಲ್ಲಾ ಹುದ್ದೆಗಳಿಗೆ, ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ (ಪವರ್)/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ ಪವರ್ ಇಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಮಾಡಿರಬೇಕು.
ಇದನ್ನೂ ಓದಿ: Central Jobs: ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ; ಬರೋಬ್ಬರಿ 84,866 ಹುದ್ದೆಗಳ ನೇಮಕಕ್ಕೆ ಮುಂದಾದ ಮೋದಿ ಸರ್ಕಾರ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ : 15-03-2023
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 15-04-2023
ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ನೋಟಿಫಿಕೇಷನ್ಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆಯ್ಕೆ ಹೇಗೆ?
ಲಿಖಿತ ಪರೀಕ್ಷೆ
ಸಂದರ್ಶನ
ಶೇ.85ರಷ್ಟು ಅಂಕಗಳಿಗೆ ಪರೀಕ್ಷೆ ಬರೆಯಬೇಕಾಗುತ್ತೆ, ಉಳಿದ ಶೇ.15ರಷ್ಟು ಅಂಕಗಳಿಗೆ ಸಂದರ್ಶನ ನಡೆಸಲಾಗುತ್ತೆ.
ಮೀಸಲಾತಿ
SC/ST, OBC ಮೀಸಲಾತಿ ಅನ್ವಯಿಸುತ್ತದೆ. ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅನ್ವಯಿಸುವ ಎಲ್ಲಾ ಮೀಸಲಾತಿ ನಿಯಮಗನ್ನು ಈ ನೇಮಕಾತಿಯಲ್ಲಿ ಪಾಲಿಸಲಾಗುತ್ತದೆ.
ನಿಯಮಗಳು
ಭಾರತೀಯ ನಾಗರೀಕರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಸರ್ಕಾರದ ಮಾನ್ಯತೆ ಹೊಂದಿರುವ ಶಿಕ್ಷಣ ಸಂಸ್ಥೆಯಿಂದ ಮಾತ್ರ ಪದವಿ ಪೂರ್ಣಗೊಳಿಸಿರಬೇಕು.
ಸರ್ಕಾರಿ ನಿಯಮಗಳ ಪ್ರಕಾರ SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ