Post Office Recruitment 2023: ಭಾರತೀಯ ಅಂಚೆ ಇಲಾಖೆ(India Postal Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 58 ಸ್ಟಾಫ್ ಕಾರ್ ಡ್ರೈವರ್(Staff Car Driver) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 31, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಸಕ್ತರು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಹಾಕಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಬೇಗನೆ ಅರ್ಜಿ ಹಾಕಿ ಪೋಸ್ಟ್ ಆಫೀಸ್ ಉದ್ಯೋಗ ಪಡೆದುಕೊಳ್ಳಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಭಾರತೀಯ ಅಂಚೆ ಇಲಾಖೆ |
ಹುದ್ದೆ | ಸ್ಟಾಫ್ ಕಾರ್ ಡ್ರೈವರ್ |
ಒಟ್ಟು ಹುದ್ದೆ | 58 |
ವಿದ್ಯಾರ್ಹತೆ | 10ನೇ ತರಗತಿ |
ವೇತನ | ಮಾಸಿಕ ₹19,900-63,200 |
ಉದ್ಯೋಗದ ಸ್ಥಳ | ತಮಿಳುನಾಡು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 31, 2023 |
ಇದನ್ನೂ ಓದಿ: KPSC Recruitment 2023: ಕಾಮರ್ಸ್ ಪದವೀಧರರಿಗೆ ಉದ್ಯೋಗಾವಕಾಶ- ತಿಂಗಳಿಗೆ 52 ಸಾವಿರ ಸಂಬಳ
ವಿದ್ಯಾರ್ಹತೆ:
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.
ವಯೋಮಿತಿ:
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 31, 2023ಕ್ಕೆ ಕನಿಷ್ಠ 18 ವರ್ಷ ಮತ್ತು 27 ವರ್ಷ ಮೀರಿರಬಾರದು.
ವೇತನ:
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹19,900-63,200 ಸಂಬಳ ಕೊಡಲಾಗುತ್ತದೆ.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
ಮಾಜಿ ಸೈನಿಕ ಅಭ್ಯರ್ಥಿಗಳು- 3 ವರ್ಷ
ಮಾಜಿ ಸೈನಿಕ (SC/ST) ಅಭ್ಯರ್ಥಿಗಳು- 8 ವರ್ಷ
ಮಾಜಿ ಸೈನಿಕ (OBC) ಅಭ್ಯರ್ಥಿಗಳು- 6 ವರ್ಷ
ಇದನ್ನೂ ಓದಿ: Government Job: ಈ ಹುದ್ದೆಗೆ ಇವತ್ತೇ ಅರ್ಜಿ ಹಾಕಿ- ಸರ್ಕಾರಿ ನೌಕರಿ ನಿಮ್ಮದಾಗಿಸಿಕೊಳ್ಳಿ
ಆಯ್ಕೆ ಪ್ರಕ್ರಿಯೆ:
ಡ್ರೈವಿಂಗ್ ಟೆಸ್ಟ್
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಸೀನಿಯರ್ ಮ್ಯಾನೇಜರ್ (JAG)
ಮೇಲ್ ಮೋಟಾರ್ ಸರ್ವೀಸ್
ನಂ-37
ಗ್ರೀಮ್ಸ್ ರಸ್ತೆ
ಚೆನ್ನೈ- 600006
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 31, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ