India Post Office Recruitment 2023: ಪೋಸ್ಟ್ ಆಫೀಸ್ ಕೆಲಸ(Post Office Job) ಹುಡುಕುತ್ತಿರುವವರಿಗೆ ಸರ್ಕಾರ ಇಲ್ಲೊಂದು ಗುಡ್ ನ್ಯೂಸ್(Good News) ನೀಡಿದೆ. 2023ರಲ್ಲಿ ಅನೇಕ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಲಿದೆ. ಕೇಂದ್ರ ಸರ್ಕಾರದ ಉದ್ಯೋಗ(Central Government Job) ಬೇಕು ಎನ್ನುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟ್ಮ್ಯಾನ್, ಮೇಲ್ ಗಾರ್ಡ್ ಮತ್ತು ಇತರ ಹಲವು ಪೋಸ್ಟ್ಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಂಡಿಯಾ ಪೋಸ್ಟ್ ವೆಬ್ಸೈಟ್ indiapost.gov.in ಗೆ ಭೇಟಿ ನೀಡಬಹುದು.
ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಬೇಕು. ಈ ನೇಮಕಾತಿಯ ಅಡಿಯಲ್ಲಿ ಬರೋಬ್ಬರಿ 98,083 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ದೇಶಾದ್ಯಂತ 23 ಪೋಸ್ಟಲ್ ಸರ್ಕಲ್ಗಳಲ್ಲಿ ನೇಮಕಾತಿ ನಡೆಯುತ್ತದೆ. ಭಾರತೀಯ ಅಂಚೆ ನೇಮಕಾತಿ ಅಧಿಸೂಚನೆ ಪ್ರಕಾರ, ಪೋಸ್ಟ್ಮ್ಯಾನ್, ಮೇಲ್ ಗಾರ್ಡ್, ಎಂಟಿಎಸ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸನ್ನು 18 ವರ್ಷಗಳು ಮತ್ತು ಗರಿಷ್ಠ 32 ವರ್ಷಗಳು ಎಂದು ನಿಗದಿಪಡಿಸಿದೆ. 10ನೇ ತರಗತಿ ಮತ್ತು ಪಿಯುಸಿ ಪಾಸಾಗಿರುವ ಯಾವುದೇ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಪ್ಲೈ ಮಾಡಬಹುದು.
ಇದನ್ನೂ ಓದಿ: BSNL Recruitment 2023: 11 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ BSNL- ತಿಂಗಳಿಗೆ 40,000 ಸಂಬಳ
ಸಂಸ್ಥೆ | ಭಾರತೀಯ ಅಂಚೆ ಇಲಾಖೆ |
ಹುದ್ದೆ | ಪೋಸ್ಟ್ಮ್ಯಾನ್, ಮೇಲ್ ಗಾರ್ಡ್, ಎಂಟಿಎಸ್ |
ಒಟ್ಟು ಹುದ್ದೆ | 98,083 |
ಪೋಸ್ಟಲ್ ಸರ್ಕಲ್ಗಳು | 23 |
ಆಯ್ಕೆ ಪ್ರಕ್ರಿಯೆ | ಮೆರಿಟ್ ಲಿಸ್ಟ್ |
ವಿದ್ಯಾರ್ಹತೆ | 10ನೇ ತರಗತಿ, ಪಿಯುಸಿ |
ವಯಸ್ಸು | 18-32 ವರ್ಷ |
ಅಧಿಕೃತ ವೆಬ್ಸೈಟ್ | indiapost.gov.in |
ಪೋಸ್ಟ್ಮ್ಯಾನ್- 59,099
ಮೇಲ್ ಗಾರ್ಡ್- 1,445
ಮಲ್ಟಿ ಟಾಸ್ಕಿಂಗ್ ಸ್ಟಾಫ್- 37,539 ಹುದ್ದೆಗಳು
10ನೇ ತರಗತಿ ಮತ್ತು ಪಿಯುಸಿ ಪಾಸಾಗಿರುವ ಅಭ್ಯರ್ಥಿಗಳು ದೊಡ್ಡ ಮೊತ್ತದ ಸಂಬಳದೊಂದಿಗೆ ಈ ಜಾಬ್ ಮಾಡಬಹುದು.
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು 18-32 ವರ್ಷದೊಳಗಿರಬೇಕು. SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಇದನ್ನೂ ಓದಿ: ISRO ನೇಮಕಾತಿ- 526 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರು ಅಪ್ಲೈ ಮಾಡಿ
ಇಂಡಿಯಾ ಪೋಸ್ಟ್ ಆಫೀಸ್ ಖಾಲಿ ಹುದ್ದೆಗಳ ವಿವರ, ಆನ್ಲೈನ್ ನೋಂದಣಿ ಮತ್ತು ಇತರ ಪ್ರಮುಖ ದಿನಾಂಕಗಳನ್ನು ಅಧಿಕೃತ ಅಧಿಸೂಚನೆಯ PDF ನೊಂದಿಗೆ ಈ ವಾರದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ