Passport Office Recruitment 2023: ಕೇಂದ್ರೀಯ ಪಾಸ್ಪೋರ್ಟ್ ಸಂಸ್ಥೆಯಲ್ಲಿ(The Central Passport Organization) ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 8 ಡೆಪ್ಯುಟಿ ಪಾಸ್ಪೋರ್ಟ್ ಆಫೀಸರ್(Deputy Passport Officer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಯ ಪಾಸ್ಪೋರ್ಟ್ ಸಂಸ್ಥೆಯ ಅಧಿಕೃತ ವೆಬ್ಸೈಟ್ passportindia.gov.in ಗೆ ಭೇಟಿ ನೀಡಬಹುದು. ನವೆಂಬರ್ 30ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಕೊನೆಯ ದಿನಾಂಕವನ್ನು ಇನ್ನೂ ಸಹ ತಿಳಿಸಿಲ್ಲ. ಅಭ್ಯರ್ಥಿಗಳು ಕೂಡಲೇ ಅರ್ಜಿ ಹಾಕಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕೇಂದ್ರೀಯ ಪಾಸ್ಪೋರ್ಟ್ ಸಂಸ್ಥೆ |
ಹುದ್ದೆ | ಡೆಪ್ಯುಟಿ ಪಾಸ್ಪೋರ್ಟ್ ಆಫೀಸರ್ |
ಒಟ್ಟು ಹುದ್ದೆ | 8 |
ವೇತನ | ತಿಂಗಳಿಗೆ 67,700-2,08,700 |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಕೆ ಬಗೆ | ಆಫ್ಲೈನ್ |
ಶೈಕ್ಷಣಿಕ ಅರ್ಹತೆ:
ಕೇಂದ್ರೀಯ ಪಾಸ್ಪೋರ್ಟ್ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಶೇ.50ರಷ್ಟು ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: IISc ಬೆಂಗಳೂರಿನಲ್ಲಿ 76 ಹುದ್ದೆಗಳಿಗೆ ಅರ್ಜಿ ಆಹ್ವಾನ-69,000 ಸಂಬಳ, ಪದವೀಧರರು Apply ಮಾಡಿ
ಪೇರೆಂಟ್ ಕೇಡರ್ ಅಥವಾ ಡಿಪಾರ್ಟ್ಮೆಂಟ್ನಲ್ಲಿ ನಿಯಮಿತ ಹುದ್ದೆಯಲ್ಲಿ ಕೆಲಸ ಮಾಡಿರಬೇಕು.
ಅಥವಾ ಪೇ ಮ್ಯಾಟ್ರಿಕ್ಸ್ ಲೆವೆಲ್ 10 ರ ಅಡಿಯಲ್ಲಿ 5 ವರ್ಷಗಳ ಕೆಲಸದ ಅನುಭವವನ್ನು ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು.
ಪಾಸ್ಪೋರ್ಟ್/ ಕಾನ್ಸುಲರ್/ ವಲಸೆ/ ಆಡಳಿತ/ ಹಣಕಾಸು/ ಖಾತೆಗಳು/ ವಿಜಿಲೆನ್ಸ್ ಕೆಲಸ/ ಸಾರ್ವಜನಿಕ ಕುಂದುಕೊರತೆ ಇಲಾಖೆಯಲ್ಲಿ 5 ವರ್ಷಗಳ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವೇತನ:
ಕೇಂದ್ರೀಯ ಪಾಸ್ಪೋರ್ಟ್ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 67,700-2,08,700 ರೂ.ರವರೆಗೆ ಸಂಬಳ ಕೊಡಲಾಗುತ್ತದೆ.
ವಯೋಮಿತಿ:
ಕೇಂದ್ರೀಯ ಪಾಸ್ಪೋರ್ಟ್ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 56 ವರ್ಷ ಮೀರಿರಬಾರದು.
ಇದನ್ನೂ ಓದಿ: IIAP Recruitment 2023: ಎಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಜ.17ಕ್ಕೆ ಸಂದರ್ಶನ- ಬೆಂಗಳೂರಿನಲ್ಲಿ ಕೆಲಸ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಕಳುಹಿಸಬೇಕು. ಇದರೊಂದಿಗೆ, ಅಧೀನ ಕಾರ್ಯದರ್ಶಿ/ ಉನ್ನತ ಅಧಿಕಾರಿಗಳು ಶಿಫಾರಸ್ಸು ಮಾಡಿದ ಕಳೆದ 5 ವರ್ಷಗಳ APARನ ಪ್ರತಿಯನ್ನು ಅರ್ಜಿಯೊಂದಿಗೆ ಸೇರಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ