NWDA Recruitment 2023: ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ(National Water Development Agency) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 21 ಡೈರೆಕ್ಟರ್, ಸೂಪರಿಂಟೆಂಡಿಂಗ್ ಇಂಜಿನಿಯರ್ ಹುದ್ದೆಗಳು(Director, Superintending Engineer posts) ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಫೆಬ್ರವರಿ 24, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ |
ಹುದ್ದೆ | ಡೈರೆಕ್ಟರ್, ಸೂಪರಿಂಟೆಂಡಿಂಗ್ ಇಂಜಿನಿಯರ್ |
ಒಟ್ಟು ಹುದ್ದೆ | 21 |
ವಿದ್ಯಾರ್ಹತೆ | ಎಂಜಿನಿಯರಿಂಗ್ |
ವೇತನ | ಮಾಸಿಕ ₹ 1,23,100-20,15,900 |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 24, 2023 |
ವಿದ್ಯಾರ್ಹತೆ:
ಡೈರೆಕ್ಟರ್ (ಟೆಕ್ನಿಕಲ್), ಸೂಪರಿಂಟೆಂಡಿಂಗ್ ಇಂಜಿನಿಯರ್- ಸಿವಿಲ್ ಎಂಜಿನಿಯರಿಂಗ್
ಡೈರೆಕ್ಟರ್ (MDU)- ಸಿವಿಲ್ ಎಂಜಿನಿಯರಿಂಗ್, ಗಣಿತ, ಕಂಪ್ಯೂಟರ್, ಭೌತಶಾಸ್ತ್ರ, ಸ್ಟ್ಯಾಟಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ, ಜಲವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ
ಡೆಪ್ಯುಟಿ ಡೈರೆಕ್ಟರ್/ ಎಕ್ಸಿಕ್ಯೂಟಿವ್ ಎಂಜಿನಿಯರ್- ಡಿಪ್ಲೋಮಾ, ಸಿವಿಲ್ ಎಂಜಿನಿಯರಿಂಗ್
ವಯೋಮಿತಿ:
ಫೆಬ್ರವರಿ 24, 2023ಕ್ಕೆ ಗರಿಷ್ಠ 56 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಡೈರೆಕ್ಟರ್ (ಟೆಕ್ನಿಕಲ್)- ಮಾಸಿಕ ₹ 1,23,100-20,15,900
ಡೈರೆಕ್ಟರ್ (MDU)- ಮಾಸಿಕ ₹ 78,800-2,09,200
ಸೂಪರಿಂಟೆಂಡಿಂಗ್ ಇಂಜಿನಿಯರ್ - ಮಾಸಿಕ ₹ 78,800-2,09,200
ಡೆಪ್ಯುಟಿ ಡೈರೆಕ್ಟರ್/ ಎಕ್ಸಿಕ್ಯೂಟಿವ್ ಎಂಜಿನಿಯರ್- ಮಾಸಿಕ ₹ 67,700-2,08,700
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26/12/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 24, 2023
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಉಪ ನಿರ್ದೇಶಕರು (ಆಡಳಿತ)
ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ
18-20
ಸಮುದಾಯ ಕೇಂದ್ರ, ಸಾಕೇತ್
ನವದೆಹಲಿ - 110017
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ