NWDA Recruitment 2023: ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (National Water Development Agency ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 40 ಜೂನಿಯರ್ ಎಂಜಿನಿಯರ್, ಸ್ಟೆನೋಗ್ರಾಫರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಏಪ್ರಿಲ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ |
ಹುದ್ದೆ | ಜೂನಿಯರ್ ಎಂಜಿನಿಯರ್, ಸ್ಟೆನೋಗ್ರಾಫರ್ |
ಒಟ್ಟು ಹುದ್ದೆ | 40 |
ವಿದ್ಯಾರ್ಹತೆ | ಐಟಿಐ, ಡಿಪ್ಲೊಮಾ, ಪದವಿ |
ವೇತನ | ಮಾಸಿಕ ₹ 35,400-1,12,400 |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 17, 2023 |
ಇದನ್ನೂ ಓದಿ: Banking Jobs: ಸೆಂಟ್ರಲ್ ಬ್ಯಾಂಕ್ನಲ್ಲಿ 5000 ಅಪ್ರೆಂಟಿಸ್ ಹುದ್ದೆಗಳ ನೇಮಕ- ಡಿಗ್ರಿ ಪಾಸಾದವರು ಅಪ್ಲೈ ಮಾಡಿ
ವಿದ್ಯಾರ್ಹತೆ:
ಜೂನಿಯರ್ ಎಂಜಿನಿಯರ್ (ಸಿವಿಲ್)- ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ
ಜೂನಿಯರ್ ಅಕೌಂಟ್ಸ್ ಆಫೀಸರ್ - ಕಾಮರ್ಸ್ ಪದವಿ
ಡ್ರಾಫ್ಟ್ಸ್ಮ್ಯಾನ್ ಗ್ರೇಡ್-III- ಐಟಿಐ, ಡಿಪ್ಲೊಮಾ
ಅಪ್ಪರ್ ಡಿವಿಶನ್ ಕ್ಲರ್ಕ್- ಡಿಗ್ರಿ
ಸ್ಟೆನೋಗ್ರಾಫರ್ ಗ್ರೇಡ್- II- ಪಿಯುಸಿ
ಲೋವರ್ ಡಿವಿಶನ್ ಕ್ಲರ್ಕ್- ಪಿಯುಸಿ
ವಯೋಮಿತಿ:
ಜೂನಿಯರ್ ಎಂಜಿನಿಯರ್ (ಸಿವಿಲ್)- 18 ರಿಂದ 27 ವರ್ಷ
ಜೂನಿಯರ್ ಅಕೌಂಟ್ಸ್ ಆಫೀಸರ್ - 21 ರಿಂದ 30 ವರ್ಷ
ಡ್ರಾಫ್ಟ್ಸ್ಮ್ಯಾನ್ ಗ್ರೇಡ್-III- 18 ರಿಂದ 27 ವರ್ಷ
ಅಪ್ಪರ್ ಡಿವಿಶನ್ ಕ್ಲರ್ಕ್- 18 ರಿಂದ 27 ವರ್ಷ
ಸ್ಟೆನೋಗ್ರಾಫರ್ ಗ್ರೇಡ್- II- 18 ರಿಂದ 27 ವರ್ಷ
ಲೋವರ್ ಡಿವಿಶನ್ ಕ್ಲರ್ಕ್- 18 ರಿಂದ 27 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PWBD (UR) ಅಭ್ಯರ್ಥಿಗಳು- 10 ವರ್ಷ
PWBD (OBC) ಅಭ್ಯರ್ಥಿಗಳು- 13 ವರ್ಷ
PWBD (SC/ST) ಅಭ್ಯರ್ಥಿಗಳು- 15 ವರ್ಷ
ಇದನ್ನೂ ಓದಿ: KITS Recruitment 2023: ಕರ್ನಾಟಕ ಸರ್ಕಾರ ಅರ್ಜಿ ಆಹ್ವಾನಿಸಿರುವ 7 ಹುದ್ದೆಗಳಿಗೆ ಈಗಲೇ ಅಪ್ಲೈ ಮಾಡಿ- 45 ಸಾವಿರ ಸಂಬಳ
ವೇತನ:
ಜೂನಿಯರ್ ಎಂಜಿನಿಯರ್ (ಸಿವಿಲ್)- ಮಾಸಿಕ ₹ 35,400-1,12,400
ಜೂನಿಯರ್ ಅಕೌಂಟ್ಸ್ ಆಫೀಸರ್ -ಮಾಸಿಕ ₹ 35,400-1,12,400
ಡ್ರಾಫ್ಟ್ಸ್ಮ್ಯಾನ್ ಗ್ರೇಡ್-III- ಮಾಸಿಕ ₹ 25,500-81,100
ಅಪ್ಪರ್ ಡಿವಿಶನ್ ಕ್ಲರ್ಕ್- ಮಾಸಿಕ ₹ 25,500-81,100
ಸ್ಟೆನೋಗ್ರಾಫರ್ ಗ್ರೇಡ್- II- ಮಾಸಿಕ ₹ 25,500-81,100
ಲೋವರ್ ಡಿವಿಶನ್ ಕ್ಲರ್ಕ್- ಮಾಸಿಕ ₹ 19,900-63,200
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 17, 2023
ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ಐಡಿ helpdesk.nwda.recruitment@gmail.com ಅಥವಾ ಮೊಬೈಲ್ ನಂಬರ್ +919453819323 ಗೆ ಸಂಪರ್ಕಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ