• ಹೋಂ
  • »
  • ನ್ಯೂಸ್
  • »
  • Jobs
  • »
  • Job Search: ಡಿಗ್ರಿ ಪಾಸಾಗಿ ಜಾಬ್ ಸರ್ಚ್ ಮಾಡ್ತಿದ್ದೀರಾ? ಮಂಗಳೂರಿನಲ್ಲಿದೆ 2 ಲಕ್ಷ ಸಂಬಳದ ಉದ್ಯೋಗ

Job Search: ಡಿಗ್ರಿ ಪಾಸಾಗಿ ಜಾಬ್ ಸರ್ಚ್ ಮಾಡ್ತಿದ್ದೀರಾ? ಮಂಗಳೂರಿನಲ್ಲಿದೆ 2 ಲಕ್ಷ ಸಂಬಳದ ಉದ್ಯೋಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೇ 9, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​​(Offline)​ & ಆನ್​ಲೈನ್ (Online) 2 ವಿಧಾನಗಳಲ್ಲಿಯೂ ಅರ್ಜಿ ಹಾಕಬಹುದು.

  • News18 Kannada
  • 3-MIN READ
  • Last Updated :
  • Karnataka, India
  • Share this:




NMPT Recruitment 2023: ಮಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್​ ನ್ಯೂಸ್ ಇದೆ. ನವ ಮಂಗಳೂರು ಬಂದರು ಟ್ರಸ್ಟ್(New Mangalore Port Trust )ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ​ಒಟ್ಟು 1 ಸೀನಿಯರ್ ಡೆಪ್ಯುಟಿ ಟ್ರಾಫಿಕ್ ಮ್ಯಾನೇಜರ್ (Senior Deputy Traffic Manager) ಹುದ್ದೆ ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಮಂಗಳೂರಿನಲ್ಲಿ (Mangalore) ಉದ್ಯೋಗ ಹುಡುಕುತ್ತಿರುವ ಆಸಕ್ತರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಅಭ್ಯರ್ಥಿಗಳು ತಡಮಾಡದೇ ಈ ಕೂಡಲೇ ಅರ್ಜಿ ಹಾಕಿ. ಮೇ 9, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​​(Offline)​ & ಆನ್​ಲೈನ್ (Online) 2 ವಿಧಾನಗಳಲ್ಲಿಯೂ ಅರ್ಜಿ ಹಾಕಬಹುದು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆನವ ಮಂಗಳೂರು ಬಂದರು ಟ್ರಸ್ಟ್
ಹುದ್ದೆಸೀನಿಯರ್ ಡೆಪ್ಯುಟಿ ಟ್ರಾಫಿಕ್ ಮ್ಯಾನೇಜರ್
ಒಟ್ಟು ಹುದ್ದೆ1
ವಿದ್ಯಾರ್ಹತೆಪದವಿ
ವೇತನಮಾಸಿಕ ₹ 80,000- 2,20,000
ಉದ್ಯೋಗದ ಸ್ಥಳಮಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಮೇ 9, 2023

ವಿದ್ಯಾರ್ಹತೆ:
ನವ ಮಂಗಳೂರು ಬಂದರು ಟ್ರಸ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.



 



ವಯೋಮಿತಿ:ನವ ಮಂಗಳೂರು ಬಂದರು ಟ್ರಸ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 42 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಇದನ್ನೂ ಓದಿ:UPSC Recruitment 2023: ಯುಪಿಎಸ್​ಸಿ ನೇಮಕಾತಿ- 1312 ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ


ವೇತನ:
ಮಾಸಿಕ ₹ 80,000- 2,20,000


ಉದ್ಯೋಗದ ಸ್ಥಳ:
ಮಂಗಳೂರು


ಆಯ್ಕೆ ಪಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ನವ ಮಂಗಳೂರು ಬಂದರು ಪ್ರಾಧಿಕಾರ
ಪಣಂಬೂರು
ಮಂಗಳೂರು
ಕರ್ನಾಟಕ-575010


ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02/03/2023
ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 9, 2023
ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 24, 2023



top videos
    First published: