NITM Belagavi Recruitment 2023: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ ಬೆಳಗಾವಿ(National Institute of Traditional Medicine) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಸೈಂಟಿಸ್ಟ್- ಬಿ, ಸ್ಟಾಟಿಸ್ಟಿಕಲ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರಾಯಚೂರಿನಲ್ಲಿ(Raichur) ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಇದೇ ಫೆಬ್ರವರಿ 14, 2023 ಕೊನೆಯ ದಿನವಾಗಿದೆ(Last Date). ಅಭ್ಯರ್ಥಿಗಳು ತಮ್ಮ ರೆಸ್ಯೂಮ್ನ್ನು ಇ-ಮೇಲ್ ಮಾಡಬೇಕು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್- ಬೆಳಗಾವಿ |
ಹುದ್ದೆ | ಸೈಂಟಿಸ್ಟ್- ಬಿ, ಸ್ಟಾಟಿಸ್ಟಿಕಲ್ ಅಸಿಸ್ಟೆಂಟ್ |
ಒಟ್ಟು ಹುದ್ದೆ | 5 |
ವಿದ್ಯಾರ್ಹತೆ | ಪದವಿ |
ವೇತನ | ಮಾಸಿಕ ₹ 61,000 |
ಉದ್ಯೋಗದ ಸ್ಥಳ | ರಾಯಚೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 14, 2023 |
ವಿದ್ಯಾರ್ಹತೆ:
ಸೈಂಟಿಸ್ಟ್- ಬಿ (ಮೆಡಿಕಲ್)- ಎಂಬಿಬಿಎಸ್, ಎಂಡಿ
ಸ್ಟಾಟಿಸ್ಟಿಕಲ್ ಅಸಿಸ್ಟೆಂಟ್- ಪದವಿ, ಎಂಎಸ್ಸಿ
ಫೀಲ್ಡ್ ಇನ್ವೆಸ್ಟಿಗೇಟರ್- ಪದವಿ
ಸೈಕಾಲಜಿಸ್ಟ್- ಪದವಿ, ಸ್ನಾತಕೋತ್ತರ ಪದವಿ
ಇದನ್ನೂ ಓದಿ: ITBPಯಲ್ಲಿ 297 ಹುದ್ದೆಗಳು ಖಾಲಿ ಇವೆ- ತಿಂಗಳಿಗೆ 2 ಲಕ್ಷ ಸಂಬಳ, ಈಗಲೇ Apply ಮಾಡಿ
ವಯೋಮಿತಿ:
ಸೈಂಟಿಸ್ಟ್- ಬಿ (ಮೆಡಿಕಲ್)- 35 ವರ್ಷ
ಸ್ಟಾಟಿಸ್ಟಿಕಲ್ ಅಸಿಸ್ಟೆಂಟ್- 30 ವರ್ಷ
ಫೀಲ್ಡ್ ಇನ್ವೆಸ್ಟಿಗೇಟರ್- 33-35 ವರ್ಷ
ಸೈಕಾಲಜಿಸ್ಟ್- 33 ವರ್ಷ
ವೇತನ:
ಸೈಂಟಿಸ್ಟ್- ಬಿ (ಮೆಡಿಕಲ್)- ಮಾಸಿಕ ₹ 61,000
ಸ್ಟಾಟಿಸ್ಟಿಕಲ್ ಅಸಿಸ್ಟೆಂಟ್- ಮಾಸಿಕ ₹ 31,000
ಫೀಲ್ಡ್ ಇನ್ವೆಸ್ಟಿಗೇಟರ್- ಮಾಸಿಕ ₹ 31,000
ಸೈಕಾಲಜಿಸ್ಟ್- ಮಾಸಿಕ ₹ 32,000
ಉದ್ಯೋಗದ ಸ್ಥಳ:
ರಾಯಚೂರು
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ rect.nitm@gmail.com ಗೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 01/02/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಫೆಬ್ರವರಿ 14, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ