• ಹೋಂ
 • »
 • ನ್ಯೂಸ್
 • »
 • Jobs
 • »
 • NIT Karnataka Recruitment 2023: ಹಿಂದಿ ಟ್ರಾನ್ಸ್​ಲೇಟರ್ ಪೋಸ್ಟ್ ಖಾಲಿ ಇದೆ- ಸ್ಯಾಲರಿ ಕೇಳಿದ್ರೆ ಇವತ್ತೇ ಅಪ್ಲೈ ಮಾಡ್ತೀರಾ

NIT Karnataka Recruitment 2023: ಹಿಂದಿ ಟ್ರಾನ್ಸ್​ಲೇಟರ್ ಪೋಸ್ಟ್ ಖಾಲಿ ಇದೆ- ಸ್ಯಾಲರಿ ಕೇಳಿದ್ರೆ ಇವತ್ತೇ ಅಪ್ಲೈ ಮಾಡ್ತೀರಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಖಾಲಿ ಇರುವ 1 ಜೂನಿಯರ್ ಹಿಂದಿ ಟ್ರಾನ್ಸ್​ಲೇಟರ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಇದೇ ಮೇ 2 ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.

 • News18 Kannada
 • 2-MIN READ
 • Last Updated :
 • Mangalore, India
 • Share this:

NIT Karnataka Recruitment 2023: ನಿಮಗೆ ಹಿಂದಿ ಭಾಷೆ ಚೆನ್ನಾಗಿ ಓದಲು, ಬರೆಯಲು, ಅರ್ಥ ಮಾಡಿಕೊಳ್ಳಲು, ಮಾತನಾಡಲು ಬರುತ್ತೆ ಅಂದ್ರೆ ಇಲ್ಲಿದೆ ನೋಡಿ ಬಂಪರ್ ಅವಕಾಶ. ಹಿಂದಿ ಭಾಷೆಯ ಮೇಲೆ ಚೆನ್ನಾಗಿ ಹಿಡಿತ ಹೊಂದಿರುವವರಿಗೆ ಟ್ರಾನ್ಸ್​ಲೇಟರ್ ಹುದ್ದೆ ಖಾಲಿ ಇದೆ. ಹೌದು, ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ(National Institute of Technology -Karnataka) ಖಾಲಿ ಇರುವ 1 ಜೂನಿಯರ್ ಹಿಂದಿ ಟ್ರಾನ್ಸ್​ಲೇಟರ್ (Junior Hindi Translator) ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಇದೇ ಮೇ 2 ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸುರತ್ಕಲ್​​ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ
ಹುದ್ದೆಜೂನಿಯರ್ ಹಿಂದಿ ಟ್ರಾನ್ಸ್​ಲೇಟರ್
ಒಟ್ಟು ಹುದ್ದೆ1
ವಿದ್ಯಾರ್ಹತೆಸ್ನಾತಕೋತ್ತರ ಪದವಿ
ವೇತನದಿನಕ್ಕೆ 897 ರೂ.
ಉದ್ಯೋಗದ ಸ್ಥಳಸುರತ್ಕಲ್
ಸಂದರ್ಶನ ನಡೆಯುವ ದಿನಮೇ 2, 2023

ವಿದ್ಯಾರ್ಹತೆ:
ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.


ಇದನ್ನೂ ಓದಿ: KAPL Recruitment 2023: ಧಾರವಾಡ & ಬೆಂಗಳೂರಿನಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ- ತಿಂಗಳಿಗೆ 42,000 ಸಂಬಳ


ವೇತನ:
ದಿನಕ್ಕೆ 897 ರೂ.


ಉದ್ಯೋಗದ ಸ್ಥಳ:
ಸುರತ್ಕಲ್


ವಯೋಮಿತಿ:
ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಇದನ್ನೂ ಓದಿ:Canara Bank Recruitment 2023: ಕೆನರಾ ಬ್ಯಾಂಕ್​​ನಲ್ಲಿ ಗೋಲ್ಡ್ ಅಪ್ರೈಸರ್ ಹುದ್ದೆ ಖಾಲಿ ಇದೆ- SSLC ಪಾಸಾಗಿದ್ರೆ ಸಾಕು


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಸಂದರ್ಶನ ನಡೆಯುವ ಸ್ಥಳ:
ಬೋರ್ಡ್ ರೂಮ್
ಮುಖ್ಯ ಆಡಳಿತ ಕಟ್ಟಡ
NITK ಸುರತ್ಕಲ್


top videos  ಪ್ರಮುಖ ದಿನಾಂಕಗಳು:
  ನೋಟಿಫಿಕೇಶನ್ ಬಿಡುಗಡೆ ದಿನಾಂಕ: 17/04/2023
  ಸಂದರ್ಶನ ನಡೆಯುವ ದಿನ: ಮೇ 2, 2023

  First published: