NIMHANS Recruitment 2022: ಬೆಂಗಳೂರಿನ ನಿಮ್ಹಾನ್ಸ್ನಲ್ಲಿ 7 ಹಿರಿಯ ಸಂಶೋಧನಾ ಅಧಿಕಾರಿ, ಹಿರಿಯ ಸಂಖ್ಯಾಶಾಸ್ತ್ರಜ್ಞ ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್(National Institute of Mental Health and Nuero Sciences- NIMHANS) ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವವರು ಇತ್ತ ಗಮನಹರಿಸಬಹುದು. ಆಸಕ್ತರು ಡಿಸೆಂಬರ್ 8ರೊಳಗೆ ಅರ್ಜಿ ಹಾಕಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ನಿಮ್ಹಾನ್ಸ್ |
ಹುದ್ದೆ | ಹಿರಿಯ ಸಂಶೋಧನಾ ಅಧಿಕಾರಿ, ಹಿರಿಯ ಸಂಖ್ಯಾಶಾಸ್ತ್ರಜ್ಞ |
ಒಟ್ಟು ಹುದ್ದೆ | 7 |
ಉದ್ಯೋಗದ ಸ್ಥಳ | ಬೆಂಗಳೂರು |
ವೇತನ | ಮಾಸಿಕ ₹30,000-80,000 |
ಇದನ್ನೂ ಓದಿ: ESIC Karnataka: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ 67 ಸಾವಿರ ಸಂಬಳ
ಹುದ್ದೆಯ ಮಾಹಿತಿ:
ಸೀನಿಯರ್ ಡಾಟಾ ಮ್ಯಾನೇಜರ್- 1
ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್-1
ಸೀನಿಯರ್ ಅಕೌಂಟ್ಸ್ ಆಫೀಸರ್- 1
ಫೀಲ್ಡ್ ಕೋ-ಆರ್ಡಿನೇಟರ್-1
ಸೀನಿಯರ್ ರಿಸರ್ಚ್ ಆಫೀಸರ್- 2
ಸೀನಿಯರ್ ಸ್ಟ್ಯಾಟಿಸ್ಟಿಶಿಯನ್- 1
ವಿದ್ಯಾರ್ಹತೆ ಏನಿರಬೇಕು?
ಸೀನಿಯರ್ ಡಾಟಾ ಮ್ಯಾನೇಜರ್- ಎಂಬಿಬಿಎಸ್, ಎಂಪಿಎಚ್, ಎಂಡಿ, ಎಂಎಸ್ಸಿ, ಪಿಎಚ್.ಡಿ
ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಸೀನಿಯರ್ ಅಕೌಂಟ್ಸ್ ಆಫೀಸರ್- ಪದವಿ, ಸ್ನಾತಕೋತ್ತರ ಪದವಿ
ಫೀಲ್ಡ್ ಕೋ-ಆರ್ಡಿನೇಟರ್- ಎಂ.ಫಿಲ್, PSW, MPH, ಸೋಷಿಯಲ್ ವರ್ಕ್ನಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ
ಸೀನಿಯರ್ ರಿಸರ್ಚ್ ಆಫೀಸರ್- ಎಂಬಿಬಿಎಸ್, MPH, MD, ಪಿಎಚ್.ಡಿ
ಸೀನಿಯರ್ ಸ್ಟ್ಯಾಟಿಸ್ಟಿಶಿಯನ್- ಎಂಎಸ್ಸಿ, ಸ್ನಾತಕೋತ್ತರ ಪದವಿ, ಪೋಸ್ಟ್- ಡಾಕ್ಟರಲ್ ಡಿಗ್ರಿ, ಪಿಎಚ್.ಡಿ
ವಯೋಮಿತಿ:
ಸೀನಿಯರ್ ಡಾಟಾ ಮ್ಯಾನೇಜರ್- ಗರಿಷ್ಠ 45 ವರ್ಷ
ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್- ಗರಿಷ್ಠ 45 ವರ್ಷ
ಸೀನಿಯರ್ ಅಕೌಂಟ್ಸ್ ಆಫೀಸರ್- ಗರಿಷ್ಠ 45 ವರ್ಷ
ಫೀಲ್ಡ್ ಕೋ-ಆರ್ಡಿನೇಟರ್- ಗರಿಷ್ಠ 40 ವರ್ಷ
ಸೀನಿಯರ್ ರಿಸರ್ಚ್ ಆಫೀಸರ್- ಗರಿಷ್ಠ 45 ವರ್ಷ
ಸೀನಿಯರ್ ಸ್ಟ್ಯಾಟಿಸ್ಟಿಶಿಯನ್- ಗರಿಷ್ಠ 45 ವರ್ಷ
ವೇತನ:
ಸೀನಿಯರ್ ಡಾಟಾ ಮ್ಯಾನೇಜರ್- ಮಾಸಿಕ ₹ 60,000
ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್-ಮಾಸಿಕ ₹ 60,000
ಸೀನಿಯರ್ ಅಕೌಂಟ್ಸ್ ಆಫೀಸರ್- ಮಾಸಿಕ ₹ 60,000
ಫೀಲ್ಡ್ ಕೋ-ಆರ್ಡಿನೇಟರ್-ಮಾಸಿಕ ₹ 30,000
ಸೀನಿಯರ್ ರಿಸರ್ಚ್ ಆಫೀಸರ್- ಮಾಸಿಕ ₹ 80,000
ಸೀನಿಯರ್ ಸ್ಟ್ಯಾಟಿಸ್ಟಿಶಿಯನ್- ಮಾಸಿಕ ₹ 80,000
ಇದನ್ನೂ ಓದಿ: UPSC: ಕೇಂದ್ರ ಲೋಕಸೇವಾ ಆಯೋಗದಿಂದ 43 ಹುದ್ದೆಗಳಿಗೆ ಅಧಿಸೂಚನೆ- ಆನ್ಲೈನ್ ಅರ್ಜಿ ಆಹ್ವಾನ
ಅರ್ಜಿ ಶುಲ್ಕ:
ಶುಲ್ಕ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?
ಲಿಖಿತ ಪರೀಕ್ಷೆ
ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ