NIMHANS Recruitment 2023: NIMHANS Recruitment 2022: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ(ನಿಮ್ಹಾನ್ಸ್)- ಬೆಂಗಳೂರು (National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 ಸೀನಿಯರ್ ರಿಸರ್ಚ್ ಫೆಲೋ(Senior Research Fellow), ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 19, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಇ-ಮೇಲ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ nimhans.ac.in ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ನಿಮ್ಹಾನ್ಸ್ |
ಹುದ್ದೆ | ಗ್ರಾಫಿಕ್ ಡಿಸೈನರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ |
ಒಟ್ಟು ಹುದ್ದೆ | 8 |
ವೇತನ | ಮಾಸಿಕ ₹ 20,000-60,000 |
ಉದ್ಯೋಗದ ಸ್ಥಳ | ಬೆಂಗಳೂರು |
ಸೀನಿಯರ್ ರಿಸರ್ಚ್ ಫೆಲೋ(SRF)-2
ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್-3
ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS)-1
ಪ್ರಾಜೆಕ್ಟ್ ಫಿಜಿಸಿಯನ್-1
ಗ್ರಾಫಿಕ್ ಡಿಸೈನರ್- 1
ಇದನ್ನೂ ಓದಿ: Job Alert: ಕೊಪ್ಪಳ ಜಿ.ಪಂ.ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಾಳೆಯೊಳಗೆ ಅಪ್ಲೈ ಮಾಡಿ- ನೇರ ನೇಮಕಾತಿ
ವಿದ್ಯಾರ್ಹತೆ:
ಸೀನಿಯರ್ ರಿಸರ್ಚ್ ಫೆಲೋ(SRF)-ಸ್ನಾತಕೋತ್ತರ ಪದವಿ
ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್- ಸ್ನಾತಕೋತ್ತರ ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS)- 10ನೇ ತರಗತಿ
ಪ್ರಾಜೆಕ್ಟ್ ಫಿಜಿಸಿಯನ್-ಎಂಬಿಬಿಎಸ್
ಗ್ರಾಫಿಕ್ ಡಿಸೈನರ್- ಪದವಿ
ವಯೋಮಿತಿ:
ಸೀನಿಯರ್ ರಿಸರ್ಚ್ ಫೆಲೋ(SRF)-45 ವರ್ಷ
ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್- 45 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS)- 45 ವರ್ಷ
ಪ್ರಾಜೆಕ್ಟ್ ಫಿಜಿಸಿಯನ್- 35 ವರ್ಷ
ಗ್ರಾಫಿಕ್ ಡಿಸೈನರ್- 35 ವರ್ಷ
ವೇತನ:
ಸೀನಿಯರ್ ರಿಸರ್ಚ್ ಫೆಲೋ(SRF)-ಮಾಸಿಕ ₹ 35,000
ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್-ಮಾಸಿಕ ₹ 35,000
ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS)-ಮಾಸಿಕ ₹ 20,000
ಪ್ರಾಜೆಕ್ಟ್ ಫಿಜಿಸಿಯನ್-ಮಾಸಿಕ ₹ 60,000
ಗ್ರಾಫಿಕ್ ಡಿಸೈನರ್- ಮಾಸಿಕ ₹ 30,000
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 05/01/2023
ಅರ್ಜಿ ಸಲ್ಲಿಸಲು ಕೊನೆ ದಿನ: 19/01/2023
ಅರ್ಜಿ ಹಾಕುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ brainhealth.nimhans@gmail.com ಗೆ ಜನವರಿ 19ರೊಳಗೆ ಕಳುಹಿಸಬೇಕು.
ಇದನ್ನೂ ಓದಿ: KSRLPS ನೇಮಕಾತಿ 2023: ಮಂಡ್ಯ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರದ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ