NIMHANS Recruitment 2023: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು(National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 7 ಫೀಲ್ಡ್ ಡೇಟಾ ಕಲೆಕ್ಟರ್, ಜೂನಿಯರ್ ರಿಸರ್ಚ್ ಫೆಲೋ, ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 5, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಈ ಕೂಡಲೇ ತಮ್ಮ ರೆಸ್ಯೂಮ್ನ್ನು ಇ-ಮೇಲ್ ಮಾಡಿ. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ನಿಮ್ಹಾನ್ಸ್ |
ಹುದ್ದೆ | ಫೀಲ್ಡ್ ಡೇಟಾ ಕಲೆಕ್ಟರ್, ಜೂನಿಯರ್ ರಿಸರ್ಚ್ ಫೆಲೋ, ಕನ್ಸಲ್ಟೆಂಟ್ |
ಒಟ್ಟು ಹುದ್ದೆ | 7 |
ವೇತನ | ತಿಂಗಳಿಗೆ 20,000-1,40,000 |
ಉದ್ಯೋಗದ ಸ್ಥಳ | ಬೆಂಗಳೂರು |
ಫೀಲ್ಡ್ ಡೇಟಾ ಕಲೆಕ್ಟರ್-1
ಲ್ಯಾಬ್ ಟೆಕ್ನಿಷಿಯನ್-1
ಜೂನಿಯರ್ ರಿಸರ್ಚ್ ಫೆಲೋ-1
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸೈಕಿಯಾಟ್ರಿ-1
ಸೀನಿಯರ್ ರೆಸಿಡೆಂಟ್ ಸೈಕಿಯಾಟ್ರಿ-1
ಕನ್ಸಲ್ಟೆಂಟ್-1
ಪ್ರಾಜೆಕ್ಟ್ ಕೋಆರ್ಡಿನೇಟರ್-1
ಇದನ್ನೂ ಓದಿ: ಉದ್ಯೋಗಾಂಕ್ಷಿಗಳಿಗೆ Good News: 778 ಪಿಯು ಉಪನ್ಯಾಸಕ ಹುದ್ದೆಗಳ ನೇರ ನೇಮಕಾತಿ-ಸಚಿವ ಬಿ.ಸಿ.ನಾಗೇಶ್ ಟ್ವೀಟ್
ವಿದ್ಯಾರ್ಹತೆ:
ಫೀಲ್ಡ್ ಡೇಟಾ ಕಲೆಕ್ಟರ್-ಬಿಎಸ್ಸಿ
ಲ್ಯಾಬ್ ಟೆಕ್ನಿಷಿಯನ್-ಡಿಪ್ಲೋಮಾ, ಬಿಎಸ್ಸಿ
ಜೂನಿಯರ್ ರಿಸರ್ಚ್ ಫೆಲೋ- ಬಿಎಸ್ಸಿ, ಬಿ.ಟೆಕ್, ಎಂಟೆಕ್, ಎಂಎಸ್ಸಿ
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸೈಕಿಯಾಟ್ರಿ-ಎಂಡಿ, ಡಿಎನ್ಬಿ
ಸೀನಿಯರ್ ರೆಸಿಡೆಂಟ್ ಸೈಕಿಯಾಟ್ರಿ-ಎಂಡಿ, ಡಿಎನ್ಬಿ
ಕನ್ಸಲ್ಟೆಂಟ್-ಎಂಎಸ್ಸಿ, MPH, ಎಂ.ಫಿಲ್
ಪ್ರಾಜೆಕ್ಟ್ ಕೋಆರ್ಡಿನೇಟರ್-ಪದವಿ
ವಯೋಮಿತಿ:
ಫೀಲ್ಡ್ ಡೇಟಾ ಕಲೆಕ್ಟರ್-50 ವರ್ಷ
ಲ್ಯಾಬ್ ಟೆಕ್ನಿಷಿಯನ್-50 ವರ್ಷ
ಜೂನಿಯರ್ ರಿಸರ್ಚ್ ಫೆಲೋ-35 ವರ್ಷ
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸೈಕಿಯಾಟ್ರಿ-50 ವರ್ಷ
ಸೀನಿಯರ್ ರೆಸಿಡೆಂಟ್ ಸೈಕಿಯಾಟ್ರಿ-40 ವರ್ಷ
ಕನ್ಸಲ್ಟೆಂಟ್-40 ವರ್ಷ
ಪ್ರಾಜೆಕ್ಟ್ ಕೋಆರ್ಡಿನೇಟರ್-35 ವರ್ಷ
ವೇತನ:
ಫೀಲ್ಡ್ ಡೇಟಾ ಕಲೆಕ್ಟರ್-ಮಾಸಿಕ ₹ 20,000
ಲ್ಯಾಬ್ ಟೆಕ್ನಿಷಿಯನ್-ಮಾಸಿಕ ₹ 20,000
ಜೂನಿಯರ್ ರಿಸರ್ಚ್ ಫೆಲೋ-ಮಾಸಿಕ ₹ 31,000
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸೈಕಿಯಾಟ್ರಿ-ಮಾಸಿಕ ₹ 1,40,000
ಸೀನಿಯರ್ ರೆಸಿಡೆಂಟ್ ಸೈಕಿಯಾಟ್ರಿ-ಮಾಸಿಕ ₹ 1,05,000
ಕನ್ಸಲ್ಟೆಂಟ್-ಮಾಸಿಕ ₹ 62,000
ಪ್ರಾಜೆಕ್ಟ್ ಕೋಆರ್ಡಿನೇಟರ್-ಮಾಸಿಕ ₹ 30,000
ಅರ್ಜಿ ಸಲ್ಲಿಸುವುದು ಹೇಗೆ?
ಆಯಾಯ ಹುದ್ದೆಗನುಸಾರ ತಮ್ಮ ರೆಸ್ಯೂಮ್ನ್ನು ಇ-ಮೇಲ್ ಮಾಡಬೇಕು.
ಫೀಲ್ಡ್ ಡೇಟಾ ಕಲೆಕ್ಟರ್-cspwtdbt01261@gmail.com
ಲ್ಯಾಬ್ ಟೆಕ್ನಿಷಿಯನ್-cspwtdbt01261@gmail.com
ಜೂನಿಯರ್ ರಿಸರ್ಚ್ ಫೆಲೋ-rajankashyap6@gmail.com
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸೈಕಿಯಾಟ್ರಿ-manoraksha.cell@gmail.com
ಸೀನಿಯರ್ ರೆಸಿಡೆಂಟ್ ಸೈಕಿಯಾಟ್ರಿ-manoraksha.cell@gmail.com
ಕನ್ಸಲ್ಟೆಂಟ್-manoraksha.cell@gmail.com
ಪ್ರಾಜೆಕ್ಟ್ ಕೋಆರ್ಡಿನೇಟರ್-manoraksha.cell@gmail.com
ಇದನ್ನೂ ಓದಿ: ಬೆಂಗಳೂರಿನ ಈ ಸಂಸ್ಥೆಯಲ್ಲಿ 26 ಹುದ್ದೆಗಳು ಖಾಲಿ: PUC ಆದವರೂ ಅರ್ಜಿ ಹಾಕಿ, ತಿಂಗಳಿಗೆ 72 ಸಾವಿರ ಸಂಬಳ
ಪ್ರಮುಖ ದಿನಾಂಕಗಳು
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 15/12/2022
ಇ-ಮೇಲ್ ಕಳುಹಿಸಲು ಕೊನೆಯ ದಿನ: 05/01/2023
ಫೀಲ್ಡ್ ಡೇಟಾ ಕಲೆಕ್ಟರ್, ಲ್ಯಾಬ್ ಟೆಕ್ನಿಷಿಯನ್, ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಡಿಸೆಂಬರ್ 29, 2022 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಇನ್ನುಳಿದ ಹುದ್ದೆಗಳಿಗೆ ಜನವರಿ 5, 2023ರವರೆಗೆ ಅರ್ಜಿ ಹಾಕಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ