• ಹೋಂ
  • »
  • ನ್ಯೂಸ್
  • »
  • Jobs
  • »
  • NIMHANS Recruitment 2023: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ನಿಮ್ಹಾನ್ಸ್​- ಆಸಕ್ತರು ಅಪ್ಲೈ ಮಾಡಿ

NIMHANS Recruitment 2023: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ನಿಮ್ಹಾನ್ಸ್​- ಆಸಕ್ತರು ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೇ 20, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ (Last Date). ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

NIMHANS Recruitment 2023: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು(National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಸೀನಿಯರ್ ರೆಸಿಡೆಂಟ್, ರೇಡಿಯಾಲಜಿಕಲ್​ ಟೆಕ್ನಾಲಜಿಸ್ಟ್​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್​ಲೈನ್​ (Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಮೇ 20, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ (Last Date). ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆನಿಮ್ಹಾನ್ಸ್​
ಹುದ್ದೆಸೀನಿಯರ್ ರೆಸಿಡೆಂಟ್, ರೇಡಿಯಾಲಜಿಕಲ್​ ಟೆಕ್ನಾಲಜಿಸ್ಟ್​
ಒಟ್ಟು ಹುದ್ದೆ14
ವಿದ್ಯಾರ್ಹತೆಡಿಪ್ಲೊಮಾ, ಬಿ.ಎಸ್ಸಿ
ವೇತನಮಾಸಿಕ ₹ 67,700-2,08,700
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಮೇ 20, 2023

ಹುದ್ದೆಯ ಮಾಹಿತಿ:
ಸೀನಿಯರ್ ರೆಸಿಡೆಂಟ್ (ನರ್ಸೋಸರ್ಜರಿ)- 3
ಸೀನಿಯರ್ ರೆಸಿಡೆಂಟ್ (ಅನಸ್ಥೇಶಿಯಾಲಜಿ)- 6
ನ್ಯೂರೋಅನಸ್ಥೇಶಿಯಾ ಟೆಕ್ನಾಲಜಿಸ್ಟ್- 3
ಜೂನಿಯರ್ ಆಪರೇಶನ್ ಥಿಯೇಟರ್ ಟೆಕ್ನಿಷಿಯನ್- 1
ರೇಡಿಯಾಲಜಿಕಲ್ ಟೆಕ್ನಾಲಜಿಸ್ಟ್​- 1


ಇದನ್ನೂ ಓದಿ: Federal Bank Recruitment 2023: ಡಿಗ್ರಿ ಪಾಸಾಗಿದ್ರೆ ಅಪ್ಲೈ ಮಾಡಿ- ಇವತ್ತೇ ಲಾಸ್ಟ್​ ಡೇಟ್


ವಿದ್ಯಾರ್ಹತೆ:
ಸೀನಿಯರ್ ರೆಸಿಡೆಂಟ್ (ನರ್ಸೋಸರ್ಜರಿ)- ಎಂ.ಸಿಚ್
ಸೀನಿಯರ್ ರೆಸಿಡೆಂಟ್ (ಅನಸ್ಥೇಶಿಯಾಲಜಿ)- ಎಂಡಿ, ಡಿಎನ್​ಬಿ
ನ್ಯೂರೋಅನಸ್ಥೇಶಿಯಾ ಟೆಕ್ನಾಲಜಿಸ್ಟ್- ಬಿ.ಎಸ್ಸಿ
ಜೂನಿಯರ್ ಆಪರೇಶನ್ ಥಿಯೇಟರ್ ಟೆಕ್ನಿಷಿಯನ್- ಡಿಪ್ಲೊಮಾ, ಬಿ.ಎಸ್ಸಿ
ರೇಡಿಯಾಲಜಿಕಲ್ ಟೆಕ್ನಾಲಜಿಸ್ಟ್​- ಬಿ.ಎಸ್ಸಿ


ವಯೋಮಿತಿ:
ಸೀನಿಯರ್ ರೆಸಿಡೆಂಟ್ (ನರ್ಸೋಸರ್ಜರಿ)- 37 ವರ್ಷ
ಸೀನಿಯರ್ ರೆಸಿಡೆಂಟ್ (ಅನಸ್ಥೇಶಿಯಾಲಜಿ)- 37 ವರ್ಷ
ನ್ಯೂರೋಅನಸ್ಥೇಶಿಯಾ ಟೆಕ್ನಾಲಜಿಸ್ಟ್- 30 ವರ್ಷ
ಜೂನಿಯರ್ ಆಪರೇಶನ್ ಥಿಯೇಟರ್ ಟೆಕ್ನಿಷಿಯನ್- 30 ವರ್ಷ
ರೇಡಿಯಾಲಜಿಕಲ್ ಟೆಕ್ನಾಲಜಿಸ್ಟ್​- 30 ವರ್ಷ


ವೇತನ:
ಸೀನಿಯರ್ ರೆಸಿಡೆಂಟ್ (ನರ್ಸೋಸರ್ಜರಿ)- ಮಾಸಿಕ ₹ 67,700-2,08,700
ಸೀನಿಯರ್ ರೆಸಿಡೆಂಟ್ (ಅನಸ್ಥೇಶಿಯಾಲಜಿ)- ಮಾಸಿಕ ₹ 67,700-2,08,700
ನ್ಯೂರೋಅನಸ್ಥೇಶಿಯಾ ಟೆಕ್ನಾಲಜಿಸ್ಟ್- ಮಾಸಿಕ ₹ 35,400-1,12,400
ಜೂನಿಯರ್ ಆಪರೇಶನ್ ಥಿಯೇಟರ್ ಟೆಕ್ನಿಷಿಯನ್- ಮಾಸಿಕ ₹ 35,400-1,12,400
ರೇಡಿಯಾಲಜಿಕಲ್ ಟೆಕ್ನಾಲಜಿಸ್ಟ್​- ಮಾಸಿಕ ₹ 35,400-1,12,400


ಇದನ್ನೂ ಓದಿ: RITES Recruitment 2023: ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ- ಲಾಸ್ಟ್​ ಚಾನ್ಸ್​ ಮಿಸ್ ಮಾಡಿಕೊಳ್ಳಬೇಡಿ


ಅರ್ಜಿ ಶುಲ್ಕ:
PwBD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
SC/ST ಅಭ್ಯರ್ಥಿಗಳು- 295 ರೂ.
ಸಾಮಾನ್ಯ/ ಒಬಿಸಿ & EWS ಅಭ್ಯರ್ಥಿಗಳು- 590 ರೂ.
ಪಾವತಿಸುವ ಬಗೆ- ಆನ್​ಲೈನ್


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್​
ಸಂದರ್ಶನ


ಉದ್ಯೋಗದ ಸ್ಥಳ:
ಬೆಂಗಳೂರು



ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ನಿಮ್ಹಾನ್ಸ್ ಅಪ್ಲಿಕೇಶನ್


ರಿಜಿಸ್ಟ್ರಾರ್
ನಿಮ್ಹಾನ್ಸ್
ಪಿಬಿ ನಂ.2900
ಹೊಸೂರು ರಸ್ತೆ
ಬೆಂಗಳೂರು-560029


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 20, 2023

top videos


    ಹೆಚ್ಚಿನ ವಿವರಗಳಿಗಾಗಿ ಇ-ಮೇಲ್ ಐಡಿ personnel.nimhans@gmail.com ಗೆ ಸಂಪರ್ಕಿಸಿ

    First published: