NIC Recruitment 2023: ರಾಷ್ಟ್ರೀಯ ಮಾಹಿತಿ ಕೇಂದ್ರ(National Informatics Centre) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 598 ಸೈಂಟಿಸ್ಟ್, ಸೈಂಟಿಫಿಕ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಸಲ್ಲಿಸಲು ಏಪ್ರಿಲ್ 4, 2023 ಕೊನೆಯ ದಿನವಾಗಿದೆ (Last Date). ಆಸಕ್ತರು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ರಾಷ್ಟ್ರೀಯ ಮಾಹಿತಿ ಕೇಂದ್ರ |
ಹುದ್ದೆ | ಸೈಂಟಿಸ್ಟ್, ಸೈಂಟಿಫಿಕ್ ಆಫೀಸರ್ |
ಒಟ್ಟು ಹುದ್ದೆ | 598 |
ವಿದ್ಯಾರ್ಹತೆ | B.E ಅಥವಾ B.Tech, M.Sc |
ವೇತನ | ಮಾಸಿಕ ₹56,100-1,77,500 |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 4, 2023 |
ಇದನ್ನೂ ಓದಿ: JOBS: ಡಿಗ್ರಿ ಆದವರಿಗೆ ಬೆಂಗಳೂರಿನಲ್ಲಿ ಬಂಪರ್ ಉದ್ಯೋಗ- 40 ಸಾವಿರ ಸಂಬಳ
ವಿದ್ಯಾರ್ಹತೆ:
ಸೈಂಟಿಸ್ಟ್- ಬಿ: B.E ಅಥವಾ B.Tech, M.Sc, ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿ, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ, ಕಂಪ್ಯೂಟರ್ ಸೈನ್ಸಸ್, ಸಂವಹನ, ಕಂಪ್ಯೂಟರ್ ಮತ್ತು ನೆಟ್‌ವರ್ಕಿಂಗ್ ಭದ್ರತೆ, ಕಂಪ್ಯೂಟರ್ ಅಪ್ಲಿಕೇಶನ್, ಸಾಫ್ಟ್‌ವೇರ್ ವ್ಯವಸ್ಥೆ, ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ನಿರ್ವಹಣೆ, ಮಾಹಿತಿಶಾಸ್ತ್ರ, ಕಂಪ್ಯೂಟರ್ ನಿರ್ವಹಣೆ, ಸೈಬರ್ ಕಾನೂನು, ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ನಲ್ಲಿ M.E ಅಥವಾ M.Tech, M.Phil
ಸೈಂಟಿಫಿಕ್ ಆಫೀಸರ್/ ಎಂಜಿನಿಯರ್: B.E ಅಥವಾ B.Tech, MCA, MS, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಷನ್ಸ್, ಕಂಪ್ಯೂಟರ್ ಸೈನ್ಸಸ್, ಕಂಪ್ಯೂಟರ್ ಮತ್ತು ನೆಟ್‌ವರ್ಕಿಂಗ್ ಸೆಕ್ಯುರಿಟಿ, ಸಾಫ್ಟ್‌ವೇರ್ ಸಿಸ್ಟಮ್, ಮಾಹಿತಿ ತಂತ್ರಜ್ಞಾನ, ಇನ್ಫರ್ಮ್ಯಾಟಿಕ್ಸ್ನಲ್ಲಿ M.Sc
ಸೈಂಟಿಫಿಕ್/ ಟೆಕ್ನಿಕಲ್ ಅಸಿಸ್ಟೆಂಟ್-ಎ: B.E ಅಥವಾ B.Tech, MCA, MS, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಷನ್ಸ್, ಕಂಪ್ಯೂಟರ್ ಸೈನ್ಸಸ್, ಕಂಪ್ಯೂಟರ್ ಮತ್ತು ನೆಟ್‌ವರ್ಕಿಂಗ್ ಸೆಕ್ಯುರಿಟಿ, ಸಾಫ್ಟ್‌ವೇರ್ ಸಿಸ್ಟಮ್, ಮಾಹಿತಿ ತಂತ್ರಜ್ಞಾನ, ಇನ್ಫರ್ಮ್ಯಾಟಿಕ್ಸ್ನಲ್ಲಿ M.Sc
ಇದನ್ನೂ ಓದಿ: Mysuru Jobs: ತಿಂಗಳಿಗೆ ₹ 31,000 ಸಂಬಳ- ಆನ್ಲೈನ್ ಮೂಲಕ ಇಲ್ಲಿ ಅಪ್ಲೈ ಮಾಡಿ
ವಯೋಮಿತಿ:
ರಾಷ್ಟ್ರೀಯ ಮಾಹಿತಿ ಕೇಂದ್ರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 4, 2023ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಒಬಿಸಿ (NCL) ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PWD (UR) ಅಭ್ಯರ್ಥಿಗಳು- 10 ವರ್ಷ
PWD (OBC- NCL) ಅಭ್ಯರ್ಥಿಗಳು- 13 ವರ್ಷ
PWD (SC/ST) ಅಭ್ಯರ್ಥಿಗಳು- 15 ವರ್ಷ
ಅರ್ಜಿ ಶುಲ್ಕ:
SC/ST/ಮಹಿಳಾ/PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ
ಸಾಮಾನ್ಯ & ಉಳಿದ ಅಭ್ಯರ್ಥಿಗಳು- 800 ರೂ.
ಪಾವತಿಸುವ ಬಗೆ- ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ವೇತನ:
ಸೈಂಟಿಸ್ಟ್- ಬಿ: ಮಾಸಿಕ ₹56,100-1,77,500
ಸೈಂಟಿಫಿಕ್ ಆಫೀಸರ್/ ಎಂಜಿನಿಯರ್: ಮಾಸಿಕ ₹ 44,900-1,42,400
ಸೈಂಟಿಫಿಕ್/ ಟೆಕ್ನಿಕಲ್ ಅಸಿಸ್ಟೆಂಟ್-ಎ: ಮಾಸಿಕ ₹35,400-1,12,400
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 4, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ