NHDC Recruitment 2023: ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ (National Handloom Development Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಕಂಪನಿ ಸೆಕ್ರೆಟರಿ, ಜೂನಿಯರ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ (Online) & ಆಫ್ಲೈನ್ (Offline) ಎರಡು ವಿಧಾನಗಳಲ್ಲಿಯೂ ಅರ್ಜಿ (Apply) ಸಲ್ಲಿಸಬಹುದು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ |
ಹುದ್ದೆ | ಕಂಪನಿ ಸೆಕ್ರೆಟರಿ, ಜೂನಿಯರ್ ಆಫೀಸರ್ |
ಒಟ್ಟು ಹುದ್ದೆ | 14 |
ವಿದ್ಯಾರ್ಹತೆ | ಪದವಿ, ಸಿಎ |
ವೇತನ | ಮಾಸಿಕ ₹ 1,14,940 |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮೇ 15, 2023 |
ಇದನ್ನೂ ಓದಿ: KMF TUMUL Recruitment 2023: ಕೆಎಂಎಫ್ ತುಮಕೂರಿನಲ್ಲಿ 219 ಹುದ್ದೆಗಳ ನೇಮಕ- ಅರ್ಜಿ ಹಾಕಲು ನಾಳೆಯೇ ಲಾಸ್ಟ್ ಡೇಟ್
ವಿದ್ಯಾರ್ಹತೆ:
ಸೀನಿಯರ್ ಮ್ಯಾನೇಜರ್ (F&A)- ಸಿಎ, ಕಾಸ್ಟ್ ಅಕೌಂಟೆಂಟ್, ಎಂಬಿಎ
ಕಂಪನಿ ಸೆಕ್ರೆಟರಿ- ನೋಟಿಫಿಕೇಶನ್ ಪರಿಶೀಲಿಸಿ
ಜೂನಿಯರ್ ಆಫೀಸರ್- ಪದವಿ
ವಯೋಮಿತಿ:
ಸೀನಿಯರ್ ಮ್ಯಾನೇಜರ್ (F&A)- 45 ವರ್ಷ
ಕಂಪನಿ ಸೆಕ್ರೆಟರಿ- 40 ವರ್ಷ
ಜೂನಿಯರ್ ಆಫೀಸರ್- 25 ವರ್ಷ
ವೇತನ:
ಸೀನಿಯರ್ ಮ್ಯಾನೇಜರ್ (F&A)- ಮಾಸಿಕ ₹ 1,14,940
ಕಂಪನಿ ಸೆಕ್ರೆಟರಿ- ಮಾಸಿಕ ₹ 82,100
ಜೂನಿಯರ್ ಆಫೀಸರ್- ಮಾಸಿಕ ₹ 32,840
ಅರ್ಜಿ ಶುಲ್ಕ:
SC/ST/PWD & ಇಂಟರ್ನ್ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
ಉಳಿದ ಎಲ್ಲಾ ಅಭ್ಯರ್ಥಿಗಳು- 500 ರೂ.
ಪಾವತಿಸುವ ಬಗೆ- ಆನ್ಲೈನ್
ಇದನ್ನೂ ಓದಿ: RBI Recruitment 2023: ಡ್ರೈವರ್ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆ ದಿನ- 37 ಸಾವಿರ ಸಂಬಳ
ಆಯ್ಕೆ ಪ್ರಕ್ರಿಯೆ:
ಟೈಪ್ರೈಟಿಂಗ್ ಟೆಸ್ಟ್
ಗುಂಪು ಚರ್ಚೆ
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಭ್ಯರ್ಥಿಗಳು ಆಫ್ಲೈನ್/ ಪೋಸ್ಟ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಸಹಾಯಕ ಮ್ಯಾನೇಜರ್ (HR)
ನ್ಯಾಷನಲ್ ಹ್ಯಾಂಡ್ಲೂಮ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್
ವೆಗ್‌ಮ್ಯಾನ್ಸ್ ಬ್ಯುಸಿನೆಸ್ ಪಾರ್ಕ್
4ನೇ ಮಹಡಿ
ಟವರ್-1
ಪ್ಲಾಟ್ ನಂ.3
ಸೆಕ್ಟರ್ ನಾಲೆಡ್ಜ್ ಪಾರ್ಕ್-III ಸೂರಜ್‌ಪುರ- ಕಸ್ನಾ ಮುಖ್ಯ ರಸ್ತೆ
ಗ್ರೇಟರ್ ನೋಯ್ಡಾ-201306 (UP)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/04/2023
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 15, 2023
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 26, 2023
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಯಾವುದೇ ತೊಂದರೆಗಳು ಕಂಡುಬಂದರೆ ಇ-ಮೇಲ್ ಐಡಿ career@nhdc.org.in ಅಥವಾ ದೂರವಾಣಿ ಸಂಖ್ಯೆ 0120-2329600/0120-2329606 ಗೆ ಕರೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ