• ಹೋಂ
  • »
  • ನ್ಯೂಸ್
  • »
  • Jobs
  • »
  • NHAI Recruitment 2023: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

NHAI Recruitment 2023: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಫೆಬ್ರವರಿ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಈ ಕೂಡಲೇ ತಮ್ಮ ರೆಸ್ಯೂಮ್​ನ್ನು ಇ-ಮೇಲ್ ಮಾಡಿ.

  • News18 Kannada
  • 4-MIN READ
  • Last Updated :
  • New Delhi, India
  • Share this:

NHAI Recruitment 2023: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highway Authority of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಪ್ರಾಜೆಕ್ಟ್​ ಮ್ಯಾನೇಜರ್(Project Manager), ಅಕೌಂಟೆಂಟ್(Accountant) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಈ ಕೂಡಲೇ ತಮ್ಮ ರೆಸ್ಯೂಮ್​ನ್ನು ಇ-ಮೇಲ್ ಮಾಡಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಹುದ್ದೆಪ್ರಾಜೆಕ್ಟ್​ ಮ್ಯಾನೇಜರ್, ಅಕೌಂಟೆಂಟ್
ಒಟ್ಟು ಹುದ್ದೆ10
ವಿದ್ಯಾರ್ಹತೆಬಿಇ/ ಬಿ.ಟೆಕ್
ವೇತನಮಾಸಿಕ ₹ 15,600-39,100
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 17, 2023

ಹುದ್ದೆಯ ಮಾಹಿತಿ:
ಪ್ರಾಜೆಕ್ಟ್​ ಮ್ಯಾನೇಜರ್- 3
ಮ್ಯಾನೇಜರ್- ಫೈನಾನ್ಸ್​ & ಅಕೌಂಟ್ಸ್​-1
ಮ್ಯಾನೇಜರ್ - ಹೈವೇ ಮೇಂಟೇನೆನ್ಸ್​- 1
ಮ್ಯಾನೇಜರ್- HR & ಅಡ್ಮಿನ್- 1
ಅಸಿಸ್ಟೆಂಟ್ ಮ್ಯಾನೇಜರ್- ಅಡ್ಮಿನ್- 1
ಡೆಪ್ಯುಟಿ ಮ್ಯಾನೇಜರ್- ಕಮರ್ಷಿಯಲ್ & ಕಾಂಟ್ರ್ಯಾಕ್ಟ್​- 1
ಅಕೌಂಟೆಂಟ್- 2


ಇದನ್ನೂ ಓದಿ: HALನಲ್ಲಿ ವಿಸಿಟಿಂಗ್ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಹಾಕಿ- ಪ್ರತಿ ಭೇಟಿಗೆ 5,000 ರೂ.


ವಿದ್ಯಾರ್ಹತೆ:
ಪ್ರಾಜೆಕ್ಟ್​ ಮ್ಯಾನೇಜರ್- ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್
ಮ್ಯಾನೇಜರ್- ಫೈನಾನ್ಸ್​ & ಅಕೌಂಟ್ಸ್​- ಸಿಎ, ಸಿಎಂಎ
ಮ್ಯಾನೇಜರ್ - ಹೈವೇ ಮೇಂಟೇನೆನ್ಸ್​- ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್
ಮ್ಯಾನೇಜರ್- HR & ಅಡ್ಮಿನ್- ಎಂಬಿಎ
ಅಸಿಸ್ಟೆಂಟ್ ಮ್ಯಾನೇಜರ್- ಅಡ್ಮಿನ್- ಬಿಬಿಎ, ಎಂಬಿಎ
ಡೆಪ್ಯುಟಿ ಮ್ಯಾನೇಜರ್- ಕಮರ್ಷಿಯಲ್ & ಕಾಂಟ್ರ್ಯಾಕ್ಟ್​- ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್
ಅಕೌಂಟೆಂಟ್- ಸಿಎ, ಸಿಎಂಎ


ವಯೋಮಿತಿ:
ಪ್ರಾಜೆಕ್ಟ್​ ಮ್ಯಾನೇಜರ್- 40 ವರ್ಷ
ಮ್ಯಾನೇಜರ್- ಫೈನಾನ್ಸ್​ & ಅಕೌಂಟ್ಸ್​- 35 ವರ್ಷ
ಮ್ಯಾನೇಜರ್ - ಹೈವೇ ಮೇಂಟೇನೆನ್ಸ್​- 35 ವರ್ಷ
ಮ್ಯಾನೇಜರ್- HR & ಅಡ್ಮಿನ್- 35 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್- ಅಡ್ಮಿನ್- 35 ವರ್ಷ
ಡೆಪ್ಯುಟಿ ಮ್ಯಾನೇಜರ್- ಕಮರ್ಷಿಯಲ್ & ಕಾಂಟ್ರ್ಯಾಕ್ಟ್​- 35 ವರ್ಷ
ಅಕೌಂಟೆಂಟ್- 30 ವರ್ಷ


ವೇತನ:
ಪ್ರಾಜೆಕ್ಟ್​ ಮ್ಯಾನೇಜರ್- ಮಾಸಿಕ ₹ 15,600-39,100
ಮ್ಯಾನೇಜರ್- ಫೈನಾನ್ಸ್​ & ಅಕೌಂಟ್ಸ್​-ಮಾಸಿಕ ₹ 15,600-39,100
ಮ್ಯಾನೇಜರ್ - ಹೈವೇ ಮೇಂಟೇನೆನ್ಸ್​- ಮಾಸಿಕ ₹ 15,600-39,100
ಮ್ಯಾನೇಜರ್- HR & ಅಡ್ಮಿನ್- ಮಾಸಿಕ ₹ 15,600-39,100
ಅಸಿಸ್ಟೆಂಟ್ ಮ್ಯಾನೇಜರ್- ಅಡ್ಮಿನ್- ಮಾಸಿಕ ₹ 9,300-34,800
ಡೆಪ್ಯುಟಿ ಮ್ಯಾನೇಜರ್- ಕಮರ್ಷಿಯಲ್ & ಕಾಂಟ್ರ್ಯಾಕ್ಟ್​- ಮಾಸಿಕ ₹ 9,300-34,800
ಅಕೌಂಟೆಂಟ್- ಮಾಸಿಕ ₹ 5200-20,200


ಇದನ್ನೂ ಓದಿ: Job Offer: ಬೆಂಗಳೂರಿನ ಕಾಫಿ ಮಂಡಳಿ ಕಚೇರಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 40,000 ಸಂಬಳ


ಅನುಭವ:
ಪ್ರಾಜೆಕ್ಟ್​ ಮ್ಯಾನೇಜರ್- ಹೆದ್ದಾರಿ/ರಸ್ತೆ ಸೆಕ್ಟರ್ ಕಂಪನಿಯಲ್ಲಿ ಕನಿಷ್ಠ 8 ವರ್ಷ ಕೆಲಸ ಮಾಡಿದ ಅನುಭವ
ಮ್ಯಾನೇಜರ್- ಫೈನಾನ್ಸ್​ & ಅಕೌಂಟ್ಸ್​- ಹೆದ್ದಾರಿ/ರಸ್ತೆ ಸೆಕ್ಟರ್ ಕಂಪನಿಯಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ಅನುಭವ
ಮ್ಯಾನೇಜರ್ - ಹೈವೇ ಮೇಂಟೇನೆನ್ಸ್​- ಹೆದ್ದಾರಿ/ರಸ್ತೆ ಸೆಕ್ಟರ್ ಕಂಪನಿಯಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ಅನುಭವ
ಮ್ಯಾನೇಜರ್- HR & ಅಡ್ಮಿನ್- ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ಅನುಭವ
ಅಸಿಸ್ಟೆಂಟ್ ಮ್ಯಾನೇಜರ್- ಅಡ್ಮಿನ್- ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ
ಡೆಪ್ಯುಟಿ ಮ್ಯಾನೇಜರ್- ಕಮರ್ಷಿಯಲ್ & ಕಾಂಟ್ರ್ಯಾಕ್ಟ್​- ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ
ಅಕೌಂಟೆಂಟ್- ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಕೆಲಸ ಮಾಡಿದ ಅನುಭವ



ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 04/02/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಫೆಬ್ರವರಿ 17, 2023


ಉದ್ಯೋಗದ ಸ್ಥಳ:
ಪ್ರಾಜೆಕ್ಟ್​ ಮ್ಯಾನೇಜರ್ ಹುದ್ದೆಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ಕೊಡಲಾಗುತ್ತದೆ.
ಇನ್ನುಳಿದ ಹುದ್ದೆಗಳಿಗೆ ದೆಹಲಿಯಲ್ಲಿ ಪೋಸ್ಟಿಂಗ್ ಕೊಡಲಾಗುತ್ತದೆ.


ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ 3 ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ.


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ hr.nhipmpl@nhai.org ಗೆ ಫೆಬ್ರವರಿ 17, 2023 ಸಂಜೆ 6 ಗಂಟೆಯೊಳಗೆ ಕಳುಹಿಸಬೇಕು.

Published by:Latha CG
First published: