NDA Recruitment 2023: ನೀವು 10ನೇ ತರಗತಿ, ಪಿಯುಸಿ ಪಾಸಾಗಿದ್ರೆ, ಕೇಂದ್ರ ಸರ್ಕಾರದ ಉದ್ಯೋಗ ಗಿಟ್ಟಿಸಿಕೊಳ್ಳುವ ಅವಕಾಶವಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯು(National Defence Academy) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಎಷ್ಟು ಹುದ್ದೆಗಳಿವೆ, ಅಭ್ಯರ್ಥಿಗಳ ಅರ್ಹತೆ ಏನಿರಬೇಕು? ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವಾಗ ಎಂಬೆಲ್ಲಾ ಮಾಹಿತಿ ಇಲ್ಲಿದೆ.
ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಈ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಮೂಲಕ ಲೋವರ್ ಡಿವಿಷನ್ ಕ್ಲರ್ಕ್, ಪೇಂಟರ್, ಡ್ರಾಟ್ಸ್ ಮನ್, ಕುಕ್, ಫೈರ್ ಮ್ಯಾನ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿದಂತೆ ಹಲವು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟು 251 ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹುದ್ದೆಯ ಮಾಹಿತಿ ಹೀಗಿದೆ:
ಮಲ್ಟಿ ಟಾಸ್ಕಿಂಗ್ ಸ್ಟಾಫ್- 182
ಲೋವರ್ ಡಿವಿಷನ್ ಕ್ಲರ್ಕ್- 27
ಪೇಂಟರ್-1
ಡ್ರಾಟ್ಸ್ ಮನ್- 1
ಸಿವಿಲ್ ಮೋಟಾರ್ ಡ್ರೈವರ್-8
ಪ್ರಿಂಟರ್-1
ಸಿನಿಮಾ ಪ್ರೊಜೆಕ್ಷನಿಸ್ಟ್-1
ಕುಕ್- 12
ಫೈರ್ ಮ್ಯಾನ್-10
ಬ್ಲಾಕ್ ಸ್ಮಿತ್-1
ಬ್ಯಾಕರ್-2
ಸೈಕಲ್ ರಿಪೈರರ್-5
ಇದನ್ನೂ ಓದಿ: SSLC, PUC ಪಾಸಾಗಿದ್ರೆ ತುಮಕೂರಿನಲ್ಲಿದೆ ಸರ್ಕಾರಿ ನೌಕರಿ- ಇಲ್ಲಿ ಅಪ್ಲೈ ಮಾಡಿ
ಸಂಸ್ಥೆ | ರಾಷ್ಟ್ರೀಯ ರಕ್ಷಣಾ ಅಕಾಡೆಮಿ |
ಹುದ್ದೆ | ಲೋವರ್ ಡಿವಿಷನ್ ಕ್ಲರ್ಕ್, ಪೇಂಟರ್, ಡ್ರಾಟ್ಸ್ ಮನ್, ಕುಕ್, ಫೈರ್ ಮ್ಯಾನ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ |
ಒಟ್ಟು ಹುದ್ದೆ | 251 |
ವೇತನ | ನಿಯಮಾನುಸಾರ |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಅಧಿಕೃತ ವೆಬ್ಸೈಟ್ ndacivrect.gov.in ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಜಾಹೀರಾತಿನ ಬಿಡುಗಡೆ ದಿನಾಂಕದಿಂದ 21 ದಿನಗಳೊಳಗೆ ಅರ್ಜಿಯನ್ನು ಹಾಕಬಹುದು. ಅಂದರೆ, ನೀವು ಜನವರಿ 20, 2023 ರವರೆಗೆ ಅಪ್ಲೈ ಮಾಡಬಹುದು.
ಇದನ್ನೂ ಓದಿ: Post Office Jobs: ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳ ನೇಮಕಾತಿ-10th, PU ಪಾಸಾದವರು ಅಪ್ಲೈ ಮಾಡಿ
ಆಯ್ಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸ್ಕ್ರೀನ್ ಟೆಸ್ಟ್ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ