NCERT Recruitment 2023: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ & ಟ್ರೈನಿಂಗ್( National Council of Educational Research and Training-NCERT) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಪ್ರಿನ್ಸಿಪಾಲ್(Principal) ಹುದ್ದೆಗಳು ಖಾಲಿ ಇವೆ. ಆಸಕ್ತರು ಡಿಸೆಂಬರ್ 30, 2022ರೊಳಗೆ ಆಫ್ಲೈನ್/ ಪೋಸ್ಟ್ ಮುಖಾಂತರ ಅಪ್ಲೈ ಮಾಡಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರು, ಶಿಲ್ಲಾಂಗ್, ಭುವನೇಶ್ವರ್, ಭೂಪಾಲ್ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ & ಟ್ರೈನಿಂಗ್ |
ಹುದ್ದೆ | ಪ್ರಿನ್ಸಿಪಾಲ್ |
ಒಟ್ಟು ಹುದ್ದೆ | 4 |
ವೇತನ | ಮಾಸಿಕ ₹ 37,400-67,000 |
ಉದ್ಯೋಗದ ಸ್ಥಳ | ಮೈಸೂರು, ಶಿಲ್ಲಾಂಗ್, ಭುವನೇಶ್ವರ್, ಭೂಪಾಲ್ |
ವಿದ್ಯಾರ್ಹತೆ:
ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ & ಟ್ರೈನಿಂಗ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಎಚ್.ಡಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ & ಟ್ರೈನಿಂಗ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 30, 2022ಕ್ಕೆ ಗರಿಷ್ಠ 60 ವರ್ಷ ಮೀರಿರಬಾರದು.
ವೇತನ:
ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ & ಟ್ರೈನಿಂಗ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ ತಿಂಗಳಿಗೆ 34,700-67,000 ದವರೆಗೆ ವೇತನ ಕೊಡಲಾಗುತ್ತದೆ.
ಅರ್ಜಿ ಶುಲ್ಕ:
SC/ST/PWD/ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಪಾವತಿಸುವ ಬಗೆ- ಡಿಮ್ಯಾಂಡ್ ಡ್ರಾಫ್ಟ್
ಆಯ್ಕೆ ಪ್ರಕ್ರಿಯೆ:
ಶೈಕ್ಷಣಿಕ ಅರ್ಹತೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಸೆಕ್ಷನ್ ಆಫೀಸರ್
ನೇಮಕಾತಿ-I ಸೆಕ್ಷನ್
ರೂಮ್ ನಂ-12
5ನೇ ಮಹಡಿ
ಜಾಕೀರ್ ಹುಸೇನ್ ಬ್ಲಾಕ್
NCERT
ನವದೆಹಲಿ-110016
ಇದನ್ನೂ ಓದಿ:Air India Recruitment 2023: ಪೈಲಟ್ ಆಗುವ ಕನಸಿದೆಯಾ? PUC ಆಗಿದ್ರೆ ಇಲ್ಲಿ ಅರ್ಜಿ ಹಾಕಿ
ಉದ್ಯೋಗದ ಸ್ಥಳ:
ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಶಿಲ್ಲಾಂಗ್, ಮೈಸೂರು, ಭುವನೇಶ್ವರ, ಭೋಪಾಲ್ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ