• Home
  • »
  • News
  • »
  • jobs
  • »
  • NCDC Recruitment 2023: ಎಂಬಿಎ ಪದವೀಧರರಿಗೆ ಕೇಂದ್ರ ಸರ್ಕಾರಿ ಉದ್ಯೋಗ- 50,000 ಸಂಬಳ

NCDC Recruitment 2023: ಎಂಬಿಎ ಪದವೀಧರರಿಗೆ ಕೇಂದ್ರ ಸರ್ಕಾರಿ ಉದ್ಯೋಗ- 50,000 ಸಂಬಳ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಜನವರಿ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ತಮ್ಮ ರೆಸ್ಯೂಮ್​ನ್ನು ಇ-ಮೇಲ್(E-Mail) ಮಾಡುವುದರ ಮೂಲಕ ಅಪ್ಲೈ ಮಾಡಿ.

  • Share this:

NCDC Recruitment 2023: ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ(National Cooperative Development Corporation-NCDC) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 52 ಯಂಗ್​- ಪ್ರೊಫೆಶನಲ್-I(Young Professional) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಜನವರಿ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ತಮ್ಮ ರೆಸ್ಯೂಮ್​ನ್ನು ಇ-ಮೇಲ್(E-Mail) ಮಾಡುವುದರ ಮೂಲಕ ಅಪ್ಲೈ ಮಾಡಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ
ಹುದ್ದೆಯಂಗ್​- ಪ್ರೊಫೆಶನಲ್-I
ಒಟ್ಟು ಹುದ್ದೆ52
ವೇತನತಿಂಗಳಿಗೆ 50,000
ಉದ್ಯೋಗದ ಸ್ಥಳಭಾರತ

ವಿದ್ಯಾರ್ಹತೆ:
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಮಂಡಳಿಯಿಂದ ಕಡ್ಡಾಯವಾಗಿ ಮಾರ್ಕೆಂಟಿಂಗ್​ನಲ್ಲಿ ಎಂಬಿಎ ಪೂರ್ಣಗೊಳಿಸಿರಬೇಕು.


ವಯೋಮಿತಿ:
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 20, 2023ಕ್ಕೆ 32 ವರ್ಷ ಮೀರಿರಬಾರದು.
ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಇದನ್ನೂ ಓದಿ:ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ 10th, PU ಪಾಸಾದವರಿಗೆ ಬಂಪರ್ ಉದ್ಯೋಗ- ಈಗಲೇ Apply ಮಾಡಿ


ವೇತನ:
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ, ಯಂಗ್​ ಪ್ರೊಫೆಶನಲ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 50,000 ವೇತನ ಕೊಡಲಾಗುತ್ತದೆ.


ಉದ್ಯೋಗದ ಸ್ಥಳ:
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ, ಯಂಗ್​ ಪ್ರೊಫೆಶನಲ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.


ಬೆಂಗಳೂರಿನಲ್ಲಿ 2 ಹುದ್ದೆಗಳು ಖಾಲಿ ಇವೆ.


ಆಯ್ಕೆ ಪ್ರಕ್ರಿಯ:
ಲಿಖಿತ ಪರೀಕ್ಷೆ
ಸಂದರ್ಶನ


ಇದನ್ನೂ ಓದಿ: Jobs: ಕರ್ನಾಟಕ ಸ್ಟೇಟ್ ಮಿನರಲ್ಸ್​​ನಲ್ಲಿ 30 ಹುದ್ದೆಗಳಿಗೆ ಅರ್ಜಿ ಆಹ್ವಾನ-7th ಪಾಸಾದವರೂ ಅಪ್ಲೈ ಮಾಡಿ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿ ಹಾಗೂ ರೆಸ್ಯೂಮ್​ನೊಂದಿಗೆ ನೋಟಿಫಿಕೇಶನ್​ನಲ್ಲಿ ನೀಡಲಾಗಿರುವ ಇ-ಮೇಲ್ ಐಡಿಗೆ ಕಳುಹಿಸಬೇಕು.


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 30/12/2022
ಇ-ಮೇಲ್ ಕಳುಹಿಸಲು ಕೊನೆಯ ದಿನ: 20/01/2023

Published by:Latha CG
First published: