NABARD Financial Services Limited Recruitment 2023: ನಬಾರ್ಡ್ ಫೈನಾನ್ಸ್ ಸರ್ವೀಸಸ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್, ವೆಬ್ ಡೆವಲಪರ್ ಹುದ್ದೆಗಳು ಖಾಲಿ ಇದ್ದು, ಅಸಕ್ತರು ಕೂಡಲೇ ಅರ್ಜಿ ಹಾಕಿ. ಜನವರಿ 15, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಬಿಇ/ಬಿ.ಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ, ಇಂತಹ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಸಂಸ್ಥೆ | ನಬಾರ್ಡ್ ಫೈನಾನ್ಸ್ ಸರ್ವೀಸಸ್ ಲಿಮಿಟೆಡ್ |
ಹುದ್ದೆ | ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್, ವೆಬ್ ಡೆವಲಪರ್ |
ಒಟ್ಟು ಹುದ್ದೆ | 3 |
ವೇತನ | ನಿಯಮಾನುಸಾರ |
ಉದ್ಯೋಗದ ಸ್ಥಳ | ಬೆಂಗಳೂರು |
ಆನ್ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿವೆ ಲಿಂಕ್ಸ್:
ವೆಬ್ ಡೆವಲಪರ್ ಹುದ್ದೆಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.
ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.
ಹುದ್ದೆಯ ಮಾಹಿತಿ:
ವೆಬ್ ಡೆವಲಪರ್ -2
ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್- 1
ಇದನ್ನೂ ಓದಿ: ಮೈಸೂರಿನ CFTRI ನಲ್ಲಿ ಕೆಲಸ ಖಾಲಿ ಇದೆ- Apply ಮಾಡಲು ಇವತ್ತೇ ಲಾಸ್ಟ್ ಡೇಟ್
ವಿದ್ಯಾರ್ಹತೆ ಮತ್ತು ಅನುಭವ:
ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ/ ಬಿ.ಟೆಕ್ ಪೂರ್ಣಗೊಳಿಸಿರಬೇಕು.
ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಡೇಟಾ ಬೇಸ್ ಸ್ಟ್ರಕ್ಚರ್ & ಥಿಯರಿಯ ಬಗ್ಗೆ ಅತ್ಯುತ್ತಮ ಜ್ಞಾನ ಹೊಂದಿರಬೇಕು.
ಡೇಟಾಬೇಸ್ ತಂತ್ರಜ್ಞಾನಗಳೊಂದಿಗೆ ಅನುಭವ (SQL, ಮೈಕ್ರೋಸಾಫ್ಟ್ SQL ಸರ್ವರ್, T-SQL) ಹೊಂದಿರಬೇಕು.
ಕ್ಲೌಡ್ ಸೇವೆಗಳೊಂದಿಗೆ ಅನುಭವ (AWS, Microsoft Azure) ಹೊಂದಿರಬೇಕು.
ವೆಬ್ ಡೆವಲಪರ್ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ /ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.
ASP.Net, C#, CSS, HTML, XML, JavaScript ನ ಬಗ್ಗೆ ಜ್ಞಾನ
ಇರಬೇಕು.
ವಿಷುಯಲ್ ಸ್ಟುಡಿಯೋದಲ್ಲಿ ಉತ್ತಮ ಜ್ಞಾನವನ್ನು ಹೊಂದಿರಬೇಕು.
ಜೊತೆಗೆ MSSQL ನ ಕೆಲಸದ ಜ್ಞಾನ ಇರಬೇಕು.
ಇದನ್ನೂ ಓದಿ: ಯಾದಗಿರಿ ಡಿಸಿ ಆಫೀಸ್ ನೇಮಕಾತಿ- 15 ಹುದ್ದೆಗಳಿಗೆ ಅಪ್ಲೈ ಮಾಡಲು ಇವತ್ತೇ ಕೊನೆ ದಿನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03/01/2023
ಅರ್ಜಿ ಹಾಕಲು ಕೊನೆಯ ದಿನ: ಜನವರಿ 15, 2023
ಅಭ್ಯರ್ಥಿಗಳು ಇ-ಮೇಲ್ ಐಡಿ careers@nabfins.org ಗೆ ಕೂಡ ತಮ್ಮ ರೆಸ್ಯೂಮ್ ಕಳುಹಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ