• ಹೋಂ
  • »
  • ನ್ಯೂಸ್
  • »
  • Jobs
  • »
  • ITBP Recruitment 2023: ಸಬ್​ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- 1 ಲಕ್ಷಕ್ಕೂ ಹೆಚ್ಚು ಸಂಬಳ

ITBP Recruitment 2023: ಸಬ್​ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- 1 ಲಕ್ಷಕ್ಕೂ ಹೆಚ್ಚು ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜೂನ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು. ಇದೇ ಮೇ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.

  • Share this:

ITBP Recruitment 2023: ಇಂಡೋ-ಟೆಬೆಟಿಯನ್ ಗಡಿ ಪೊಲೀಸ್ ಪಡೆ(Indo-Tibetan Border Police Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಸಬ್​ ಇನ್ಸ್​ಪೆಕ್ಟರ್ (ಎಜುಕೇಷನ್ & ಸ್ಟ್ರೆಸ್ ಕೌನ್ಸಲರ್) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಜೂನ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು. ಇದೇ ಮೇ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.




ಹುದ್ದೆಯ ಮಾಹಿತಿ:
ಸಬ್​ ಇನ್ಸ್​ಪೆಕ್ಟರ್ (ಪುರುಷ)- 8
ಸಬ್​ ಇನ್ಸ್​ಪೆಕ್ಟರ್ (ಮಹಿಳೆ)-1


ಇದನ್ನೂ ಓದಿ:EDII Recruitment 2023: ಕಾಮರ್ಸ್​ ಪದವೀಧರರಿಗೆ ಬೆಂಗಳೂರಿನಲ್ಲಿದೆ ಉದ್ಯೋಗ- 3.60 ಲಕ್ಷ ಸಂಬಳ


ವಿದ್ಯಾರ್ಹತೆ:
ಇಂಡೋ-ಟೆಬೆಟಿಯನ್ ಗಡಿ ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.


ವಯೋಮಿತಿ:
ಇಂಡೋ-ಟೆಬೆಟಿಯನ್ ಗಡಿ ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜೂನ್ 17, 2023ಕ್ಕೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 25 ವರ್ಷ ಮೀರಿರಬಾರದು.


ಅರ್ಜಿ ಶುಲ್ಕ:
SC/ ಮಾಜಿ ಸೈನಿಕ/ ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಉಳಿದ ಅಭ್ಯರ್ಥಿಗಳು- 200 ರೂ.
ಪಾವತಿಸುವ ಬಗೆ- ಆನ್​ಲೈನ್


ಇದನ್ನೂ ಓದಿ: NIA Recruitment 2023: ಡಿಗ್ರಿ ಪಾಸಾಗಿದ್ರೆ ಇಲ್ಲಿ ಅಪ್ಲೈ ಮಾಡಿ - ತಿಂಗಳಿಗೆ 92 ಸಾವಿರ ಸಂಬಳ


ವೇತನ:
ಮಾಸಿಕ ₹ 35,400-1,12,400


ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ.

ಸಂಸ್ಥೆಇಂಡೋ-ಟೆಬೆಟಿಯನ್ ಗಡಿ ಪೊಲೀಸ್ ಪಡೆ
ಹುದ್ದೆಸಬ್​ ಇನ್ಸ್​ಪೆಕ್ಟರ್
ಒಟ್ಟು ಹುದ್ದೆ9
ವಿದ್ಯಾರ್ಹತೆಸ್ನಾತಕೋತ್ತರ ಪದವಿ
ವೇತನಮಾಸಿಕ ₹ 35,400-1,12,400
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಜೂನ್ 17, 2023

ಆಯ್ಕೆ ಪ್ರಕ್ರಿಯೆ:
ದೈಹಿಕ ದಕ್ಷತೆಯ ಪರೀಕ್ಷೆ
ದೈಹಿಕ ಪ್ರಮಾಣಿತ ಪರೀಕ್ಷೆ
ಲಿಖಿತ ಪರೀಕ್ಷೆ
ದಾಖಲೆಗಳ ಪರಿಶೀಲನೆ
DME/RME


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

top videos


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/05/2023
    ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 17, 2023

    First published: