ISRO Recruitment 2023: ಇಸ್ರೋದಲ್ಲಿ ಕೆಲಸ ಮಾಡುವ ಭಾಗ್ಯ ನಿಮ್ಮದಾಗಬೇಕೆ? ಇಲ್ಲಿದೆ ನೋಡಿ ಬಂಪರ್ ಅವಕಾಶ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation-ISRO) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 526 ಅಸಿಸ್ಟೆಂಟ್, ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ. ಜನವರಿ 09, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ |
ಹುದ್ದೆ | ಅಸಿಸ್ಟೆಂಟ್, ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ |
ಒಟ್ಟು ಹುದ್ದೆ | 526 |
ವೇತನ | ತಿಂಗಳಿಗೆ 25,500 |
ಉದ್ಯೋಗದ ಸ್ಥಳ | ಭಾರತ |
ಅಸಿಸ್ಟೆಂಟ್- 339
ಜೂನಿಉರ್ ಪರ್ಸನಲ್ ಅಸಿಸ್ಟೆಂಟ್- 153
ಮೇಲ್ದರ್ಜೆ ಡಿವಿಶನ್ ಕ್ಲರ್ಕ್-16
ಸ್ಟೆನೋಗ್ರಾಫರ್- 14
ಅಸಿಸ್ಟೆಂಟ್ (ಸ್ಪೇಸ್)- 3
ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ (ಸ್ಪೇಸ್)- 1
ಇದನ್ನೂ ಓದಿ: Indian Railway: ರೈಲ್ ಇಂಡಿಯಾದಲ್ಲಿ 10 ಹುದ್ದೆಗಳು ಖಾಲಿ- ಸಂಬಳ 2 ಲಕ್ಷದವರೆಗೆ
ವಿದ್ಯಾರ್ಹತೆ:
ಅಸಿಸ್ಟೆಂಟ್- ಪದವಿ
ಜೂನಿಉರ್ ಪರ್ಸನಲ್ ಅಸಿಸ್ಟೆಂಟ್- ಡಿಪ್ಲೋಮಾ, ಪದವಿ
ಮೇಲ್ದರ್ಜೆ ಡಿವಿಶನ್ ಕ್ಲರ್ಕ್-ಪದವಿ
ಸ್ಟೆನೋಗ್ರಾಫರ್- ಡಿಪ್ಲೋಮಾ, ಪದವಿ
ಅಸಿಸ್ಟೆಂಟ್ (ಸ್ಪೇಸ್)- ಪದವಿ
ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ (ಸ್ಪೇಸ್)- ಡಿಪ್ಲೋಮಾ, ಪದವಿ
ವಯೋಮಿತಿ:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 9, 2023ಕ್ಕೆ ಗರಿಷ್ಠ 28 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು-3 ವರ್ಷ
ಎಸ್ಸಿ/ಎಸ್ಟಿ ಅಭ್ಯರ್ಥಿಗಳು- 5 ವರ್ಷ
ಅರ್ಜಿ ಶುಲ್ಕ:
ಮಹಿಳಾ/SC/ST/PWD/ ಮಾಜಿ ಸೈನಿಕ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 100 ರೂ.
ಪಾವತಿಸುವ ವಿಧಾನ- ಆನ್ಲೈನ್/ ಆಫ್ಲೈನ್
ಇದನ್ನೂ ಓದಿ: Bengaluru Jobs: ಡಿಪ್ಲೋಮಾ ಪಾಸಾದವ್ರಿಗೆ ಇಲ್ಲಿದೆ ಒಳ್ಳೆಯ ಉದ್ಯೋಗ-ಡಿ.29ಕ್ಕೆ ನಡೆಯಲಿದೆ ಸಂದರ್ಶನ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್
ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 09/01/2023
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ: 11/01/2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ