ಸರ್ಕಾರಿ ಕೆಲಸಕ್ಕಾಗಿ ಎದುರು ನೋಡುತ್ತಿರುವವರಿಗೆ ಸಂತಸದ ಸುದ್ದಿ ಇಲ್ಲಿದೆ. ಭಾರತೀಯ ನೌಕಾಪಡೆ ಹಿರಿಯ ಮಾಧ್ಯಮಿಕ ನೇಮಕಾತಿ (SSR) ಮೂಲಕ ಅಗ್ನಿವೀರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ joinindiannavy.gov.in ಗೆ ಭೇಟಿ ನೀಡುವ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: | ಭಾರತೀಯ ನೌಕಾಪಡೆ |
ಹುದ್ದೆ : | ಹಿರಿಯ ಮಾಧ್ಯಮಿಕ ನೇಮಕಾತಿ (SSR) |
ಒಟ್ಟು ಹುದ್ದೆಗಳು: | 1, 400 |
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : | ಡಿಸೆಂಬರ್ 8, 2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : | ಡಿಸೆಂಬರ್ 17, 2022 |
ವಿದ್ಯಾರ್ಹತೆ: | ಗಣಿತ ಮತ್ತು ಭೌತಶಾಸ್ತ್ರದಲ್ಲಿ ಸೆಕೆಂಡ್ ಪಿಯು ಪಾಸ್ |
ವಯೋಮಿತಿ: | 18ರಿಂದ 20 ವರ್ಷದೊಳಗೆ |
ಅರ್ಜಿ ಶುಲ್ಕ: | 550 ರೂ. |
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್: | ಇಲ್ಲಿ ಕ್ಲಿಕ್ ಮಾಡಿ |
1) ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
2) ಅಭ್ಯರ್ಥಿಗಳು 01 ಮೇ 2002 ರಿಂದ 31 ಅಕ್ಟೋಬರ್ 2005 ರ ನಡುವೆ ಜನಿಸಿರಬೇಕು.
ಇದನ್ನೂ ಓದಿ: IBPS Recruitment: ಬ್ಯಾಂಕಿಂಗ್ ಹುದ್ದೆಗಳ ಭರ್ತಿಗೆ ಆಹ್ವಾನ: ಡಿ.14ರಂದು ನೇರ ಸಂದರ್ಶನ
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಹಂತ 1: ಆನ್ಲೈನ್ ಪರೀಕ್ಷೆ
ಹಂತ 2: ಲಿಖಿತ ಪರೀಕ್ಷೆ
ಹಂತ 3: PFT ಮತ್ತು ಪ್ರಾಥಮಿಕ ವೈದ್ಯಕೀಯ
ಹಂತ 4: ಅಂತಿಮ ನೇಮಕಾತಿ ವೈದ್ಯಕೀಯ ಪರೀಕ್ಷೆ
ಹೆಚ್ಚಿನ ಮಾಹಿತಿ
ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಅಗ್ನಿಪಥ ಯೋಜನೆಗೆ ಕೇಂದ್ರದ ಸಂಪುಟ ಸಮಿತಿಯಲ್ಲಿ ಅನುಮೋದನೆ ದೊರಕಿದೆ. ಈ ಯೋಜನೆಯು ಒಂದು ಯತಿಹಾಸಿಕ ಯೋಜನೆ ಆಗಿದ್ದು, ಈ ಮೂಲಕ 4 ವರ್ಷಗಳ ಕಾಲ ಸೇನೆಯಲ್ಲಿ ಉತ್ಸಾಹಿ ಯುವಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಕೆಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಮೂಲಕ ಭಾರತೀಯ ಸೇನೆಯು ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ಯೋಜನೆಯ ಮೂಲಕ ಕೆಲಸವನ್ನು ತೊರೆಯುವಾಗ ಅವರುಗಳಿಗೆ ಸೇವಾ ನಿಧಿ ಪ್ಯಾಕೇಜ್ ಗಳನ್ನೂ ಸಹ ನೀಡಲಾಗುತ್ತದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ