Indian Coast Guard Recruitment 2023: ಇಂಡಿಯನ್ ಕೋಸ್ಟ್ ಗಾರ್ಡ್(Indian Coast Guard) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 255 ನಾವಿಕ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಫೆಬ್ರವರಿ 16, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು. ಕೋಸ್ಟ್ ಗಾರ್ಡ್ನಲ್ಲಿ ಉದ್ಯೋಗ ಮಾಡಲು ಬಯಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಇಂಡಿಯನ್ ಕೋಸ್ಟ್ ಗಾರ್ಡ್ |
ಹುದ್ದೆ | ನಾವಿಕ |
ಒಟ್ಟು ಹುದ್ದೆ | 255 |
ವಿದ್ಯಾರ್ಹತೆ | 10ನೇ ತರಗತಿ, ಪಿಯುಸಿ |
ವೇತನ | ತಿಂಗಳಿಗೆ 21,700 ರೂ. |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 16, 2023 |
ವಿದ್ಯಾರ್ಹತೆ:
ನಾವಿಕ (ಜನರಲ್ ಡ್ಯೂಟಿ)- ಪಿಯುಸಿ
ನಾವಿಕ (ಡೊಮೆಸ್ಟಿಕ್ ಬ್ರಾಂಚ್)- 10ನೇ ತರಗತಿ
ಇದನ್ನೂ ಓದಿ: Union Bankನಲ್ಲಿ ಡಿಗ್ರಿ ಪಾಸಾದವರಿಗೆ ಕೆಲಸ- ತಿಂಗಳಿಗೆ 90,000 ಸಂಬಳ
ವಯೋಮಿತಿ:
ಇಂಡಿಯನ್ ಕೋಸ್ಟ್ ಗಾರ್ಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 22 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಒಬಿಸಿ (NCL) ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳು- 300 ರೂ.
ಪಾವತಿಸುವ ವಿಧಾನ-ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಸ್ಟೇಜ್-1 (ಲಿಖಿತ ಪರೀಕ್ಷೆ)
ಸ್ಟೇಜ್ -2 (ಫಿಜಿಕಲ್ ಫಿಟ್ನೆಸ್ ಟೆಸ್ಟ್, ದಾಖಲಾತಿ ಪರಿಶೀಲನೆ, ಇನಿಶಿಯಲ್ ಮೆಡಿಕಲ್ಸ್ ಎಕ್ಸಾಮಿನೇಷನ್)
ಸ್ಟೇಜ್-3 (ದಾಖಲಾತಿ ಪರಿಶೀಲನೆ, ಫೈನಲ್ ಮೆಡಿಕಲ್ ಎಕ್ಸಾಮಿನೇಷನ್, ಒರಿಜಿನಲ್ ಡಾಕ್ಯುಮೆಂಟ್, ಪೊಲೀಸ್ ವೆರಿಫಿಕೇಶನ್, ಇತರೆ ಅಸೋಸಿಯೇಟೆಡ್ ಫಾರ್ಮ್ಸ್)
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 16, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ