Army Jobs: SSLC ಪಾಸಾಗಿದ್ರೆ ₹ 63,000 ಸಂಬಳ- ಈಗಲೇ ಅರ್ಜಿ ಹಾಕಿ

ಭಾರತೀಯ ಸೇನೆ

ಭಾರತೀಯ ಸೇನೆ

ಇದೇ ಮಾರ್ಚ್​ 2, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆಫ್​ಲೈನ್​/ ಪೋಸ್ಟ್​ ಮುಖಾಂತರ ಈ ಹುದ್ದೆಗಳಿಗೆ ಅರ್ಜಿ ಹಾಕಬೇಕು.

  • Share this:

Indian Army Recruitment 2023: ಭಾರತೀಯ ಸೇನೆಯಲ್ಲಿ(Indian Army) ಕೆಲಸ ಮಾಡಬೇಕು ಎನ್ನುವ ಹಂಬಲ ಇರುವವರಿಗೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಸೇನೆ ಸೇರುವ ಕನಸು ಹೊತ್ತಿರುವವರಿಗೆ ಇಂಡಿಯನ್ ಆರ್ಮಿ ಇಲ್ಲೊಂದು ಗುಡ್​ನ್ಯೂಸ್ ನೀಡಿದೆ. 10ನೇ ತರಗತಿ ಪಾಸಾಗಿದ್ರೆ ಸಾಕು, ಭಾರತೀಯ ಸೇನೆಯಲ್ಲಿ ಕೆಲಸಕ್ಕೆ ಸೇರಬಹುದು. ಹೌದು, ಒಟ್ಟು 135 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಸಲು ಭಾರತೀಯ ಸೇನೆ ಮುಂದಾಗಿದೆ. ಅದರಂತೆ ಅನೇಕ ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS), ಮೆಸ್​ ವೈಟರ್ (Mess Waiter) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಇದೇ ಮಾರ್ಚ್​ 2, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆಫ್​ಲೈನ್​/ ಪೋಸ್ಟ್​ ಮುಖಾಂತರ ಈ ಹುದ್ದೆಗಳಿಗೆ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ಸೇನೆ
ಹುದ್ದೆMTS, ಮೆಸ್ ವೈಟರ್
ಒಟ್ಟು ಹುದ್ದೆ135
ವಿದ್ಯಾರ್ಹತೆ10ನೇ ತರಗತಿ
ವೇತನಮಾಸಿಕ ₹
ಉದ್ಯೋಗದ ಸ್ಥಳಮಾಸಿಕ ₹ 19,900-63,200
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್​ 2, 2023

ಹುದ್ದೆಯ ಮಾಹಿತಿ:
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಸಫಾಯವಾಲಾ)- 28
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಮೆಸೇಂಜರ್)- 3
ಮೆಸ್​ ವೈಟರ್- 22
ಬಾರ್ಬರ್- 9
ವಾಶರ್ ಮ್ಯಾನ್- 11
ಮಸಾಲ್ಚಿ- 11
ಕುಕ್- 51


ಇದನ್ನೂ ಓದಿ: UPSC ನೇಮಕಾತಿ: 73 ಹುದ್ದೆಗಳ ಭರ್ತಿಗೆ ಅಧಿಸೂಚನೆ- ಪದವೀಧರರು ಅರ್ಜಿ ಹಾಕಿ


ವಿದ್ಯಾರ್ಹತೆ:
ಭಾರತೀಯ ಸೇನೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.


ವಯೋಮಿತಿ:
ಭಾರತೀಯ ಸೇನೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್​ 2, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಸಫಾಯವಾಲಾ)- ಮಾಸಿಕ ₹ 18,000-56,900
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಮೆಸೇಂಜರ್)- ಮಾಸಿಕ ₹ 18,000-56,900
ಮೆಸ್​ ವೈಟರ್- ಮಾಸಿಕ ₹ 18,000-56,900
ಬಾರ್ಬರ್- ಮಾಸಿಕ ₹ 18,000-56,900
ವಾಶರ್ ಮ್ಯಾನ್- ಮಾಸಿಕ ₹ 18,000-56,900
ಮಸಾಲ್ಚಿ- ಮಾಸಿಕ ₹ 18,000-56,900
ಕುಕ್- ಮಾಸಿಕ ₹ 19,900-63,200


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಪ್ರಾಯೋಗಿಕ/ ಟ್ರೇಡ್ ಪರೀಕ್ಷೆ
ಸಂದರ್ಶನ


ಇದನ್ನೂ ಓದಿ: Banking Jobs: ಡಿಗ್ರಿ ಪಾಸಾದವರಿಗೆ ಬ್ಯಾಂಕ್​ ಆಫ್ ಬರೋಡಾದಲ್ಲಿದೆ ಬಂಪರ್ ಉದ್ಯೋಗ- 18 ಲಕ್ಷ ಸಂಬಳ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್/ ಸ್ಪೀಡ್ ಪೋಸ್ಟ್​​ ಮೂಲಕ ಮಾರ್ಚ್ 2, 2023ಕ್ಕೆ ಮುನ್ನ ಕಳುಹಿಸಬೇಕು.


ಗ್ರೂಪ್ ಕಮಾಂಡರ್
HQ 22 ಮೂವ್‌ಮೆಂಟ್ ಕಂಟ್ರೋಲ್ ಗ್ರೂಪ್
ಪಿನ್-900328
c/o 99 APO




ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 09/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 2, 2023

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು