• ಹೋಂ
  • »
  • ನ್ಯೂಸ್
  • »
  • Jobs
  • »
  • India Post Recruitment 2023: 8ನೇ ಕ್ಲಾಸ್ ಪಾಸಾದವ್ರಿಗೆ ಪೋಸ್ಟ್​ ಆಫೀಸ್ ಕೆಲಸ- ಅಪ್ಲೈ ಮಾಡಲು ನಾಳೆಯೇ ಲಾಸ್ಟ್​ ಡೇಟ್

India Post Recruitment 2023: 8ನೇ ಕ್ಲಾಸ್ ಪಾಸಾದವ್ರಿಗೆ ಪೋಸ್ಟ್​ ಆಫೀಸ್ ಕೆಲಸ- ಅಪ್ಲೈ ಮಾಡಲು ನಾಳೆಯೇ ಲಾಸ್ಟ್​ ಡೇಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಭ್ಯರ್ಥಿಗಳು ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಪೋಸ್ಟ್​ ಆಫೀಸ್ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

  • News18 Kannada
  • 5-MIN READ
  • Last Updated :
  • New Delhi, India
  • Share this:

Post Office Recruitment 2023: ಭಾರತೀಯ ಅಂಚೆ ಇಲಾಖೆ (Indian Postal Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು ಒಂದು ನುರಿತ ಕುಶಲಕರ್ಮಿ(Skilled Artisan) ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 15, 2023 ಅಂದರೆ ನಾಳೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಪೋಸ್ಟ್​ ಆಫೀಸ್ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ಅಂಚೆ ಇಲಾಖೆ
ಹುದ್ದೆನುರಿತ ಕುಶಲಕರ್ಮಿ
ಒಟ್ಟು ಹುದ್ದೆ1
ವಿದ್ಯಾರ್ಹತೆ8ನೇ ತರಗತಿ
ವೇತನಮಾಸಿಕ ₹19,900-63,200
ಉದ್ಯೋಗದ ಸ್ಥಳಚಂಡೀಗಢ
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 15, 2023

ವಿದ್ಯಾರ್ಹತೆ:
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 8ನೇ ತರಗತಿ ಪಾಸಾಗಿರಬೇಕು.


ವಯೋಮಿತಿ:
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ 1, 2023ಕ್ಕೆ ಕನಿಷ್ಠ 18 ವರ್ಷ ಮತ್ತು 30 ವರ್ಷ ಮೀರಿರಬಾರದು.


ಇದನ್ನೂ ಓದಿ:BOB Recruitment 2023: ಬ್ಯಾಂಕ್​ ಆಫ್​ ಬರೋಡಾ ಧಾರವಾಡ ಬ್ರಾಂಚ್​ನಲ್ಲಿ ಬಂಪರ್ ಉದ್ಯೋಗ- ಈಗಲೇ ಅರ್ಜಿ ಹಾಕಿ


ವೇತನ:
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹19,900-63,200 ಸಂಬಳ ಕೊಡಲಾಗುತ್ತದೆ.


ಉದ್ಯೋಗದ ಸ್ಥಳ:
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚಂಡೀಗಢದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಶುಲ್ಕ:
SC/ST/ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಉಳಿದ ಎಲ್ಲಾ ಅಭ್ಯರ್ಥಿಗಳು 100 ರೂ ಅರ್ಜಿ ಶುಲ್ಕ ಪಾವತಿಸಬೇಕು. ಪರೀಕ್ಷಾ ಶುಲ್ಕ 400 ರೂ. ಕಟ್ಟಬೇಕು. ಇಂಡಿಯನ್ ಪೋಸ್ಟಲ್ ಆರ್ಡರ್ ಮೂಲಕ ಶುಲ್ಕ ಪಾವತಿಸಬೇಕು.


ಇದನ್ನೂ ಓದಿ: Job Alert: 70 ವರ್ಷ ಆಗಿದ್ರೂ 75,000 ಸಂಬಳದ ಕೆಲಸ ಕೊಡ್ತಾರೆ- ಇಲ್ಲಿ ಅಪ್ಲೈ ಮಾಡಿ


ಆಯ್ಕೆ ಪ್ರಕ್ರಿಯೆ:
ಟ್ರೇಡಿಂಗ್ ಟೆಸ್ಟ್​



ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 15, 2023 (ನಾಳೆ)


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

top videos


    ಮ್ಯಾನೇಜರ್
    ಮೇಲ್ ಮೋಟಾರ್ ಸೇವೆ
    GPO ಕಟ್ಟಡ
    ಸೆಕ್ಟರ್ 17D
    ಚಂಡೀಗಢ-160017 

    First published: