India Post Recruitment 2023: ಭಾರತೀಯ ಅಂಚೆ ಇಲಾಖೆಯು(India Post) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ದೇಶಾದ್ಯಂತ ಒಟ್ಟು 40,889 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳು ಖಾಲಿ ಇವೆ. ಕರ್ನಾಟಕದಲ್ಲಿಯೂ 3036 ಗ್ರಾಮೀಣ ಡಾಕ್ ಸೇವಕ್(Gramin Dak Sevak-GDS) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಲು ಫೆಬ್ರವರಿ 16, 2023 ಕೊನೆಯ ದಿನವಾಗಿದೆ(Last Date). ಆಸಕ್ತರು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಇಲ್ಲಿ ಅರ್ಜಿ ಸಲ್ಲಿಸಿ.
ಹಂತ-1
ಅಭ್ಯರ್ಥಿಗಳು ಮೊದಲಿಗೆ ವೆಬ್ಸೈಟ್ ವಿಳಾಸ https://indiapostgdsonline.gov.in/ ಗೆ ಭೇಟಿ ನೀಡಬೇಕು.
ಅಲ್ಲಿ Indian Post ಹೋಮ್ ಪೇಜ್ನಲ್ಲಿ 'Stage 1.Registration' ಎಂಬುದರ ಮೇಲೆ ಕ್ಲಿಕ್ ಮಾಡಿ.
ನಂತರ ಅಲ್ಲಿ 2 ಆಯ್ಕೆಗಳು ಕಾಣುತ್ತವೆ. ಅವುಗಳಲ್ಲಿ Registration ಎಂಬುದರ ಮೇಲೆ ಕ್ಲಿಕ್ಕಿಸಿ.
ಆಗ ಅಪ್ಲಿಕೇಶನ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು, ವಿಳಾಸ, ತಂದೆ- ತಾಯಿ ಹೆಸರು, ಜನ್ಮ ದಿನಾಂಕ, ಲಿಂಗ, ಜಾತಿ, 10ನೇ ತರಗತಿ ಪಾಸಾದ ವರ್ಷ, ಮೊಬೈಲ್ ನಂಬರ್, ಇ-ಮೇಲ್ ಐಡಿ ವಿಳಾಸ- ಹೀಗೆ ಅಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ.
ಬಳಿಕ ನೀವು ಅಲ್ಲಿ ನೀಡಲಾದ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿಗೆ OTP ಬರುತ್ತದೆ. ಅದನ್ನು ಅಲ್ಲಿ ಹಾಕಿ, ವ್ಯಾಲಿಡೇಟ್ ಮಾಡಬೇಕು. ಮೊಬೈಲ್ ನಂಬರ್ ನಿಮ್ಮದೇ ಎಂದು ಖಚಿತಪಡಿಸಲು ಈ ಕ್ರಮ ಮಾಡಬೇಕು.
ನಂತರ 'Submit' ಎಂಬುದರ ಮೇಲೆ ಕ್ಲಿಕ್ ಮಾಡಿ.
ರಿಜಿಸ್ಟ್ರೇಷನ್ ನಂಬರ್ ಕ್ರಿಯೇಟ್ ಆಗುತ್ತದೆ. ಅಲ್ಲಿ ನೀವು ಅರ್ಜಿ ಹಾಕಬಯಸುವ ಸರ್ಕಲ್ ಹೆಸರು ನೆನಪಿಟ್ಟುಕೊಳ್ಳಿ.
ಹಂತ- 2
ನಂತರ ಪುನಃ ವೆಬ್ಸೈಟ್ ಗೆ https://indiapostgdsonline.gov.in/ ಭೇಟಿ ನೀಡಿ.
ಅಲ್ಲಿ 'Stage 2.Apply Online >> Apply' ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಈಗಾಗಲೇ ರಿಜಿಸ್ಟ್ರೇಶನ್ ಆಗಿರುವ ನಂಬರ್ನ್ನು ನಮೂದಿಸಿ, ನೀವು ಅರ್ಜಿ ಹಾಕಬಯಸುವ ಸರ್ಕಲ್ನ್ನು ಆಯ್ಕೆ ಮಾಡಿ.
ಬಳಿಕ ಅಲ್ಲಿ' Submit' ಎಂಬುದರ ಮೇಲೆ ಕ್ಲಿಕ್ ಮಾಡಿ.
ಮತ್ತೊಂದು ಪೇಜ್ ಆಗುತ್ತದೆ. ಅಲ್ಲಿ ಕೇಳಲಾಗಿರುವ ಅಗತ್ಯ ಮಾಹಿತಿಗಳನ್ನು ನೀಡಿ. ಅರ್ಜಿಯನ್ನು ಭರ್ತಿ ಮಾಡಿ.
ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಗೆ ಲಿಂಕ್ ನೀಡಲಾಗಿರುತ್ತದೆ. ಅದರ ಮೇಲೆ ಕ್ಲಿಕ್ಕಿಸಿ ಅರ್ಜಿ ಶುಲ್ಕ ಪಾವತಿಸಿ.
ಇದನ್ನೂ ಓದಿ: Post Office Jobs: ಕರ್ನಾಟಕದಲ್ಲಿ 3036 ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ-10th ಪಾಸಾದವರು ಅಪ್ಲೈ ಮಾಡಿ
ಅಭ್ಯರ್ಥಿಗಳು ಇಲ್ಲಿಯೇ 'Application Status' ಎಂಬುದರ ಮೇಲೆ ಕ್ಲಿಕ್ ಮಾಡಿ, ಅರ್ಜಿಯ ಸ್ಟೇಟಸ್ ತಿಳಿಯಬಹುದು.
ಅಪ್ಲಿಕೇಶನ್ ಫೀಸ್ ಕಟ್ಟಿದ ಬಳಿಕ ಮುಂದಿನ ರೆಫೆರೆನ್ಸ್ಗಾಗಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ