Income Tax Department Recruitment 2023: ಆದಾಯ ತೆರಿಗೆ ಇಲಾಖೆ (Income Tax Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 41 ಮಲ್ಟಿ ಟಾಸ್ಕಿಂಗ್ ಸ್ಟಾಫ್, ಟ್ಯಾಕ್ಸ್ ಅಸಿಸ್ಟೆಂಟ್(Tax Assistant) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಏಪ್ರಿಲ್ 14, 2023 ಅಂದರೆ ಇಂದು ಅರ್ಜಿ ಹಾಕಲು ಕೊನೆಯ ದಿನವಾಗಿದ್ದು (Last Date), ಅಭ್ಯರ್ಥಿಗಳು ಆಫ್ಲೈನ್ (Offline)ಮೂಲಕ ಅಪ್ಲಿಕೇಶನ್ ಹಾಕಬೇಕು. ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇದು ಬಂಪರ್ ಅವಕಾಶವಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಆದಾಯ ತೆರಿಗೆ ಇಲಾಖೆ |
ಹುದ್ದೆ | ಮಲ್ಟಿ ಟಾಸ್ಕಿಂಗ್ ಸ್ಟಾಫ್, ಟ್ಯಾಕ್ಸ್ ಅಸಿಸ್ಟೆಂಟ್ |
ಒಟ್ಟು ಹುದ್ದೆ | 41 |
ವಿದ್ಯಾರ್ಹತೆ | ಪದವಿ, 10ನೇ ತರಗತಿ |
ವೇತನ | ಮಾಸಿಕ ₹ 9,300-34,800 |
ಉದ್ಯೋಗದ ಸ್ಥಳ | ಉತ್ತರಾಖಂಡ, ಉತ್ತರ ಪ್ರದೇಶ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 14, 2023 (ಇಂದು) |
ಇದನ್ನೂ ಓದಿ: BOB Recruitment 2023: ಬ್ಯಾಂಕ್ ಆಫ್ ಬರೋಡಾ ಧಾರವಾಡ ಬ್ರಾಂಚ್ನಲ್ಲಿ ಬಂಪರ್ ಉದ್ಯೋಗ- ಈಗಲೇ ಅರ್ಜಿ ಹಾಕಿ
ವಿದ್ಯಾರ್ಹತೆ:
ಇನ್ಸ್ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್- ಪದವಿ
ಟ್ಯಾಕ್ಸ್ ಅಸಿಸ್ಟೆಂಟ್- ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್- 10ನೇ ತರಗತಿ
ವಯೋಮಿತಿ:
ಇನ್ಸ್ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್- 18 ರಿಂದ 30 ವರ್ಷ
ಟ್ಯಾಕ್ಸ್ ಅಸಿಸ್ಟೆಂಟ್- 18 ರಿಂದ 27 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್- 18 ರಿಂದ 25 ವರ್ಷ
ವೇತನ:
ಇನ್ಸ್ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್- ಮಾಸಿಕ ₹ 9,300-34,800
ಟ್ಯಾಕ್ಸ್ ಅಸಿಸ್ಟೆಂಟ್- ಮಾಸಿಕ ₹5,200-20,200
ಮಲ್ಟಿ ಟಾಸ್ಕಿಂಗ್ ಸ್ಟಾಫ್- ಮಾಸಿಕ ₹5,200-20,200
ಇದನ್ನೂ ಓದಿ: KFCSC Recruitment 2023: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ 386 ಹುದ್ದೆಗಳ ನೇಮಕ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಆದಾಯ ತೆರಿಗೆಯ ಹೆಚ್ಚುವರಿ ಆಯುಕ್ತರು (ಆಡಳಿತ)
2ನೇ ಮಹಡಿ
ಆಯಕರ್ ಭವನ
16/69
ಸಿವಿಲ್ ಲೈನ್ಸ್
ಕಾನ್ಪುರ್ - 208001
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 14, 2023 (ಇಂದು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ