Income Tax Bengaluru Recruitment 2023: ನೀವು 10ನೇ ತರಗತಿ ಪಾಸಾಗಿದ್ರೆ ಇಲ್ಲಿದೆ ನೋಡಿ ಬಂಪರ್ ಉದ್ಯೋಗ. ಬೆಂಗಳೂರಿನ ಆದಾಯ ತೆರಿಗೆ ಕಚೇರಿಯು(Income Tax Department) ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಹೀಗಾಗಿ ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಕೇಂದ್ರ ಸರ್ಕಾರದ ಉದ್ಯೋಗ(Central Government Job) ಹುಡುಕುತ್ತಿದ್ರೆ ಇದೊಂದು ಸುವರ್ಣಾವಕಾಶವಾಗಿದೆ. ಒಟ್ಟು 61 ಆದಾಯ ತೆರಿಗೆ ಇನ್ಸ್ಪೆಕ್ಟರ್(Income Tax Inspector), ಟ್ಯಾಕ್ಸ್ ಅಸಿಸ್ಟೆಂಟ್(Tax Assistant) ಹುದ್ದೆಗಳು ಖಾಲಿ ಇವೆ. ಮಾರ್ಚ್ 24, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್ಲೈನ್/ ಪೋಸ್ಟ್ ಮುಖಾಂತರ ಅರ್ಜಿ ಹಾಕಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಆದಾಯ ತೆರಿಗೆ ಇಲಾಖೆ |
ಹುದ್ದೆ | ಆದಾಯ ತೆರಿಗೆ ಇನ್ಸ್ಪೆಕ್ಟರ್, ಟ್ಯಾಕ್ಸ್ ಅಸಿಸ್ಟೆಂಟ್ |
ಒಟ್ಟು ಹುದ್ದೆ | 61 |
ವಿದ್ಯಾರ್ಹತೆ | 10ನೇ ತರಗತಿ, ಪದವಿ |
ವೇತನ | ಮಾಸಿಕ ₹44,900-1,42,400 |
ಉದ್ಯೋಗದ ಸ್ಥಳ | ಬೆಂಗಳೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 24, 2023 |
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 24, 2023
ಇದನ್ನೂ ಓದಿ: Job Alert: ಸ್ಟಾಫ್ ಸೆಲೆಕ್ಷನ್ ಕಮಿಷನ್ನಲ್ಲಿ 10th ಪಾಸಾದವರಿಗೆ ಕೆಲಸ ಇದೆ- ಈಗಲೇ ಅರ್ಜಿ ಹಾಕಿ
ವಿದ್ಯಾರ್ಹತೆ:
ಆದಾಯ ತೆರಿಗೆ ಇನ್ಸ್ಪೆಕ್ಟರ್- ಪದವಿ
ಟ್ಯಾಕ್ಸ್ ಅಸಿಸ್ಟೆಂಟ್- ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS)-10ನೇ ತರಗತಿ
ವೇತನ:
ಆದಾಯ ತೆರಿಗೆ ಇನ್ಸ್ಪೆಕ್ಟರ್- ಮಾಸಿಕ ₹44,900-1,42,400
ಟ್ಯಾಕ್ಸ್ ಅಸಿಸ್ಟೆಂಟ್ - ಮಾಸಿಕ ₹25,500-81,100
ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS)- ಮಾಸಿಕ ₹18,000-56,900
ವಯೋಮಿತಿ:
ಆದಾಯ ತೆರಿಗೆ ಇನ್ಸ್ಪೆಕ್ಟರ್- 30 ವರ್ಷ
ಟ್ಯಾಕ್ಸ್ ಅಸಿಸ್ಟೆಂಟ್ - 18ರಿಂದ 27 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS)-18 ರಿಂದ 25 ವರ್ಷ
ವಯೋಮಿತಿ ಸಡಿಲಿಕೆ:
ಮೆರಿಟೋರಿಯಸ್ ಕ್ರೀಡಾ ಅಭ್ಯರ್ಥಿಗಳು: 05 ವರ್ಷಗಳು
SC/ST ಅಭ್ಯರ್ಥಿಗಳು- 10 ವರ್ಷ
ಇದನ್ನೂ ಓದಿ: SIDBI ಬ್ಯಾಂಕ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಬೆಂಗಳೂರಿನಲ್ಲಿ ಉದ್ಯೋಗ
ಅರ್ಜಿ ಶುಲ್ಕ:
SC/ST/PWD/ ಮಾಜಿ ಸೈನಿಕ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳು- 100 ರೂ.
ಪಾವತಿಸುವ ಬಗೆ- ಪೋಸ್ಟಲ್ ಆರ್ಡರ್/ ಡಿಮ್ಯಾಂಡ್ ಡ್ರಾಫ್ಟ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಆದಾಯ ತೆರಿಗೆ ಆಯುಕ್ತರು (ನಿರ್ವಾಹಕರು ಮತ್ತು TPS)
O/o ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರು
ಕರ್ನಾಟಕ ಮತ್ತು ಗೋವಾ ಪ್ರದೇಶ
ಕೇಂದ್ರ ಕಂದಾಯ ಕಟ್ಟಡ
ನಂ.1, ಕ್ವೀನ್ಸ್ ರಸ್ತೆ
ಬೆಂಗಳೂರು
ಕರ್ನಾಟಕ-560001
ಗಮನಿಸಿ: ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣದ ಸಂದರ್ಭದಲ್ಲಿ, ಅಭ್ಯರ್ಥಿಗಳು bangalore.ito.hq.pers.trg@incometax.gov.in ಗೆ ಸಂಪರ್ಕಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ