• ಹೋಂ
  • »
  • ನ್ಯೂಸ್
  • »
  • Jobs
  • »
  • JOBS: ಆದಾಯ ತೆರಿಗೆ ಇಲಾಖೆಯಲ್ಲಿ SSLC ಪಾಸಾದವರಿಗೆ ಉದ್ಯೋಗ- ತಿಂಗಳಿಗೆ 1.42 ಲಕ್ಷ ಸಂಬಳ

JOBS: ಆದಾಯ ತೆರಿಗೆ ಇಲಾಖೆಯಲ್ಲಿ SSLC ಪಾಸಾದವರಿಗೆ ಉದ್ಯೋಗ- ತಿಂಗಳಿಗೆ 1.42 ಲಕ್ಷ ಸಂಬಳ

ಆದಾಯ ತೆರಿಗೆ ಇಲಾಖೆ

ಆದಾಯ ತೆರಿಗೆ ಇಲಾಖೆ

ಮಾರ್ಚ್​ 17, 2023 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು (Last Date), ಅಭ್ಯರ್ಥಿಗಳು ಆಫ್​ಲೈನ್​ (Offline)ಮೂಲಕ ಅಪ್ಲಿಕೇಶನ್ ಹಾಕಬೇಕು. ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇದು ಬಂಪರ್ ಅವಕಾಶವಾಗಿದೆ.

  • Share this:

Income Tax Department Recruitment 2023: ಆದಾಯ ತೆರಿಗೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 20 ಟ್ಯಾಕ್ಸ್​ ಇನ್ಸ್​ಪೆಕ್ಟರ್, ಟ್ಯಾಕ್ಸ್​ ಅಸಿಸ್ಟೆಂಟ್(Tax Assistant) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಮಾರ್ಚ್​ 17, 2023 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು (Last Date), ಅಭ್ಯರ್ಥಿಗಳು ಆಫ್​ಲೈನ್​ (Offline)ಮೂಲಕ ಅಪ್ಲಿಕೇಶನ್ ಹಾಕಬೇಕು. ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇದು ಬಂಪರ್ ಅವಕಾಶವಾಗಿದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಆದಾಯ ತೆರಿಗೆ ಇಲಾಖೆ
ಹುದ್ದೆಟ್ಯಾಕ್ಸ್​ ಇನ್ಸ್​ಪೆಕ್ಟರ್, ಟ್ಯಾಕ್ಸ್​ ಅಸಿಸ್ಟೆಂಟ್
ಒಟ್ಟು ಹುದ್ದೆ20
ವಿದ್ಯಾರ್ಹತೆಪದವಿ, 10ನೇ ತರಗತಿ
ವೇತನಮಾಸಿಕ ₹ 44,900-1,42,400
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್​ 17, 2023
ಉದ್ಯೋಗದ ಸ್ಥಳಚಂಡೀಗಢ

ಹುದ್ದೆಯ ಮಾಹಿತಿ:
ಇನ್​ಕಮ್ ಟ್ಯಾಕ್ಸ್​ ಇನ್ಸ್​ಪೆಕ್ಟರ್- 3
ಟ್ಯಾಕ್ಸ್​ ಅಸಿಸ್ಟೆಂಟ್- 7
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)-10


ಇದನ್ನೂ ಓದಿ: NABFINS Recruitment 2023: ನಬಾರ್ಡ್​ ಫೈನಾನ್ಸ್​​ನಲ್ಲಿ ಕೆಲಸ ಖಾಲಿ ಇದೆ- ಫೆ. 28ರೊಳಗೆ ಅರ್ಜಿ ಹಾಕಿ


ವಿದ್ಯಾರ್ಹತೆ:
ಇನ್​ಕಮ್ ಟ್ಯಾಕ್ಸ್​ ಇನ್ಸ್​ಪೆಕ್ಟರ್- ಪದವಿ
ಟ್ಯಾಕ್ಸ್​ ಅಸಿಸ್ಟೆಂಟ್- ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)-10ನೇ ತರಗತಿ


ವಯೋಮಿತಿ:
ಇನ್​ಕಮ್ ಟ್ಯಾಕ್ಸ್​ ಇನ್ಸ್​ಪೆಕ್ಟರ್- 18 ರಿಂದ 30 ವರ್ಷ
ಟ್ಯಾಕ್ಸ್​ ಅಸಿಸ್ಟೆಂಟ್- 18 ರಿಂದ 27 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)-18 ರಿಂದ 25 ವರ್ಷ


ವಯೋಮಿತಿ ಸಡಿಲಿಕೆ:
ಜನರಲ್/ ಒಬಿಸಿ ಅಭ್ಯರ್ಥಿಗಳು- 5 ವರ್ಷ
SC/ST ಅಭ್ಯರ್ಥಿಗಳು- 10 ವರ್ಷ


ವೇತನ:
ಇನ್​ಕಮ್ ಟ್ಯಾಕ್ಸ್​ ಇನ್ಸ್​ಪೆಕ್ಟರ್- ಮಾಸಿಕ ₹ 44,900-1,42,400
ಟ್ಯಾಕ್ಸ್​ ಅಸಿಸ್ಟೆಂಟ್- ಮಾಸಿಕ ₹ 25,500- 81,100
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)-ಮಾಸಿಕ ₹ 18,000- 56,900ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ಟ್ರಯಲ್ಸ್​
ಲಿಖಿತ ಪರೀಕ್ಷೆ
ಸಂದರ್ಶನ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಆದಾಯ ತೆರಿಗೆ ಉಪ ಆಯುಕ್ತರು (Hq)(Admn)
O/o ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರು
NWR
ಆಯಕರ್ ಭವನ
ಸೆಕ್ಟರ್-17E
ಚಂಡೀಗಢ-160017


ಇದನ್ನೂ ಓದಿ:  Mandya Jobs: ಕೃಷಿ ಇಲಾಖೆಯಲ್ಲಿದೆ ಬಂಪರ್ ಉದ್ಯೋಗ, ಮಂಡ್ಯದಲ್ಲಿ ಪೋಸ್ಟಿಂಗ್- ಈಗಲೇ ಅರ್ಜಿ ಹಾಕಿ


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 17, 2023

Published by:Latha CG
First published: