IISc Recruitment 2022: ಭಾರತೀಯ ವಿಜ್ಞಾನ ಸಂಸ್ಥೆ(Indian Institute of Science)ಯಲ್ಲಿ ಆಫೀಸರ್-ಫೈನಾನ್ಸ್ & ಅಕೌಂಟ್ಸ್ ಹುದ್ದೆ(Officer-Finance & Accounts)ಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರಿ(Bengaluru)ನಲ್ಲಿ ವೃತ್ತಿ ಮಾಡ ಬಯಸುವವರು ಹಾಗೂ ಬಿ.ಕಾಂ, ಎಂಬಿಎ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಡಿಸೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಈಗಲೇ ಇ-ಮೇಲ್ ಮಾಡಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಭಾರತೀಯ ವಿಜ್ಞಾನ ಸಂಸ್ಥೆ |
ಹುದ್ದೆ | ಆಫೀಸರ್-ಫೈನಾನ್ಸ್ & ಅಕೌಂಟ್ಸ್ |
ವಿದ್ಯಾರ್ಹತೆ | ಬಿ.ಕಾಂ, ಎಂಬಿಎ |
ವೇತನ | ನಿಯಮಾನುಸಾರ |
ಉದ್ಯೋಗದ ಸ್ಥಳ | ಬೆಂಗಳೂರು |
ವಯೋಮಿತಿ:
ಭಾರತೀಯ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 1, 1985 ರ ನಂತರ ಜನಿಸಿರಬೇಕು.
ಇದನ್ನೂ ಓದಿ: TISS Recruitment 2022: ಡಿಗ್ರಿ ಮುಗಿಸಿ ಕೆಲಸ ಹುಡುಕುತ್ತಿದ್ದೀರಾ? ಇಲ್ಲಿದೆ ಬಂಪರ್ ಅವಕಾಶ-ಈಗಲೇ ರೆಸ್ಯೂಮ್ ಕಳುಹಿಸಿ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಇ-ಮೇಲ್ ಐಡಿ office.sid@iisc.ac.in ಗೆ ಡಿಸೆಂಬರ್ 30 ರೊಳಗೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 08/12/2022
ಇ-ಮೇಲ್ ಕಳುಹಿಸಲು ಕೊನೆ ದಿನ: 30/12/2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ