HAL Recruitment 2023: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 1 ವಿಸಿಟಿಂಗ್ ಕನ್ಸಲ್ಟೆಂಟ್(Visiting Consultant) ಹುದ್ದೆ ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಹೆಚ್ಚಿನ ಮಾಹಿತಿಗಾಗಿ hal-india.co.in ಗೆ ಭೇಟಿ ನೀಡಬಹುದು. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ |
ಹುದ್ದೆ | ವಿಸಿಟಿಂಗ್ ಕನ್ಸಲ್ಟೆಂಟ್ |
ಒಟ್ಟು ಹುದ್ದೆ | 1 |
ವಿದ್ಯಾರ್ಹತೆ | ಎಂಡಿಎಸ್ |
ವೇತನ | ಪ್ರತಿ ಭೇಟಿಗೆ 5,000 |
ಉದ್ಯೋಗದ ಸ್ಥಳ | ಬೆಂಗಳೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 20, 2023 |
ವಯೋಮಿತಿ:
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 1, 2023ಕ್ಕೆ 65 ವರ್ಷದೊಳಗಿರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನೂ ಓದಿ: Job Offer: ಬೆಂಗಳೂರಿನ ಕಾಫಿ ಮಂಡಳಿ ಕಚೇರಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 40,000 ಸಂಬಳ
ಅನುಭವ:
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಅವಧಿ:
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ವಿಸಿಟಿಂಗ್ ಕನ್ಸಲ್ಟೆಂಟ್ ಹುದ್ದೆಗೆ ಅಭ್ಯರ್ಥಿಗಳನ್ನು ಕನಿಷ್ಠ 2 ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ.
ಎಷ್ಟು ಭೇಟಿ ಇರುತ್ತವೆ?
ವಾರಕ್ಕೆ ಕನಿಷ್ಠ 3 ಭೇಟಿಗಳು ಇರುತ್ತವೆ. ಪ್ರತಿ ಭೇಟಿಯೂ 2 ಗಂಟೆಗಳ ಅವಧಿಯದ್ದಾಗಿರುತ್ತದೆ.
ಇದನ್ನೂ ಓದಿ: Karnataka Jobs: ತಿಂಗಳಿಗೆ 50,000 ಸಂಬಳ- ಆರೋಗ್ಯ ಸೌಧದಲ್ಲಿ ಫೆ.15ಕ್ಕೆ ಸಂದರ್ಶನ
ಸಂಬಳ ಎಷ್ಟು?
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಪ್ರತಿ ಭೇಟಿಗೆ 5000 ರೂ. ಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ:
ಅಭ್ಯರ್ಥಿಗಳು ಯಾವುದೇ ಗೊಂದಲಗಳಿದ್ದಲ್ಲಿ ದೂರವಾಣಿ ಸಂಖ್ಯೆ 080-22323005/22328023 ಅಥವಾ hr.medical@hal-india.co.in ಗೆ ಸಂಪರ್ಕಿಸಿ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಮುಖ್ಯ ವ್ಯವಸ್ಥಾಪಕರು (HR)
ಕೈಗಾರಿಕಾ ಆರೋಗ್ಯ ಕೇಂದ್ರ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಬೆಂಗಳೂರು ಕಾಂಪ್ಲೆಕ್ಸ್
ಸುರಂಜಂದಾಸ್ ರಸ್ತೆ, (ಹಳೆಯ ವಿಮಾನ ನಿಲ್ದಾಣದ ಹತ್ತಿರ)
ಬೆಂಗಳೂರು-560017
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 20, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ