• Home
  • »
  • News
  • »
  • jobs
  • »
  • Job Alert: ಬೆಂಗಳೂರಿನ HALನಲ್ಲಿ 30 ಹುದ್ದೆಗಳಿಗೆ ಅರ್ಜಿ ಆಹ್ವಾನ- ಎರಡೂವರೆ ಲಕ್ಷ ಸಂಬಳ

Job Alert: ಬೆಂಗಳೂರಿನ HALನಲ್ಲಿ 30 ಹುದ್ದೆಗಳಿಗೆ ಅರ್ಜಿ ಆಹ್ವಾನ- ಎರಡೂವರೆ ಲಕ್ಷ ಸಂಬಳ

HAL

HAL

ಒಟ್ಟು 30 ಮ್ಯಾನೇಜರ್, ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್​​ಲೈನ್​ (Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 31, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

HAL Recruitment 2023: ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ​(Hindustan Aeronautics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 30 ಮ್ಯಾನೇಜರ್, ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್​​ಲೈನ್​ (Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 31, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.


ಹೆಚ್ಚಿನ ಮಾಹಿತಿಗಾಗಿ hal-india.co.in ಗೆ ಭೇಟಿ ನೀಡಬಹುದು. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್
ಹುದ್ದೆಮ್ಯಾನೇಜರ್, ಎಂಜಿನಿಯರ್
ಒಟ್ಟು ಹುದ್ದೆ30
ವಿದ್ಯಾರ್ಹತೆಬಿಇ/ ಬಿ.ಟೆಕ್, ಪದವಿ
ವೇತನಮಾಸಿಕ ₹40,000- 2,,40,000
ಉದ್ಯೋಗದ ಸ್ಥಳಬೆಂಗಳೂರು, ನಾಸಿಕ್,  ಲಕ್ನೋ
ಅರ್ಜಿ ಸಲ್ಲಿಸಲು ಕೊನೆಯ ದಿನಜನವರಿ 31, 2023

 ಹುದ್ದೆಯ ಮಾಹಿತಿ:
ಹೆಡ್​ ಆಫ್​ ಕಸ್ಟಮರ್ ಸರ್ವೀಸ್ - 4
ಫ್ಲೀಟ್ ಸಿಂಗಲ್ ಪಾಯಿಂಟ್ ಆಫ್​ ಕಾಂಟ್ಯಾಕ್ಟ್​ (SPOC)- 6
ಮ್ಯಾನೇಜರ್ (ಕಸ್ಟಮರ್ ಸರ್ವೀಸ್)- 6
ಎಂಜಿನಿಯರ್ (ಕಸ್ಟಮರ್ ಸರ್ವೀಸ್)- 14


ವಿದ್ಯಾರ್ಹತೆ:
ಅಭ್ಯರ್ಥಿಗಳು ಕಡ್ಡಾಯವಾಗಿ ಪದವಿ, ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಏರೋನಾಟಿಕಲ್/ಪ್ರೊಡಕ್ಷನ್ ಇಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.


ಇದನ್ನೂ ಓದಿ: JOBS: ಕರ್ನಾಟಕದ ಈ ಜಿಲ್ಲೆಯಲ್ಲಿ 25 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- 2.18 ಲಕ್ಷ ಸಂಬಳ


 ವಯೋಮಿತಿ:
ಹೆಡ್​ ಆಫ್​ ಕಸ್ಟಮರ್ ಸರ್ವೀಸ್ - 48 ವರ್ಷ
ಫ್ಲೀಟ್ ಸಿಂಗಲ್ ಪಾಯಿಂಟ್ ಆಫ್​ ಕಾಂಟ್ಯಾಕ್ಟ್​ (SPOC)- 48 ವರ್ಷ
ಮ್ಯಾನೇಜರ್ (ಕಸ್ಟಮರ್ ಸರ್ವೀಸ್)- 45 ವರ್ಷ
ಎಂಜಿನಿಯರ್ (ಕಸ್ಟಮರ್ ಸರ್ವೀಸ್)- 35 ವರ್ಷ


ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳಿಗೆ- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ- 500 ರೂ.
ಪಾವತಿಸುವ ಬಗೆ- ಚಲನ್


ಉದ್ಯೋಗದ ಸ್ಥಳ:
ಲಕ್ನೋ, ನಾಸಿಕ್, ಬೆಂಗಳೂರು


ಆಯ್ಕೆ ಪ್ರಕ್ರಿಯೆ:
ಸ್ಕ್ರೀನಿಂಗ್ ಟೆಸ್ಟ್
ಲಿಖಿತ ಪರೀಕ್ಷೆ
ಸಂದರ್ಶನ


 ವೇತನ:
ಹೆಡ್​ ಆಫ್​ ಕಸ್ಟಮರ್ ಸರ್ವೀಸ್ - ಮಾಸಿಕ ₹ 90,000-2,40,000
ಫ್ಲೀಟ್ ಸಿಂಗಲ್ ಪಾಯಿಂಟ್ ಆಫ್​ ಕಾಂಟ್ಯಾಕ್ಟ್​ (SPOC)- ಮಾಸಿಕ ₹ 80,000-2,22,000
ಮ್ಯಾನೇಜರ್ (ಕಸ್ಟಮರ್ ಸರ್ವೀಸ್)- ಮಾಸಿಕ ₹60,000- 1,80,000
ಎಂಜಿನಿಯರ್ (ಕಸ್ಟಮರ್ ಸರ್ವೀಸ್)- ಮಾಸಿಕ ₹40,000- 1,40,000



ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಮುಖ್ಯ ವ್ಯವಸ್ಥಾಪಕರು (HR)
ನೇಮಕಾತಿ ವಿಭಾಗ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
ಕಾರ್ಪೊರೇಟ್ ಕಚೇರಿ
15/1 ಕಬ್ಬನ್ ರಸ್ತೆ
ಬೆಂಗಳೂರು - 560001


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 31, 2023

Published by:Latha CG
First published: