HAL Recruitment 2023: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 6 ಆಫೀಸರ್, ಸೆಕ್ಯುರಿಟಿ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ hal-india.co.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ |
ಹುದ್ದೆ | ಆಫೀಸರ್, ಸೆಕ್ಯುರಿಟಿ |
ಒಟ್ಟು ಹುದ್ದೆ | 6 |
ವಿದ್ಯಾರ್ಹತೆ | ಪದವಿ, ಸ್ನಾತಕೋತ್ತರ ಪದವಿ |
ವೇತನ | ಮಾಸಿಕ ₹ 40,000-1,40,000 |
ಉದ್ಯೋಗದ ಸ್ಥಳ | ಕರ್ನಾಟಕ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 15, 2023 |
ಇದನ್ನೂ ಓದಿ: NWKRTC Recruitment 2023: ವಾಯುವ್ಯ ಕರ್ನಾಟಕ ಸಾರಿಗೆಯಲ್ಲಿ 71 ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ:
ಸೆಕ್ಯುರಿಟಿ ಆಫೀಸರ್- ಅಧಿಸೂಚನೆ ಪರಿಶೀಲಿಸಿ
ಫೈಯರ್ ಆಫೀಸರ್- ಫೈಯರ್ ಎಂಜಿನಿಯರಿಂಗ್ನಲ್ಲಿ ಪದವಿ, ಬಿ.ಎಸ್ಸಿ
ಆಫೀಸರ್/ ಅಸಿಸ್ಟೆಂಟ್ ಆಫೀಸರ್- ಪದವಿ, ಸ್ನಾತಕೋತ್ತರ ಪದವಿ
ವಯೋಮಿತಿ:
ಸೆಕ್ಯುರಿಟಿ ಆಫೀಸರ್- 35 ವರ್ಷ
ಫೈಯರ್ ಆಫೀಸರ್- ಅಧಿಸೂಚನೆ ಪರಿಶೀಲಿಸಿ
ಆಫೀಸರ್/ ಅಸಿಸ್ಟೆಂಟ್ ಆಫೀಸರ್- 35 ವರ್ಷ
ವಯೋಮಿತಿ ಸಡಿಲಿಕೆ:
SC ಅಭ್ಯರ್ಥಿಗಳು- 5 ವರ್ಷ
OBC (NCL) ಅಭ್ಯರ್ಥಿಗಳು- 3 ವರ್ಷ
PWD ಅಭ್ಯರ್ಥಿಗಳು- 10 ವರ್ಷ
ಇದನ್ನೂ ಓದಿ: Mysuru: ಜೆಎಸ್ಎಸ್ ಮಹಾವಿದ್ಯಾಪೀಠದಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ- ಪದವೀಧರರು Apply ಮಾಡಿ
ವೇತನ:
ಸೆಕ್ಯುರಿಟಿ ಆಫೀಸರ್- ಮಾಸಿಕ ₹ 40,000-1,40,000
ಫೈಯರ್ ಆಫೀಸರ್- ಮಾಸಿಕ ₹ 40,000-1,40,000
ಆಫೀಸರ್/ ಅಸಿಸ್ಟೆಂಟ್ ಆಫೀಸರ್- ಮಾಸಿಕ ₹ 30,000-1,40,000
ಉದ್ಯೋಗದ ಸ್ಥಳ:
ಉತ್ತರ ಪ್ರದೇಶ, ಕರ್ನಾಟಕ, ಒಡಿಶಾ
ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳು- 500 ರೂ.
ಪಾವತಿಸುವ ಬಗೆ- ಚಲನ್
ಆಯ್ಕೆ ಪ್ರಕ್ರಿಯೆ:
ಕ್ವಾಲಿಫಿಕೇಶನ್
ಅನುಭವ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಮುಖ್ಯ ವ್ಯವಸ್ಥಾಪಕರು (HR)
ನೇಮಕಾತಿ ವಿಭಾಗ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
ಕಾರ್ಪೊರೇಟ್ ಕಚೇರಿ
15/1 ಕಬ್ಬನ್ ರಸ್ತೆ
ಬೆಂಗಳೂರು - 560001
ಅರ್ಜಿ ಇಲ್ಲಿದೆ: APPLICATION
ಅಧಿಕೃತ ನೋಟಿಫಿಕೇಶನ್ ಇಲ್ಲಿದೆ: NOTIFICATION
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 15, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ