KVS Recruitment 2023: ಈಗಾಗಲೇ ಕೇಂದ್ರೀಯ ವಿದ್ಯಾಲಯದಲ್ಲಿ(Kendriya Vidyalaya) ಶಿಕ್ಷಕರ ಬಂಪರ್ ನೇಮಕಾತಿ ನಡೆಯುತ್ತಿದೆ. ಇದರ ಮೂಲಕ ದೇಶಾದ್ಯಂತ ವಿವಿಧ ಶಾಲೆಗಳಲ್ಲಿ ಟಿಜಿಟಿ, ಪಿಜಿಟಿ, ಪಿಆರ್ಟಿ ಸೇರಿದಂತೆ ವಿವಿಧ ಶಿಕ್ಷಕರ ಒಟ್ಟು 13,404 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಕೇಂದ್ರೀಯ ವಿದ್ಯಾಲಯ ಅಸೋಸಿಯೇಷನ್ (Kendriya Vidyalaya Association) ಮತ್ತೊಂದು ಹೊಸ ನೇಮಕಾತಿಯನ್ನು ಪ್ರಕಟಿಸಿದೆ. ವಿಶೇಷವೆಂದರೆ ಈ ಹೊಸ ನೇಮಕಾತಿಯ(New Recruitment) ಮೂಲಕ 50 ವರ್ಷ ವಯಸ್ಸಿನ ಅಭ್ಯರ್ಥಿಗಳೂ ಸಹ ಸಂದರ್ಶನದ ಮೂಲಕ ಕೆಲಸ ಗಿಟ್ಟಿಸಿಕೊಳ್ಳಬಹುದು. ಈ ನೇಮಕಾತಿ ಯಾವ ಹುದ್ದೆಗೆ ನಡೆಯುತ್ತದೆ, ಯಾರು ಅರ್ಜಿ ಸಲ್ಲಿಸಬಹುದು ಎಂಬ ಎಲ್ಲಾ ಮಾಹಿತಿಗಾಗಿ ಇಲ್ಲಿ ಪರಿಶೀಲಿಸಿ.
ಸಂಸ್ಥೆ | ಕೇಂದ್ರೀಯ ವಿದ್ಯಾಲಯ ಅಸೋಸಿಯೇಷನ್ |
ಹುದ್ದೆ | ಡೆಪ್ಯೂಟಿ ಕಮಿಷನರ್ |
ವೇತನ | ₹ 78,800 - ₹ 2,09,202 |
ವಿದ್ಯಾರ್ಹತೆ | ಬಿ.ಎಡ್, ಪದವಿ |
ಆಯ್ಕೆ ಪ್ರಕ್ರಿಯೆ | ಸಂದರ್ಶನ |
ಅರ್ಜಿ ಸಲ್ಲಿಸಲು ಕೊನೆ ದಿನ | ಜನವರಿ 31, 2023 |
ಇದನ್ನೂ ಓದಿ: IIMB Recruitment 2022: ಅಕಾಡೆಮಿಕ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಹಾಕಿ-ತಿಂಗಳಿಗೆ 36,000 ಸಂಬಳ
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗೆ ಅರ್ಜಿ ನಮೂನೆಯನ್ನು ಅಧಿಸೂಚನೆಯ ಜೊತೆಗೆ ನೀಡಲಾಗಿದೆ. ನಿಗದಿತ ಮಾನದಂಡಗಳ ಪ್ರಕಾರ, ಅಭ್ಯರ್ಥಿಯು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ರೂ.2300/- ರ ಡಿಮ್ಯಾಂಡ್ ಡ್ರಾಫ್ಟ್ನೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಜಂಟಿ ಆಯುಕ್ತರು (ಆಡಳಿತ-I), ಕೇಂದ್ರೀಯ ವಿದ್ಯಾಲಯ ಸಂಘಟನೆ, 18, ಸಾಂಸ್ಥಿಕ ಪ್ರದೇಶ, ಶಹೀದ್ ಜೀತ್ ಸಿಂಗ್ ಮಾರ್ಗ, ನವದೆಹಲಿ-110016
ಜನವರಿ 31, 2023ರೊಳಗೆ ನಿಮ್ಮ ಅರ್ಜಿ ಈ ವಿಳಾಸಕ್ಕೆ ತಲುಪಿರಬೇಕು.
ವಿದ್ಯಾರ್ಹತೆ:
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸ್ನಾತಕೋತ್ತರ ಪದವಿಯೊಂದಿಗೆ ಬಿ.ಎಡ್ ಅಥವಾ ತತ್ಸಮಾನ ಪದವಿಯನ್ನು ಹೊಂದಿರಬೇಕು. ಅಲ್ಲದೆ ಸಹಾಯಕ ಆಯುಕ್ತರಾಗಿ 5 ವರ್ಷಗಳ ಅನುಭವ ಹೊಂದಿರಬೇಕು.
ಇದನ್ನೂ ಓದಿ: ESIC Karnataka: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಕೆಲಸ ಖಾಲಿ ಇದೆ- ಮಾಸಿಕ ವೇತನ 67,000
ವೇತನ ಎಷ್ಟು?
ನೇಮಕಗೊಂಡ ನಂತರ, ಅಭ್ಯರ್ಥಿಯು 7ನೇ ವೇತನ ಆಯೋಗದ ಅಡಿಯಲ್ಲಿ ₹ 78,800 ರಿಂದ ₹ 2,09,202 ರವರೆಗಿನ ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
ವಯೋಮಿತಿ:
ಈ ಹುದ್ದೆಗೆ ಗರಿಷ್ಠ ವಯೋಮಿತಿ 50 ವರ್ಷ. ಆದರೆ, ಕೇಂದ್ರೀಯ ವಿದ್ಯಾಲಯ ಸಂಘಟನೆಯ ನೌಕರರಿಗೆ ಯಾವುದೇ ಮಿತಿಯಿಲ್ಲ. ಮೀಸಲಾತಿ ಅನುಸಾರ OBC, SC, ST ಮತ್ತು ಮಾಜಿ ಉದ್ಯೋಗಿಗಳಿಗೆ ವಯಸ್ಸಿನ ಸಡಿಲಿಕೆಯನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿದ ನಂತರ, ಅರ್ಹ ಅಭ್ಯರ್ಥಿಗಳನ್ನು ದೆಹಲಿಯಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ