• Home
  • »
  • News
  • »
  • jobs
  • »
  • Government Job: M. Sc ಆಗಿದ್ರೆ ಬೆಂಗಳೂರಿನಲ್ಲಿದೆ ಸರ್ಕಾರಿ ಉದ್ಯೋಗ- ತಿಂಗಳಿಗೆ 30 ಸಾವಿರ ಸಂಬಳ

Government Job: M. Sc ಆಗಿದ್ರೆ ಬೆಂಗಳೂರಿನಲ್ಲಿದೆ ಸರ್ಕಾರಿ ಉದ್ಯೋಗ- ತಿಂಗಳಿಗೆ 30 ಸಾವಿರ ಸಂಬಳ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸೆಂಟ್ರಲ್ ಪವರ್ ರಿಸರ್ಚ್​ ಇನ್​ಸ್ಟಿಟ್ಯೂಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಮಂಡಳಿಯಿಂದ ಕಡ್ಡಾಯವಾಗಿ ಎಂಎಸ್ಸಿ ಪೂರ್ಣಗೊಳಿಸಿರಬೇಕು.

  • Share this:

    CPRI Recruitment 2022: ಸೆಂಟ್ರಲ್ ಪವರ್ ರಿಸರ್ಚ್​ ಇನ್​ಸ್ಟಿಟ್ಯೂಟ್​(Central Power Research Institute)ನಲ್ಲಿ ಒಂದು ರಿಸರ್ಚ್​ ಅಸೋಸಿಯೇಟ್(Research Associate) ಹುದ್ದೆ ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿ(Bengaluru)ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಡಿಸೆಂಬರ್ 16, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆಫ್​ಲೈನ್(Offline)​ನಲ್ಲಿ ಮೂಲಕ ಅರ್ಜಿ ಹಾಕಬೇಕು.


    ಹುದ್ದೆಯ ಮಾಹಿತಿ:

    ಸಂಸ್ಥೆಸೆಂಟರ್ ಪವರ್ ರಿಸರ್ಚ್​ ಇನ್​ಸ್ಟಿಟ್ಯೂಟ್
    ಹುದ್ದೆಯ ಹೆಸರುರಿಸರ್ಚ್​ ಅಸೋಸಿಯೇಟ್
    ಒಟ್ಟು ಹುದ್ದೆ1
    ಉದ್ಯೋಗದ ಸ್ಥಳಬೆಂಗಳೂರು
    ವೇತನಮಾಸಿಕ ₹ 30,000

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 16/12/2022


    ಅರ್ಹತಾ ಮಾನದಂಡಗಳೇನು?


    ಶೈಕ್ಷಣಿಕ ಅರ್ಹತೆ:
    ಸೆಂಟ್ರಲ್ ಪವರ್ ರಿಸರ್ಚ್​ ಇನ್​ಸ್ಟಿಟ್ಯೂಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಮಂಡಳಿಯಿಂದ ಕಡ್ಡಾಯವಾಗಿ ಎಂಎಸ್ಸಿ ಪೂರ್ಣಗೊಳಿಸಿರಬೇಕು.


    ವಯೋಮಿತಿ:
    ಸೆಂಟ್ರಲ್ ಪವರ್ ರಿಸರ್ಚ್​ ಇನ್​ಸ್ಟಿಟ್ಯೂಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 16, 2022ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು.


    ಇದನ್ನೂ ಓದಿ: Aadhar Card Jobs: ಡಿಗ್ರಿ ಪಾಸಾಗಿದ್ರೆ ಆಧಾರ್ ಕಾರ್ಡ್​ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ-ಬೆಂಗಳೂರಿನಲ್ಲಿ ಕೆಲಸ

    ಅರ್ಜಿ ಸಲ್ಲಿಸುವುದು ಹೇಗೆ?


    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


    ಮುಖ್ಯ ಆಡಳಿತಾಧಿಕಾರಿ
    ಸೆಂಟ್ರಲ್ ಪವರ್ ರಿಸರ್ಚ್​ ಇನ್​ಸ್ಟಿಟ್ಯೂಟ್ (CPRI)
    ಪೋಸ್ಟ್​ ಬಾಕ್ಸ್​ ನಂ.8066
    ಪ್ರೊ. ಸರ್ ಸಿ.ವಿ.ರಾಮನ್ ರೋಡ್
    ಸದಾಶಿವನಗರ ಪೋಸ್ಟ್ ಆಫೀಸ್
    ಬೆಂಗಳೂರು-560080


    ಅರ್ಜಿ ಇಲ್ಲಿದೆ:


    01-Research-Associate-Post-Application-Form-CPRI


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ

    Published by:Latha CG
    First published: