• Home
 • »
 • News
 • »
 • jobs
 • »
 • Government Job: 10th, PUC ಪಾಸಾಗಿದ್ರೆ ಭಾರತೀಯ ನೌಕಾಪಡೆಯಲ್ಲಿದೆ ಉದ್ಯೋಗ, ತಿಂಗಳಿಗೆ 30,000 ಸಂಬಳ

Government Job: 10th, PUC ಪಾಸಾಗಿದ್ರೆ ಭಾರತೀಯ ನೌಕಾಪಡೆಯಲ್ಲಿದೆ ಉದ್ಯೋಗ, ತಿಂಗಳಿಗೆ 30,000 ಸಂಬಳ

ಸಾಂದೆರ್ಭಿಕ ಚಿತ್ರ

ಸಾಂದೆರ್ಭಿಕ ಚಿತ್ರ

ಅರ್ಹ ಮತ್ತು ಆಸಕ್ತ ಆಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಡಿಸೆಂಬರ್ 17 ರವರೆಗೆ ಅರ್ಜಿ ಹಾಕಬಹುದು.

 • News18 Kannada
 • Last Updated :
 • New Delhi, India
 • Share this:

  Indian Navy Recruitment 2022: ಭಾರತೀಯ ನೌಕಾಪಡೆ(Indian Navy) ಖಾಲಿ ಇರುವ 1500 ಅಗ್ನಿವೀರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಉದ್ಯೋಗ(Central Government Jobs) ಅರಸುತ್ತಿರುವವರು ಹಾಗೂ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಲು ಬಯಸುತ್ತಿರುವವರು ಕೂಡಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. 10ನೇ ತರಗತಿ(SSLC Pass) ಹಾಗೂ ಪಿಯುಸಿ ಪಾಸಾದವರಿಗೆ ಇದು ಸುವರ್ಣಾವಕಾಶವಾಗಿದೆ. ಡಿಸೆಂಬರ್ 17, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


  ಅರ್ಹ ಮತ್ತು ಆಸಕ್ತ ಆಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಡಿಸೆಂಬರ್ 17 ರವರೆಗೆ ಅರ್ಜಿ ಹಾಕಬಹುದು. ಕೆಲಸ ಅರಸುತ್ತಿರುವ ಉದ್ಯೋಗಾಂಕ್ಷಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್​ಸೈಟ್ ಗೆ ಭೇಟಿ ನೀಡಿ ನೇರವಾಗಿ ಅರ್ಜಿ ಸಲ್ಲಿಸಬಹುದು.


  ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಭಾರತೀಯ ನೌಕಾಪಡೆ
  ಹುದ್ದೆಯ ಹೆಸರುಅಗ್ನಿವೀರ್
  ಒಟ್ಟು ಹುದ್ದೆ1500
  ಉದ್ಯೋಗದ ಸ್ಥಳಭಾರತ
  ವೇತನಮಾಸಿಕ ₹30,000


  ಹುದ್ದೆಯ ಮಾಹಿತಿ:
  ಅಗ್ನಿವೀರ್ (SSR)- 1400
  ಅಗ್ನಿವೀರ್ (MR)- 100


  ಅರ್ಹತಾ ಮಾನದಂಡಗಳೇನು?


  ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಏನಿರಬೇಕು?


  ಅಗ್ನಿವೀರ್ (SSR)- ಪಿಯುಸಿ ಪಾಸಾಗಿರಬೇಕು.
  ಅಗ್ನಿವೀರ್ (MR)- 10ನೇ ತರಗತಿ ಪಾಸಾಗಿರಬೇಕು.


  ಇದನ್ನೂ ಓದಿ: Karnataka Jobs: ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ 27 ಹುದ್ದೆಗಳಿಗೆ ಅರ್ಜಿ ಆಹ್ವಾನ- ಈಗಲೇ Apply ಮಾಡಿ


  ವಯೋಮಿತಿ ಎಷ್ಟಿರಬೇಕು?


  ಅಭ್ಯರ್ಥಿಗಳು 01/05/20022 ರಿಂದ 31/10/2005 ರೊಳಗೆ ಜನಿಸಿರಬೇಕು. ನಿಯಾವಳಿ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


  ಅರ್ಜಿ ಶುಲ್ಕ ಎಷ್ಟು?


  ಪರೀಕ್ಷಾ ಶುಲ್ಕ- 550 ರೂ. ಪಾವತಿಸಬೇಕು.
  ಆನ್​ಲೈನ್ ಮೂಲಕ ಅರ್ಜಿ ಶುಲ್ಕ ಕಟ್ಟಬೇಕು.


  ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ:

  ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?


  ದೈಹಿಕ ಸಾಮರ್ಥ್ಯ ಪರೀಕ್ಷೆ
  ವೈದ್ಯಕೀಯ ಪರೀಕ್ಷೆ
  ಲಿಖಿತ ಪರೀಕ್ಷೆ
  ಸಂದರ್ಶನ


  ಇದನ್ನೂ ಓದಿ: NIA Recruitment 2022: ರಾಷ್ಟ್ರೀಯ ತನಿಖಾ ದಳದಲ್ಲಿ ಡಿಗ್ರಿ ಪಾಸಾದವರಿಗೆ ಬಂಪರ್ ಉದ್ಯೋಗ- ತಿಂಗಳಿಗೆ 2 ಲಕ್ಷ ಸಂಬಳ


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08/12/2022
  ಅರ್ಜಿ ಸಲ್ಲಿಸಲು ಕೊನೆ ದಿನ: 17/12/2022

  Published by:Latha CG
  First published: