• Home
 • »
 • News
 • »
 • jobs
 • »
 • ESIC Recruitment 2023​: ನೌಕರರ ರಾಜ್ಯ ವಿಮಾ ನಿಗಮದಲ್ಲಿ 6400 ಹುದ್ದೆಗಳು ಖಾಲಿ

ESIC Recruitment 2023​: ನೌಕರರ ರಾಜ್ಯ ವಿಮಾ ನಿಗಮದಲ್ಲಿ 6400 ಹುದ್ದೆಗಳು ಖಾಲಿ

ESIC Recruitment

ESIC Recruitment

ನೌಕಕರ ರಾಜ್ಯ ವಿಮಾ ನಿಗಮದ 6400 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಚಿಂತನೆ ಇದೆ ಎಂದು ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಶನಿವಾರ ಹೇಳಿದ್ದಾರೆ. 2000ಕ್ಕೂ ಹೆಚ್ಚು ವೈದ್ಯರು ಮತ್ತು ಬೋಧಕ ಸಿಬ್ಬಂದಿಯ ಹುದ್ದೆಗಳಿವೆ.

 • Share this:

  ESIC Recruitment 2023: ನೌಕರರ ರಾಜ್ಯ ವಿಮಾ ನಿಗಮ(Employees' State Insurance Corporation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಿದೆ. ಉದ್ಯೋಗ(Job) ಹುಡುಕುತ್ತಿರುವ ಉದ್ಯೋಗಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಒಟ್ಟು 6400 ಕ್ಕೂ ಹೆಚ್ಚು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲೇ ನೋಟಿಫಿಕೇಶನ್ (Notification) ಬಿಡುಗಡೆ ಮಾಡಲಿದೆ.  ಹೀಗಾಗಿ ಯುವಕರು ಈಗಲೇ ಅಪ್ಲೈ ಮಾಡಿ.


  ನೌಕಕರ ರಾಜ್ಯ ವಿಮಾ ನಿಗಮದ 6400 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಚಿಂತನೆ ಇದೆ ಎಂದು ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಶನಿವಾರ ಹೇಳಿದ್ದಾರೆ. 2000ಕ್ಕೂ ಹೆಚ್ಚು ವೈದ್ಯರು ಮತ್ತು ಬೋಧಕ ಸಿಬ್ಬಂದಿಯ ಹುದ್ದೆಗಳಿವೆ.

  ಸಂಸ್ಥೆನೌಕರರ ರಾಜ್ಯ ವಿಮಾ ನಿಗಮ
  ಹುದ್ದೆಡಾಕ್ಟರ್ಸ್, ಬೋಧಕ ಸಿಬ್ಬಂದಿ
  ಒಟ್ಟು ಹುದ್ದೆ6400
  ನೋಟಿಫಿಕೇಶನ್ ಬಿಡುಗಡೆ ದಿನಾಂಕಇನ್ನೂ ನಿಗದಿಯಾಗಿಲ್ಲ
  ಉದ್ಯೋಗದ ಸ್ಥಳಭಾರತ

  10 ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭ:


  ಅರೆವೈದ್ಯಕೀಯ(ಪ್ಯಾರಾಮೆಡಿಕಲ್) ಉದ್ಯೋಗಗಳಿಗಾಗಿ ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲು ESIC ಕೆಲಸ ಮಾಡುತ್ತಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ. 10 ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.


  ಇದನ್ನೂ ಓದಿ: NIT ಕರ್ನಾಟಕದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ-50 ಸಾವಿರದವರೆಗೆ ಸಂಬಳ


  ದೇಶಾದ್ಯಂತ 100 ಹಾಸಿಗೆಗಳ 23 ಹೊಸ ಆಸ್ಪತ್ರೆಗಳ ನಿರ್ಮಾಣ:


  ನೌಕರರ ರಾಜ್ಯ ವಿಮಾ ನಿಗಮ 6400 ಹುದ್ದೆಗಳನ್ನು ಭರ್ತಿ ಮಾಡಲು ಯೋಜನೆ ರೂಪಿಸಿದೆ ಎಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಾದವ್ ಹೇಳಿದರು. ಇದರಲ್ಲಿ 2000 ಕ್ಕೂ ಹೆಚ್ಚು ವೈದ್ಯರು ಮತ್ತು ಬೋಧಕ ಸಿಬ್ಬಂದಿಯನ್ನು ಭರ್ತಿ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಶಕ್ತಿ ಉಪಕ್ರಮದ ಅಡಿಯಲ್ಲಿ ದೇಶಾದ್ಯಂತ 100 ಹಾಸಿಗೆಗಳ 23 ಹೊಸ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಯಾದವ್ ತಿಳಿಸಿದ್ದಾರೆ.


  ಇದನ್ನೂ ಓದಿ: Government Jobs: ಈ ವರ್ಷ 30 ಸಾವಿರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಹಾಕಿ- ಸಂಪೂರ್ಣ ಮಾಹಿತಿ ಇಲ್ಲಿದೆ


  ಅಕ್ಟೋಬರ್‌ನಲ್ಲಿ 11.82 ಲಕ್ಷ ಹೊಸ ಸದಸ್ಯರು ESIC ಯೋಜನೆಗೆ ಸೇರ್ಪಡೆ


  ESIC ಯೋಜನೆಯಲ್ಲಿ ಸದಸ್ಯರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಅಕ್ಟೋಬರ್‌ನಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಸುಮಾರು 11.82 ಲಕ್ಷ ಹೊಸ ಸದಸ್ಯರು ಸೇರಿದ್ದಾರೆ. ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿರುವ ಅಂಕಿಅಂಶಗಳಲ್ಲಿ ಈ ಮಾಹಿತಿ ನೀಡಲಾಗಿದೆ. ವರದಿಯ ಪ್ರಕಾರ, 2020-21ರಲ್ಲಿ 1.15 ಕೋಟಿ, 2019-20ರಲ್ಲಿ 1.51 ಕೋಟಿ ಮತ್ತು 2018-19ರಲ್ಲಿ 1.49 ಕೋಟಿಗೆ ಹೋಲಿಸಿದರೆ ESIC ಯಲ್ಲಿ ಒಟ್ಟು ಹೊಸ ದಾಖಲಾತಿಗಳ ಸಂಖ್ಯೆ 2021-22ರ ಆರ್ಥಿಕ ವರ್ಷದಲ್ಲಿ 1.49 ಕೋಟಿಗೆ ಏರಿಕೆಯಾಗಿದೆ.

  Published by:Latha CG
  First published: