• Home
  • »
  • News
  • »
  • jobs
  • »
  • ECIL Recruitment 2023: ಎಲೆಕ್ಟ್ರಾನಿಕ್ಸ್​ ಕಾರ್ಪೊರೇಷನ್​ನಲ್ಲಿ 200 ಹುದ್ದೆಗಳಿಗೆ ಅರ್ಜಿ ಆಹ್ವಾನ- ಜ.11ಕ್ಕೆ ಸಂದರ್ಶನ

ECIL Recruitment 2023: ಎಲೆಕ್ಟ್ರಾನಿಕ್ಸ್​ ಕಾರ್ಪೊರೇಷನ್​ನಲ್ಲಿ 200 ಹುದ್ದೆಗಳಿಗೆ ಅರ್ಜಿ ಆಹ್ವಾನ- ಜ.11ಕ್ಕೆ ಸಂದರ್ಶನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 25,000-31,000 ರೂ. ಸಂಬಳ ಕೊಡಲಾಗುತ್ತದೆ.

  • Share this:

ECIL Recruitment 2023: ಎಲೆಕ್ಟ್ರಾನಿಕ್ಸ್​ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್(Electronics Corporation of India Limited ECIL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 200 ಟೆಕ್ನಿಕಲ್ ಆಫೀಸರ್(Technical Officer) ಹುದ್ದೆಗಳು ಖಾಲಿ ಇವೆ. ಇದೇ ಜನವರಿ 11, 2023ರಂದು ಸಂದರ್ಶನ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಇಂಟರ್​ ವ್ಯೂಗೆ (Interview) ಹಾಜರಾಗಿ.


ಕೇಂದ್ರ ಸರ್ಕಾರದ ಹುದ್ದೆ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ ecil.co.in ಗೆ ಭೇಟಿ ನೀಡಬಹುದು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಎಲೆಕ್ಟ್ರಾನಿಕ್ಸ್​ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್
ಹುದ್ದೆಟೆಕ್ನಿಕಲ್ ಆಫೀಸರ್
ಒಟ್ಟು ಹುದ್ದೆ200
ವೇತನಮಾಸಿಕ 25,000-31,000 ರೂ.
ಉದ್ಯೋಗದ ಸ್ಥಳಭಾರತ

ವೇತನ:
ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 25,000-31,000 ರೂ. ಸಂಬಳ ಕೊಡಲಾಗುತ್ತದೆ.


ವಯೋಮಿತಿ:
ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಡಿ.31, 2023ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು.


ಇದನ್ನೂ ಓದಿ: Job Alert: ಕೊಪ್ಪಳ ಜಿ.ಪಂ.ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಾಳೆಯೊಳಗೆ ಅಪ್ಲೈ ಮಾಡಿ- ನೇರ ನೇಮಕಾತಿ


ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು - 3 ವರ್ಷ
SC/ST ಅಭ್ಯರ್ಥಿಗಳು -5 ವರ್ಷ
PWD ಅಭ್ಯರ್ಥಿಗಳು- 10 ವರ್ಷ


ವಿದ್ಯಾರ್ಹತೆ:
ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ CSE/IT/ECE/EEE/ಮೆಕ್ಯಾನಿಕಲ್​/ ಇನ್​ಸ್ಟ್ರುಮೆಂಟೇಶನ್​ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.


ಆಯ್ಕೆ ಪ್ರಕ್ರಿಯೆ:
ಶೈಕ್ಷಣಿಕ ಅರ್ಹತೆ
ಅನುಭವ
ಸಂದರ್ಶನ


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 05/01/2023
ಸಂದರ್ಶನ ನಡೆಯುವ ದಿನಾಂಕ: ಜನವರಿ 11, 2023


ಇದನ್ನೂ ಓದಿ: KSRLPS ನೇಮಕಾತಿ 2023: ಮಂಡ್ಯ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರದ ಹುದ್ದೆಗಳಿಗೆ ಅರ್ಜಿ ಆಹ್ವಾನ


 ಸಂದರ್ಶನ ನಡೆಯುವ ಸ್ಥಳ:


CED ಕಟ್ಟಡ
ಮುಖ್ಯ ಕಾರ್ಖಾನೆ
ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ECIL ಪೋಸ್ಟ್
ಹೈದರಾಬಾದ್ - 500062

Published by:Latha CG
First published: