DOT Recruitment 2023: ದೂರಸಂಪರ್ಕ ಇಲಾಖೆ (Department of Telecommunication) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಅಡಿಶನಲ್ ಚೀಫ್/ ಡೆಪ್ಯುಟಿ ಚೀಫ್ ಟೆಲಿಕಮ್ಯುನಿಕೇಷನ್ ಎಂಜಿನಿಯರ್ ಹುದ್ದೆಗಳು ಖಾಲಿ ಇವೆ. ಏಪ್ರಿಲ್ 26, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಆಫ್ಲೈನ್(Offline) ಮೂಲಕ ಅರ್ಜಿ ಹಾಕಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 26, 2023 (ಇಂದು)
ವಿದ್ಯಾರ್ಹತೆ:
ಟೆಲಿಕಮ್ಯುನಿಕೇಷನ್ ಡಿಪಾರ್ಟ್ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ CSE/ECE ವಿಭಾಗದಲ್ಲಿ ಬಿಇ/ ಬಿ.ಟೆಕ್ ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: NIMHANS Recruitment 2023: ತಿಂಗಳಿಗೆ 1 ಲಕ್ಷ ಸಂಬಳ- ಬೆಂಗಳೂರಿನಲ್ಲಿದೆ ಬಂಪರ್ ಉದ್ಯೋಗ
ವಯೋಮಿತಿ:
ಟೆಲಿಕಮ್ಯುನಿಕೇಷನ್ ಡಿಪಾರ್ಟ್ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 11, 2023ಕ್ಕೆ ಕನಿಷ್ಠ 32 ವರ್ಷ ಮತ್ತು ಗರಿಷ್ಠ 45 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ವೇತನ:
ನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳ:
ಬೆಂಗಳೂರು
ಇದನ್ನೂ ಓದಿ: RBI Recruitment 2023: ರಿಸರ್ವ್ ಬ್ಯಾಂಕ್ನಲ್ಲಿ ಕೆಲಸ ಖಾಲಿ ಇದೆ- ಮೇ 9 ರಿಂದ ಅರ್ಜಿ ಹಾಕಿ
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಟೆಲಿಕಮ್ಯುನಿಕೇಷನ್ ಡಿಪಾರ್ಟ್ಮೆಂಟ್ |
ಹುದ್ದೆ | ಅಡಿಶನಲ್ ಚೀಫ್/ ಡೆಪ್ಯುಟಿ ಚೀಫ್ ಟೆಲಿಕಮ್ಯುನಿಕೇಷನ್ ಎಂಜಿನಿಯರ್ |
ಒಟ್ಟು ಹುದ್ದೆ | 2 |
ವಿದ್ಯಾರ್ಹತೆ | ಬಿಇ/ಬಿ.ಟೆಕ್ |
ವೇತನ | ನಿಗದಿಪಡಿಸಿಲ್ಲ |
ಉದ್ಯೋಗದ ಸ್ಥಳ | ಬೆಂಗಳೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 26, 2023 (ಇಂದು) |
ಬಿಜೇಂದರ್ ಸಿಂಗ್
ದೂರಸಂಪರ್ಕ ಇಲಾಖೆ
419
ಸಾಚಾರ್ ಭವನ
20 ಅಶೋಕ ರಸ್ತೆ
ನವದೆಹಲಿ - 110001
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ