• ಹೋಂ
  • »
  • ನ್ಯೂಸ್
  • »
  • Jobs
  • »
  • Medical Jobs: ಬೆಂಗಳೂರಿನಲ್ಲಿ ವೆಟರಿನರಿ ಡಾಕ್ಟರ್ ಹುದ್ದೆಗಳಿಗೆ ಅರ್ಜಿ ಹಾಕಿ- ತಿಂಗಳಿಗೆ 75,000 ಸಂಬಳ

Medical Jobs: ಬೆಂಗಳೂರಿನಲ್ಲಿ ವೆಟರಿನರಿ ಡಾಕ್ಟರ್ ಹುದ್ದೆಗಳಿಗೆ ಅರ್ಜಿ ಹಾಕಿ- ತಿಂಗಳಿಗೆ 75,000 ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೇ ಮಾರ್ಚ್​ 1, 2023ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.

  • Share this:

CRPF Recruitment 2023: ಕೇಂದ್ರೀಯ ಮೀಸಲು ಪೊಲೀಸ್ ಪಡೆ(Central Reserve Police Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ವೆಟರಿನರಿ ಡಾಕ್ಟರ್ (Veterinary Doctor) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ (Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ಇದೇ ಮಾರ್ಚ್​ 1, 2023ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.


ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೇಂದ್ರೀಯ ಮೀಸಲು ಪೊಲೀಸ್ ಪಡೆ
ಹುದ್ದೆವೆಟರಿನರಿ ಡಾಕ್ಟರ್
ಒಟ್ಟು ಹುದ್ದೆ2
ವಿದ್ಯಾರ್ಹತೆಪದವಿ, B.V.Sc, M.V.Sc
ವೇತನಮಾಸಿಕ ₹ 75,000
ಉದ್ಯೋಗದ ಸ್ಥಳಬೆಂಗಳೂರು, ಕೃಷ್ಣಾ
ಸಂದರ್ಶನ ನಡೆಯುವ ದಿನಮಾರ್ಚ್​ 1, 2023

ವಿದ್ಯಾರ್ಹತೆ:
ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನೆಯಲ್ಲಿ ಪದವಿ ಮುಗಿಸಿರಬೇಕು ಮತ್ತು B.V.Sc, M.V.Sc ಪೂರ್ಣಗೊಳಿಸಿರಬೇಕು.


ಇದನ್ನೂ ಓದಿ: JOBS: ನಿಮ್ಮದು ಎಂಜಿನಿಯರಿಂಗ್ ಆಗಿದೆಯಾ? ಬೆಂಗಳೂರಿನಲ್ಲಿದೆ 42,000 ಸಂಬಳದ ಉದ್ಯೋಗ-ಈಗಲೇ ಅಪ್ಲೈ ಮಾಡಿ


ವಯೋಮಿತಿ:
ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್​ 1, 2023ಕ್ಕೆ ಗರಿಷ್ಠ 70 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 75,000 ಸಂಬಳ ಕೊಡಲಾಗುತ್ತದೆ.


ಉದ್ಯೋಗದ ಸ್ಥಳ:
ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತೆಲಂಗಾಣ(ಕೃಷ್ಣಾ), ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಇದನ್ನೂ ಓದಿ: Job Alert: ತಿಂಗಳಿಗೆ 1.77 ಲಕ್ಷ ಸಂಬಳ- ಪದವೀಧರರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ



ಸಂದರ್ಶನ ನಡೆಯುವ ಸ್ಥಳ
ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಮಾರ್ಚ್​ 1, 2023ರಂದು ಈ ಕೆಳಕಂಡ ಸ್ಥಳಗಳಲ್ಲಿ ಹಾಜರಿರಬೇಕು.


ಬೆಂಗಳೂರು ಘಟಕ- ಕಾಂಪೋಸಿಟ್ ಆಸ್ಪತ್ರೆ, CRPF, GC ಕ್ಯಾಂಪಸ್, ಯಲಹಂಕ, ಬೆಂಗಳೂರು, ಕರ್ನಾಟಕ-560064
ಕೃಷ್ಣಾ ಘಟಕ- ಕಾಂಪೋಸಿಟ್ ಆಸ್ಪತ್ರೆ, CRPF, GC ಕ್ಯಾಂಪಸ್, ಹೈದರಾಬಾದ್, ಚಂದ್ರಯಾನ್ ಗುಟ್ಟಾ, PO-ಕೇಶೋಗಿರಿ, ತೆಲಂಗಾಣ-500005


ಪ್ರಮುಖ ದಿನಾಂಕಗಳು
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 13/02/2023
ಸಂದರ್ಶನ ನಡೆಯುವ ದಿನ: ಮಾರ್ಚ್​ 1, 2023

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು