• ಹೋಂ
  • »
  • ನ್ಯೂಸ್
  • »
  • Jobs
  • »
  • CPRI Recruitment 2023: ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ; ತಿಂಗಳಿಗೆ 1.12 ಲಕ್ಷ ರೂ. ಸಂಬಳ

CPRI Recruitment 2023: ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ; ತಿಂಗಳಿಗೆ 1.12 ಲಕ್ಷ ರೂ. ಸಂಬಳ

 CPRI Recruitment 2023

CPRI Recruitment 2023

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 24 ಮಾರ್ಚ್ 2023 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14 ಏಪ್ರಿಲ್ 2023.  

  • Share this:

ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CPRI) ಹಲವು ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗಾಗಿ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಖಾಲಿ ಇರುವ ಒಟ್ಟು 99 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. cpri.res.in ನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 24 ಮಾರ್ಚ್ 2023 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14 ಏಪ್ರಿಲ್ 2023.  

ಹುದ್ದೆಖಾಲಿ ಇರುವ ಸ್ಥಾನಗಳುವೇತನ
ತಂತ್ರಜ್ಞ24 ಹುದ್ದೆಗಳುರೂ 19,900 - ರೂ 63,200
ಇಂಜಿನಿಯರಿಂಗ್ ಅಧಿಕಾರಿ ಗ್ರೇಡ್​ 140 ಹುದ್ದೆಗಳುರೂ 44,900 - ರೂ 1,42,400
ಸಹಾಯಕ ಗ್ರೇಡ್ 218 ಹುದ್ದೆಗಳುರೂ 25,500 - ರೂ 81,100
ಎಂಜಿನಿಯರಿಂಗ್ ಸಹಾಯಕ13 ಹುದ್ದೆಗಳುರೂ 35,400 - ರೂ 1,12,400
ವೈಜ್ಞಾನಿಕ ಸಹಾಯಕ4 ಹುದ್ದೆಗಳುರೂ 35,400 - ರೂ 1,12,400

ಪ್ರಮುಖ ದಿನಾಂಕಗಳು


ಅರ್ಜಿ ಪ್ರಕ್ರಿಯೆಯ ಪ್ರಾರಂಭದ ದಿನಾಂಕ: 24 ಮಾರ್ಚ್ 2023


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಏಪ್ರಿಲ್ 2023


ವಿಶೇಷ ಸೂಚನೆ: 


ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್​ ಮಾಡಿ.


ಅಪ್ಲಿಕೇಶನ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.


CPRI ನೇಮಕಾತಿಗೆ ಅಗತ್ಯವಾದ ಅರ್ಹತೆ


ತಂತ್ರಜ್ಞ ಗ್ರೇಡ್ 1- ಎಲೆಕ್ಟ್ರಿಕಲ್‌ನಲ್ಲಿ ITI ಟ್ರೇಡ್ ಪ್ರಮಾಣಪತ್ರವನ್ನು ಹೊಂದಿರಬೇಕು.


ಇಂಜಿನಿಯರಿಂಗ್ ಅಧಿಕಾರಿ ಗ್ರೇಡ್​ 1- ಎಲೆಕ್ಟ್ರಿಕಲ್ ಇಂಜಿನಿಯರಿಂಗ್ / ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ / ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್ / ಮೆಕ್ಯಾನಿಕಲ್ ಇಂಜಿನಿಯರಿಂಗ್ / ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಮಾಡಿರಬೇಕು.  2021 ಅಥವಾ 2022 ಅಥವಾ 2023 ರ ಮಾನ್ಯವಾದ ಗೇಟ್ ಸ್ಕೋರ್ ಇರಬೇಕು.


ಅಸಿಸ್ಟೆಂಟ್ ಗ್ರೇಡ್ II- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪ್ರಥಮ ದರ್ಜೆಯೊಂದಿಗೆ BA/ B.Sc. / B.Com/ BBA / BBM / BCA ಮತ್ತು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ (NIELIT) ಯಿಂದ ಬೇಸಿಕ್ ಕಂಪ್ಯೂಟರ್ ಕೋರ್ಸ್‌ನಲ್ಲಿ (BCC) ಕನಿಷ್ಠ ಗ್ರೇಡ್-ಬಿ ಪ್ರಮಾಣಪತ್ರವನ್ನು ಹೊಂದಿರಬೇಕು.




 ಅರ್ಜಿ ಶುಲ್ಕ


ಇಂಜಿನಿಯರಿಂಗ್ ಅಧಿಕಾರಿ Gr.1, ವೈಜ್ಞಾನಿಕ ಸಹಾಯಕ, ಇಂಜಿನಿಯರಿಂಗ್ ಸಹಾಯಕರಿಗೆ ಅರ್ಜಿ ಶುಲ್ಕ - ರೂ.1000


ತಂತ್ರಜ್ಞ , ಸಹಾಯಕ  ಹುದ್ದೆಗಳಿಗೆ ಅರ್ಜಿ ಶುಲ್ಕ - ರೂ.500/-


SC/ST/PWBD/ಮಾಜಿ ಸೈನಿಕ/ಮಹಿಳಾ ಅಭ್ಯರ್ಥಿಗಳು ಮತ್ತು CPRI ವಿಭಾಗದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

First published: