Cochin Shipyard Recruitment 2023: ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (Cochin Shipyard Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಸ್ಟೋರ್ ಕೀಪರ್, ಅಡ್ಮಿನ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಪಿಯುಸಿ ಮತ್ತು ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಇದೇ ಮೇ 29, 2023ರಂದು ಸಂದರ್ಶನ (Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉಡುಪಿಯಲ್ಲಿ (Udupi) ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ |
ಹುದ್ದೆ | ಸ್ಟೋರ್ ಕೀಪರ್, ಅಡ್ಮಿನ್ ಅಸಿಸ್ಟೆಂಟ್ |
ಒಟ್ಟು ಹುದ್ದೆ | 3 |
ವಿದ್ಯಾರ್ಹತೆ | ಪಿಯುಸಿ, ಪದವಿ |
ವೇತನ | ಮಾಸಿಕ ₹ 18,000-25,000 |
ಉದ್ಯೋಗದ ಸ್ಥಳ | ಉಡುಪಿ |
ಸಂದರ್ಶನ ನಡೆಯುವ ದಿನ | ಮೇ 29, 2023 |
ವಿದ್ಯಾರ್ಹತೆ:
ಸ್ಟೋರ್ ಕೀಪರ್- 12ನೇ ತರಗತಿ
ಅಡ್ಮಿನ್ ಅಸಿಸ್ಟೆಂಟ್- ಪದವಿ
ವಯೋಮಿತಿ:
ಸ್ಟೋರ್ ಕೀಪರ್- 58 ವರ್ಷದೊಳಗೆ
ಅಡ್ಮಿನ್ ಅಸಿಸ್ಟೆಂಟ್- 35 ವರ್ಷದೊಳಗೆ
ಉದ್ಯೋಗದ ಸ್ಥಳ:
ಉಡುಪಿ
ಇದನ್ನೂ ಓದಿ: Job Alert: ಭಾರತ್ ಡೈನಾಮಿಕ್ಸ್ ಲಿಮಿಟೆಡ್ನಲ್ಲಿ 100 ಹುದ್ದೆಗಳು ಖಾಲಿ- ಬೆಂಗಳೂರಿನಲ್ಲಿ ಪೋಸ್ಟಿಂಗ್
ವೇತನ:
ಸ್ಟೋರ್ ಕೀಪರ್- ತಿಂಗಳಿಗೆ 25 ಸಾವಿರ
ಅಡ್ಮಿನ್ ಅಸಿಸ್ಟೆಂಟ್- ತಿಂಗಳಿಗೆ 18 ಸಾವಿರ
ಆಯ್ಕೆ ಪ್ರಕ್ರಿಯೆ:
ಕ್ವಾಲಿಫಿಕೇಶನ್
ಅನುಭವ
ಸಂದರ್ಶನ
ಇಂಟರ್ವ್ಯೂ ನಡೆಯುವ ಸ್ಥಳ:
ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್
ಬಾಪುತೋಟ ವೇರ್‌ಹೌಸ್ ಕಾಂಪ್ಲೆಕ್ಸ್
ಮಲ್ಪೆ
ಉಡುಪಿ
ಕರ್ನಾಟಕ - 576108
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 19/05/2023
ಸಂದರ್ಶನ ನಡೆಯುವ ದಿನ: ಮೇ 29, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ