• Home
  • »
  • News
  • »
  • jobs
  • »
  • CISF Recruitment 2022: ಉದ್ಯೋಗಾಕಾಂಕ್ಷಿಗಳೇ ಅಲರ್ಟ್, ಸರ್ಕಾರಿ ಕೆಲಸ ಖಾಲಿ ಇದೆ - ₹69,100 ಸಂಬಳ

CISF Recruitment 2022: ಉದ್ಯೋಗಾಕಾಂಕ್ಷಿಗಳೇ ಅಲರ್ಟ್, ಸರ್ಕಾರಿ ಕೆಲಸ ಖಾಲಿ ಇದೆ - ₹69,100 ಸಂಬಳ

ಕೂಡಲೇ ಅರ್ಜಿ ಸಲ್ಲಿಸಿ

ಕೂಡಲೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ನವೆಂಬರ್ 21ರಿಂದ ಆರಂಭವಾಗಿದ್ದು, ಡಿಸೆಂಬರ್ 20ಕ್ಕೆ ಮುಕ್ತಾಯವಾಗಲಿದೆ. ಈ ನೇಮಕಾತಿಯ ಮೂಲಕ 787 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

  • Share this:

ಉನ್ನತ ವ್ಯಾಸಂಗ ಮಾಡಿದವರಿಗೂ ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ಅನೇಕ ನಿರುದ್ಯೋಗಿಗಳು ಅವಕಾಶಗಳಿಗಾಗಿ ಹುಡುಕುತ್ತಿದ್ದಾರೆ. ಅಂತಹ ನಿರುದ್ಯೋಗಿಗಳಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಂತಸದ ಸುದ್ದಿ ನೀಡಿದೆ. ಕಾನ್ಸ್​​ಟೇಬಲ್ ಹುದ್ದೆಗಳಿಗೆ (CISF Recruitment) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ cisfrectt.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ನವೆಂಬರ್ 21ರಿಂದ ಆರಂಭವಾಗಿದ್ದು, ಡಿಸೆಂಬರ್ 20ಕ್ಕೆ ಮುಕ್ತಾಯವಾಗಲಿದೆ. ಈ ನೇಮಕಾತಿಯ ಮೂಲಕ 787 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

  ಸಂಸ್ಥೆಯ ಹೆಸರು  ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ
ಹುದ್ದೆಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಕಾನ್ಸ್‌ಟೇಬಲ್
ಒಟ್ಟು ಹುದ್ದೆಗಳ ಸಂಖ್ಯೆ787
ವಯೋಮಿತಿ 18 ರಿಂದ 23 ವರ್ಷಗಳು
ವಿದ್ಯಾರ್ಹತೆ 10 ನೇ ತರಗತಿ ಅಥವಾ ಅದಕ್ಕೆ ಸಮಾನವಾದ ಕೋರ್ಸ್‌ನಲ್ಲಿ ಉತ್ತೀರ್ಣ
ಅರ್ಜಿ ಸಲ್ಲಿಕೆ ಕೊನೆ ದಿನಾಂಕ  ಡಿಸೆಂಬರ್​ 20, 2022
ಅಧಿಕೃತ ವೆಬ್‌ ಸೈಟ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್​ ಮಾಡಿ  

ಅರ್ಹತೆಯ ಮಾನದಂಡಗಳು


1) ಒಬ್ಬರು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಅಥವಾ ಅದಕ್ಕೆ ಸಮಾನವಾದ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.


2) ಆಗಸ್ಟ್ 1, 2022 ರಂತೆ ಅಭ್ಯರ್ಥಿಗಳ ವಯಸ್ಸು 18 ರಿಂದ 23 ವರ್ಷಗಳ ನಡುವೆ ಇರಬೇಕು.


ಇದನ್ನೂ ಓದಿ: SECL Recruitment: ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ: ಇಲ್ಲಿ ಅರ್ಜಿ ಸಲ್ಲಿಸಿ


ನೇಮಕಾತಿ ವಿಧಾನ: ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್/ದೈಹಿಕ ದಕ್ಷತೆ ಪರೀಕ್ಷೆ, ದಾಖಲೀಕರಣ, ವೈದ್ಯಕೀಯ ಪರೀಕ್ಷೆಯಂತಹ ಬಹು ಹಂತದ ನೇಮಕಾತಿ ಪ್ರಕ್ರಿಯೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


ವೇತನ ಮತ್ತು ಸೌಲಭ್ಯ 


ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ 21,700 ರಿಂದ 69,100 ರೂ. ಪಡೆಯುತ್ತಾರೆ. ಜನವರಿ 1, 2004 ರಂದು ಅಥವಾ ನಂತರ ಕೇಂದ್ರ ಸರ್ಕಾರಕ್ಕೆ ಸೇರಿದ ಎಲ್ಲಾ ಉದ್ಯೋಗಿಗಳು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.


ಅಪ್ಲಿಕೇಶನ್ ಸಲ್ಲಿಸುವ ವಿಧಾನ


ಮೊದಲು CISF ಅಧಿಕೃತ ವೆಬ್‌ಸೈಟ್ http://https://cisfrectt.in/ ಗೆ ಭೇಟಿ ನೀಡಿ.


ಮುಖಪುಟದಲ್ಲಿ, ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಿ


ನಂತರ ಕಾನ್‌ಸ್ಟೆಬಲ್ ಟ್ರೇಡ್ಸ್‌ಮ್ಯಾನ್-2022 ಲಿಂಕ್ ಅನ್ನು ಕ್ಲಿಕ್ ಮಾಡಿ.


ಅದರ ನಂತರ ನೋಂದಣಿ ಸಂಖ್ಯೆ, ಪಾಸ್ವರ್ಡ್ ನಮೂದಿಸಬೇಕು.


ಅಗತ್ಯವಿರುವ ಎಲ್ಲಾ ವಿವರಗಳೊಂದಿಗೆ ಅರ್ಜಿಯನ್ನು ಪೂರ್ಣಗೊಳಿಸಿ, ನಂತರ ಪಾವತಿ ಮಾಡಿ.


ಶುಲ್ಕ ವಿವರ: UR, OBC, EWS ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕ 100 ರೂ. ಪಾವತಿಸಬೇಕು. ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST), ಮಾಜಿ ಸೈನಿಕರು (ESM) ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.


ನೆನಪಿನಲ್ಲಿಡಿ: ಅಪ್ಲಿಕೇಶನ್ ಸಾಫ್ಟ್ ಕಾಪಿಯನ್ನು ಡೌನ್‌ಲೋಡ್ ಮಾಡಿ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು