CIMAP Recruitment 2023: ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಪ್ಲಾಂಟ್ಸ್ (Central Institute of Medicinal & Aromatic Plants) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಮೇ 31, 2023ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಲ್ಲಿ (Bengaluru) ಸಂದರ್ಶನ ( Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಪ್ಲಾಂಟ್ಸ್ |
ಹುದ್ದೆ | ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಅಸೋಸಿಯೇಟ್ |
ಒಟ್ಟು ಹುದ್ದೆ | 9 |
ವಿದ್ಯಾರ್ಹತೆ | ಡಾಕ್ಟರಲ್ ಪದವಿ, ಎಂ.ಎಸ್ಸಿ |
ವೇತನ | ಮಾಸಿಕ ₹ 25,000-42,000 |
ಉದ್ಯೋಗದ ಸ್ಥಳ | ಬೆಂಗಳೂರು |
ಸಂದರ್ಶನ ನಡೆಯುವ ದಿನ | ಮೇ 31, 2023 |
ಇದನ್ನೂ ಓದಿ: NIT ಕರ್ನಾಟಕದಲ್ಲಿ ಕೆಲಸ ಖಾಲಿ ಇದೆ- ಆಸಕ್ತರು ಇಂದೇ ಅರ್ಜಿ ಹಾಕಿ
ವಿದ್ಯಾರ್ಹತೆ:
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ - ಡಾಕ್ಟರಲ್ ಪದವಿ
ಪ್ರಾಜೆಕ್ಟ್ ಅಸೋಸಿಯೇಟ್-I/II- ಎಂ.ಎಸ್ಸಿ
ವಯೋಮಿತಿ:
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ - 40 ವರ್ಷ
ಪ್ರಾಜೆಕ್ಟ್ ಅಸೋಸಿಯೇಟ್-I/II- 35 ವರ್ಷ
ವಯೋಮಿತಿ ಸಡಿಲಿಕೆ:
SC/ST/ PWD/ ಮಹಿಳಾ ಅಭ್ಯರ್ಥಿಗಳು- 5 ವರ್ಷ
OBC (NCL) ಅಭ್ಯರ್ಥಿಗಳು- 3 ವರ್ಷ
ವೇತನ:
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ - ಮಾಸಿಕ ₹ 42,000
ಪ್ರಾಜೆಕ್ಟ್ ಅಸೋಸಿಯೇಟ್-I/II- ಮಾಸಿಕ ₹ 25,000-35,000
ಇದನ್ನೂ ಓದಿ: FDA & ಟ್ಯಾಕ್ಸ್ ಆಫೀಸರ್ ಹುದ್ದೆಗಳ ಭರ್ತಿ- ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಬಂಪರ್ ನೇಮಕಾತಿ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಉದ್ಯೋಗದ ಸ್ಥಳ:
ಬೆಂಗಳೂರು
ಸಂದರ್ಶನ ನಡೆಯುವ ಸ್ಥಳ:
CSIR-CIMAP ಸಂಶೋಧನಾ ಕೇಂದ್ರ
ಬೆಂಗಳೂರು
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 22/05/2023
ಸಂದರ್ಶನ ನಡೆಯುವ ದಿನ: ಮೇ 31, 2023 ಬೆಳಗ್ಗೆ 10 ಗಂಟೆಗೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ