• Home
  • »
  • News
  • »
  • jobs
  • »
  • ಮೈಸೂರಿನ CFTRI ನಲ್ಲಿ M.Sc ಆದವರಿಗೆ ಕೆಲಸ- ಅರ್ಜಿ ಹಾಕಲು ನಾಳೆಯೇ ಕೊನೆ ದಿನ

ಮೈಸೂರಿನ CFTRI ನಲ್ಲಿ M.Sc ಆದವರಿಗೆ ಕೆಲಸ- ಅರ್ಜಿ ಹಾಕಲು ನಾಳೆಯೇ ಕೊನೆ ದಿನ

CFTRI

CFTRI

ಅಭ್ಯರ್ಥಿಗಳ ವಯಸ್ಸು ಜನವರಿ 7, 2023ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

  • Share this:

CFTRI Recruitment 2023: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು(Central Food Technological Research Institute) ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು ಒಂದು ಪ್ರಾಜೆಕ್ಟ್​ ಅಸೋಸಿಯೇಟ್-1 (Project Associate-1) ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ(Mysuru) ಪೋಸ್ಟಿಂಗ್ ನೀಡಲಾಗುತ್ತದೆ. ಅರಮನೆ ನಗರಿಯಲ್ಲಿ ವೃತ್ತಿ ಮಾಡಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ.


ಅರ್ಜಿ ಸಲ್ಲಿಸಲು ಜನವರಿ 7, ಅಂದರೆ ನಾಳೆಯೇ ಕೊನೆಯ ದಿನವಾಗಿದ್ದು, ಆಸಕ್ತರು ಈ ಕೂಡಲೇ ಅಪ್ಲಿಕೇಶನ್ ಹಾಕಿ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್​ಸೈಟ್​ cftri.res.in ಭೇಟಿ ಕೊಡಿ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು.

ಸಂಸ್ಥೆಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ
ಹುದ್ದೆಪ್ರಾಜೆಕ್ಟ್​ ಅಸೋಸಿಯೇಟ್-1
ಒಟ್ಟು ಹುದ್ದೆ1
ವೇತನಮಾಸಿಕ ₹ 25,000
ಉದ್ಯೋಗದ ಸ್ಥಳಮೈಸೂರು
ವಿದ್ಯಾರ್ಹತೆಎಂಎಸ್ಸಿ

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಕೆಮಿಸ್ಟ್ರಿ/ಬಯೋ ಕೆಮಿಸ್ಟ್ರಿ/ ಫುಡ್​ ಸೈನ್ಸ್​ & ಟೆಕ್ನಾಲಜಿ/ ಫುಡ್​ ಸೈನ್ಸ್​ & ನ್ಯೂಟ್ರಿಶನ್​ ವಿಭಾಗದಲ್ಲಿ ಎಂಎಸ್ಸಿ ಪೂರ್ಣಗೊಳಿಸಿರಲೇಬೇಕು.


ಅಭ್ಯರ್ಥಿಗಳ ವಯಸ್ಸು ಜನವರಿ 7, 2023ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಅರ್ಜಿದಾರರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.


ಪ್ರಾಜೆಕ್ಟ್​ ಅಸೋಸಿಯೇಟ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ತಿಂಗಳಿಗೆ ₹ 25,000 ಸಂಬಳ ಕೊಡಲಾಗುತ್ತದೆ.


ಆನ್​ಲೈನ್​ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.


ಶಾರ್ಟ್​ ಲಿಸ್ಟ್​ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಇ-ಮೇಲ್ ಮಾಡುವ ಮೂಲಕ ಇಂಟರ್​​ ವ್ಯೂ ನಡೆಯುವ ಸ್ಥಳವನ್ನು ತಿಳಿಸಲಾಗುವುದು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು