CSB Recruitment 2023: ಸೆಂಟ್ರಲ್ ಸಿಲ್ಕ್ ಬೋರ್ಡ್(Central Silk Board) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 ಜಂಟಿ ಕಾರ್ಯದರ್ಶಿ (Joint Secretary) ಮತ್ತು ಜಂಟಿ ನಿರ್ದೇಶಕ (Joint Director) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 5, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಆಸಕ್ತರು ಆಫ್ಲೈನ್/ ಪೋಸ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗ ಪಡೆಯಲು ತಡಮಾಡದೇ ಈಗಲೇ ಅರ್ಜಿ ಹಾಕಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಸೆಂಟ್ರಲ್ ಸಿಲ್ಕ್ ಬೋರ್ಡ್ |
ಹುದ್ದೆ | ಜಂಟಿ ಕಾರ್ಯದರ್ಶಿ , ಜಂಟಿ ನಿರ್ದೇಶಕ |
ಒಟ್ಟು ಹುದ್ದೆ | 8 |
ವಿದ್ಯಾರ್ಹತೆ | ಪದವಿ, ಸ್ನಾತಕೋತ್ತರ ಪದವಿ |
ವೇತನ | ಮಾಸಿಕ ₹ 78,800-2,09,200 |
ಉದ್ಯೋಗದ ಸ್ಥಳ | ಬೆಂಗಳೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 5, 2023 |
ಇದನ್ನೂ ಓದಿ: Banking Jobs: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಕೆಲಸ ಖಾಲಿ ಇದೆ- ಈಗಲೇ ರೆಸ್ಯೂಮ್ ಕಳುಹಿಸಿ
ವಿದ್ಯಾರ್ಹತೆ:
ಜಂಟಿ ಕಾರ್ಯದರ್ಶಿ (ಟೆಕ್ನಿಕಲ್)- ಪದವಿ, ಸ್ನಾತಕೋತ್ತರ ಪದವಿ
ಜಂಟಿ ನಿರ್ದೇಶಕ (ಅಡ್ಮಿನಿಸ್ಟ್ರೇಶನ್)- ಪದವಿ
ಡೆಪ್ಯುಟಿ ಡೈರೆಕ್ಟರ್ (ಆಫೀಸ್ ಲಾಂಗ್ವೇಜ್)- ಡಿಪ್ಲೊಮಾ, ಸ್ನಾತಕೋತ್ತರ ಪದವಿ
ಡೆಪ್ಯುಟಿ ಡೈರೆಕ್ಟರ್ (ಫೈನಾನ್ಸ್)- ಸಿಎ, ಎಂಬಿಎ, ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಡೈರೆಕ್ಟರ್ (ಆಫೀಸ್ ಲಾಂಗ್ವೇಜ್)- ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಡೈರೆಕ್ಟರ್ (ಸ್ಟಾಟಿಸ್ಟಿಕ್ಸ್)- ಪದವಿ
ಅಸಿಸ್ಟೆಂಟ್ ಡೈರೆಕ್ಟರ್ (ಪಬ್ಲಿಸಿಟಿ)- ಡಿಪ್ಲೊಮಾ, ಡಿಗ್ರಿ
ವೇತನ:
ಜಂಟಿ ಕಾರ್ಯದರ್ಶಿ (ಟೆಕ್ನಿಕಲ್)- ಮಾಸಿಕ ₹ 78,800-2,09,200
ಜಂಟಿ ನಿರ್ದೇಶಕ (ಅಡ್ಮಿನಿಸ್ಟ್ರೇಶನ್)- ಮಾಸಿಕ ₹ 78,800-2,09,200
ಡೆಪ್ಯುಟಿ ಡೈರೆಕ್ಟರ್ (ಆಫೀಸ್ ಲಾಂಗ್ವೇಜ್)- ಮಾಸಿಕ ₹ 67,700-2,08,700
ಡೆಪ್ಯುಟಿ ಡೈರೆಕ್ಟರ್ (ಫೈನಾನ್ಸ್)- ಮಾಸಿಕ ₹ 67,700-2,08,700
ಅಸಿಸ್ಟೆಂಟ್ ಡೈರೆಕ್ಟರ್ (ಆಫೀಸ್ ಲಾಂಗ್ವೇಜ್)- ಮಾಸಿಕ ₹ 56,100-1,77,500
ಅಸಿಸ್ಟೆಂಟ್ ಡೈರೆಕ್ಟರ್ (ಸ್ಟಾಟಿಸ್ಟಿಕ್ಸ್)- ಮಾಸಿಕ ₹ 56,100-1,77,500
ಅಸಿಸ್ಟೆಂಟ್ ಡೈರೆಕ್ಟರ್ (ಪಬ್ಲಿಸಿಟಿ)- ಮಾಸಿಕ ₹ 56,100-1,77,500
ಇದನ್ನೂ ಓದಿ: KIOCL Jobs: ತಿಂಗಳಿಗೆ 2 ಲಕ್ಷ ಸಂಬಳ-ಬೆಂಗಳೂರಿನಲ್ಲಿ ಉದ್ಯೋಗ, ಆಸಕ್ತರು ಈಗಲೇ ಅಪ್ಲೈ ಮಾಡಿ
ವಯೋಮಿತಿ:
ಸೆಂಟ್ರಲ್ ಸಿಲ್ಕ್ ಬೋರ್ಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 5, 2023ಕ್ಕೆ ಗರಿಷ್ಠ 56 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಸದಸ್ಯ ಕಾರ್ಯದರ್ಶಿ
ಕೇಂದ್ರ ರೇಷ್ಮೆ ಮಂಡಳಿ
ಸಿಎಸ್‌ಬಿ ಕಾಂಪ್ಲೆಕ್ಸ್
ಬಿ.ಟಿ.ಎಂ. ಲೇಔಟ್
ಮಡಿವಾಳ
ಹೊಸೂರು ರಸ್ತೆ
ಬೆಂಗಳೂರು - 560068
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 5, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ