Byjus Off Campus Drive 2023: ಭಾರತದ ಬಹುರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ಕಂಪನಿಯಾದ ಬೈಜೂಸ್(Byjus ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆಫ್ ಕ್ಯಾಂಪಸ್ ಡ್ರೈವ್(Off Campus Drive) ನಡೆಸುತ್ತಿದೆ. ಭಾರತದಾದ್ಯಂತ ಬ್ಯುಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್(Business Development Associate) ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಈ ಹುದ್ದೆಗಳಿಗೆ ಫ್ರೆಶರ್ಸ್ ಅರ್ಜಿ ಹಾಕಬಹುದು.
ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಬೈಜೂಸ್ |
ಹುದ್ದೆ | ಬ್ಯುಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ಅನುಭವ | ಫ್ರೆಶರ್ |
ವಿದ್ಯಾರ್ಹತೆ | ಪದವಿ/ ಸ್ನಾತಕೋತ್ತರ ಪದವಿ |
ವೇತನ | ವಾರ್ಷಿಕ ಪ್ಯಾಕೇಜ್ 7.5-8.5 ಲಕ್ಷ |
ಸಂದರ್ಶನವು ಜೂಮ್ ಪ್ಲಾಟ್ಫಾರ್ಮ್ ಮೂಲಕ ಆನ್ಲೈನ್ನಲ್ಲಿ ನಡೆಯುತ್ತದೆ (zoom.us/download).
ಅಭ್ಯರ್ಥಿಗಳು ದಯವಿಟ್ಟು ತಾಳ್ಮೆಯಿಂದಿರಿ ಮತ್ತು ಕರೆ ಸ್ವೀಕರಿಸುವವರೆಗೆ ಕಾಯಿರಿ. ಈ ಸಂದರ್ಶನವು ಬ್ಯುಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಸೇಲ್ಸ್ ಪ್ರೊಫೈಲ್ನ ರೋಲ್ಗಾಗಿ ಮಾತ್ರ. ನೀವು ಬೇರೆ ಯಾವುದೇ ಪ್ರೊಫೈಲ್ನಲ್ಲಿ ಆಸಕ್ತಿ ಹೊಂದಿದ್ದರೆ ಪ್ರಕ್ರಿಯೆಯಲ್ಲಿ ವಿಳಂಬವಾಗಬಹುದು.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೆಲಸದ ದಿನಗಳು- 6 ದಿನ (ಶನಿವಾರ & ಭಾನುವಾರ ಕೆಲಸ ಮಾಡುವುದು ಕಡ್ಡಾಯ)
ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ/ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: KPSC Recruitment: 5ನೇ ತರಗತಿ ಪಾಸಾಗಿದ್ರೆ 50 ಸಾವಿರ ಸಂಬಳ-ಇಲ್ಲಿದೆ ಸರ್ಕಾರಿ ಉದ್ಯೋಗ
ವೇತನ:
ಬ್ಯುಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಹುದ್ದೆಗೆ ಆಯ್ಕೆಯಾಗುವ ವ್ಯಕ್ತಿಗೆ ವಾರ್ಷಿಕ ಪ್ಯಾಕೇಜ್ 7.5-8.5 ಲಕ್ಷ ಕೊಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ